ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸಿದ್ದರಾಮಯ್ಯರಿಂದ ಡೇವಿಸ್ ಕಪ್' ವೇಳಾಪಟ್ಟಿ ಪ್ರಕಟ

By Mahesh

ಬೆಂಗಳೂರು, ಸೆ.11: ಭಾರತ ಹಾಗೂ ಸೆರ್ಬಿಯಾ ದೇಶಗಳ ನಡುವೆ ನಡೆಯಲಿರುವ ಡೇವಿಸ್ ಕಪ್ ಹಣಾಹಣಿಯ ಆಟಗಾರರ ಆಯ್ಕೆ ಡ್ರಾ, ಪಂದ್ಯದ ವೇಳಾಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಕ್ಕಿ ಡಿಪ್ ಎತ್ತುವ ಮೂಲಕ ಪ್ರಕಟಿಸಿದರು.

ನಾಳೆಯಿಂದ ನಗರದಲ್ಲಿ ಆರಂಭವಾಗಲಿರುವ ಭಾರತ-ಸರ್ಬಿಯಾ ನಡುವಿನ ಡೇವಿಸ್‍ಕಪ್ ಟೆನ್ನಿಸ್ ಟೂರ್ನಿಯ ಆಟಗಾರರ ಆಯ್ಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಮುಂಭಾಗದಲ್ಲಿಂದು ಚಾಲನೆ ನೀಡಿದರು. ಲಕ್ಕಿ ಡಿಪ್ ಮೂಲಕ ಮುಖ್ಯಮಂತ್ರಿಯವರು ಆಟಗಾರರನ್ನು ಆಯ್ಕೆ ಮಾಡಿದರು.

ಉಭಯ ದೇಶಗಳ ಟೆನಿಸ್ ತಂಡಗಳ ನಡುವಿನ ವಿಶ್ವಗುಂಪಿನ ಡೇವಿಎಸ್ ಕಪ್ ಪ್ಲೇ ಆಫ್ ಪಂದ್ಯ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ (KSLTA)ಕೋರ್ಟಿನಲ್ಲಿ ಸೆ.12ರಿಂದ ಸೆ.14ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ.

ವೇಳಾಪಟ್ಟಿ ಪ್ರಕಟಿಸಿದ ಸಿಎಂ ಸಿದ್ದರಾಮಯ್ಯ

ವೇಳಾಪಟ್ಟಿ ಪ್ರಕಟಿಸಿದ ಸಿಎಂ ಸಿದ್ದರಾಮಯ್ಯ

*ಮೊದಲ ದಿನ ಸೆ. 12 (ಸಿಂಗಲ್ಸ್) ಯೂಕಿ ಭಾಂಬ್ರಿ vs ಲುಶಾನ್ ನಾಡ್ಲೋವಿಕ್(3 PM) ಮತ್ತು ಸೋಮ್ ದೇವ್ ದೇವ್ ವರ್ಮನ್ vs ಫಿಲಿಫ್ ಕರ್ಜೋನೋವಿಕ್

ವಿಧಾನಸೌಧದ ಮುಂದೆ ನಡೆದ ಸಮಾರಂಭ

ವಿಧಾನಸೌಧದ ಮುಂದೆ ನಡೆದ ಸಮಾರಂಭ

* ಎರಡನೇ ದಿನ ಸೆ.13(ಡಬಲ್ಸ್) ರೋಹನ್ ಬೋಪಣ್ಣ, ಲಿಯಾಂಡರ್ ಪೇಸ್ vs ಇಲ್ಜಾ ಬೋಸೋಲ್ಜಾಕ್ ನೆನಾದ್ ಜಿಮೊಂಜಿಕ್

ಪೇಸ್ ಭೇಟಿ ಮಾಡಿದ ಸಿದ್ದರಾಮಯ್ಯ

ಪೇಸ್ ಭೇಟಿ ಮಾಡಿದ ಸಿದ್ದರಾಮಯ್ಯ

* ಮೂರನೇ ದಿನ ಸೆ.14:(ರಿವರ್ಸ್ ಸಿಂಗಲ್ಸ್) ಸೋಮ್ ದೇವ್ ದೇಚ್ ವರ್ಮನ್ vs ಲುಶಾನ್ ನಾಡ್ಲೊವಿಕ್ ಹಾಗೂ ಯೂಕಿ ಭಾಂಬ್ರಿ vs ಫಿಲಿಫ್ ಕರ್ಜೋನೋವಿಕ್ ನಡುವೆ ಪಂದ್ಯ ನಡೆಯಲಿದೆ.

ಆಟಗಾರರಿಗೆ ಶುಭಹಾರೈಸಿದ ಸಿದ್ದರಾಮಯ್ಯ

ಆಟಗಾರರಿಗೆ ಶುಭಹಾರೈಸಿದ ಸಿದ್ದರಾಮಯ್ಯ

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪಂದ್ಯಾವಳಿಗೆ ಎಲ್ಲ ರೀತಿಯ ನೆರವು ಹಾಗೂ ಸಹಕಾರವನ್ನು ಸರ್ಕಾರ ನೀಡಲಿದೆ ಎಂದು ಕ್ರೀಡಾಪಟುಗಳನ್ನು ಹಾರೈಸಿದರು. ಈ ಸಂದರ್ಭದಲ್ಲಿ ಸಚಿವ ದಿನೇಶ್ ಗುಂಡೂರಾವ್, ಮಾಜಿ ಉಪಮುಖ್ಯಮಂತ್ರಿ ಅಶೋಕ್, ಅಖಿಲ ಭಾರತ ಟೆನ್ನಿಸ್ ಸಂಸ್ಥೆ ಅಧ್ಯಕ್ಷ ಅನಿಲ್ ಖನ್ನಾ ಮತ್ತಿತರರು ಜತೆಗಿದ್ದರು.

ಡೇವಿಸ್ ಕಪ್ ಗೆ ಭಾರತದ ಟೆನಿಸ್ ಪಟುಗಳು

ಡೇವಿಸ್ ಕಪ್ ಗೆ ಭಾರತದ ಟೆನಿಸ್ ಪಟುಗಳು

ಯೂಕಿ ಭಾಂಬ್ರಿ, ಸೋಮದೇವ್ ದೇವರ್ ಮನ್, ಟೀಂ ನಾಯಕ ಆನಂದ್ ಅಮೃತ್ ರಾಜ್ , ಲಿಯಾಂಡರ್ ಪೇಸ್ ಹಾಗೂ ರೋಹನ್ ಬೋಪಣ್ಣ ಅವರು ಬೆಂಗಳೂರಿನ ಕೆಎಸ್ ಎಲ್ ಟಿಎ ಸ್ಟೇಡಿಯಂನಲ್ಲಿ PTI Photo by Shailendra Bhojak

ಅಭ್ಯಾಸ ನಿರತ ಸೆರ್ಬಿಯಾ ಆಟಗಾರರು

ಅಭ್ಯಾಸ ನಿರತ ಸೆರ್ಬಿಯಾ ಆಟಗಾರರು

ಕಬ್ಬನ್ ಪಾರ್ಕ್ ನಲ್ಲಿರುವ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಅಭ್ಯಾಸ ನಿರತ ಸೆರ್ಬಿಯಾ ಆಟಗಾರರು

ಅಭ್ಯಾಸ ನಿರತ ಲಿಯಾಂಡರ್ ಪೇಸ್

ಅಭ್ಯಾಸ ನಿರತ ಲಿಯಾಂಡರ್ ಪೇಸ್

ಅಭ್ಯಾಸ ನಿರತ ಖ್ಯಾತ ಆಟಗಾರ ಲಿಯಾಂಡರ್ ಪೇಸ್. ಪೇಸ್ ಅವರು ಏಷ್ಯನ್ ಗೇಮ್ಸ್ ಗೆ ಹೋಗುತ್ತಿಲ್ಲ ಎಂಬ ಸುದ್ದಿಯನ್ನು ಈಗಾಗಲೇ ಓದಿರಬಹುದು, ಇಲ್ಲದಿದ್ದರೆ ಲಿಂಕ್ ಇಲ್ಲಿದೆ ಓದಿ

ವಿಶ್ವದ ನಂ.1 ಆಟಗಾರ ಜೋಕೊವಿಕ್ ಬರ್ತಾ ಇಲ್ಲ

ವಿಶ್ವದ ನಂ.1 ಆಟಗಾರ ಜೋಕೊವಿಕ್ ಬರ್ತಾ ಇಲ್ಲ

ವಿಶ್ವದ ನಂ.1 ಆಟಗಾರ ಜೋಕೊವಿಕ್ ಬೆಂಗಳೂರಿಗೆ ಬರ್ತಾ ಇಲ್ಲ ಎಂಬ ಸುದ್ದಿ ಕರ್ನಾಟಕ ಟೆನಿಸ್ ಅಸೋಸಿಯೇಷನ್ ತಡವಾಗಿ ಪ್ರಕಟಿಸಿದ್ದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಇತ್ತೀಚೆಗೆ ಯುಎಸ್ ಓಪನ್ ನ ಸೆಮಿಫೈನಲ್ಸ್ ನಲ್ಲಿ ಜಪಾನ್ ಆಟಗಾರ ಕೀ ನಿಶಿಕೋರಿ ವಿರುದ್ಧ ಸೋಲು ಕಂಡಿದ್ದನ್ನು ಅರಗಿಸಿಕೊಳ್ಳಲಾಗದ ಜೋಕೋವಿಕ್ ಅವರು ಭಾರತದಲ್ಲಿ ಡೇವಿಸ್ ಕಪ್ ಆಡುವುದನ್ನು ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X