ವಿಶ್ವದ ನಂಬರ್​ 1 ಶ್ರೀಕಾಂತ್ ಬೆಳ್ಳಿ ಪದಕಕ್ಕೆ ತೃಪ್ತಿ!

Posted By:
CWG 2018 : Badminton Lee Chong Wei beats Kidambi Srikanth takes 3rd CWG Gold

ಗೋಲ್ಡ್ ಕೋಸ್ಟ್, ಏಪ್ರಿಲ್ 15: ಕಾಮನ್​ವೆಲ್ತ್​ ಗೇಮ್ಸ್​ನ ಮಹಿಳೆಯರ ಸಿಂಗಲ್ಸ್ ನಲ್ಲಿ ಭಾರತಕ್ಕೆ ಚಿನ್ನ ಹಾಗೂ ಬೆಳ್ಳಿ ಸಿಕ್ಕ ಖುಷಿಯಲ್ಲೇ ವಿಶ್ವದ ನಂಬರ್ 01 ಆಟಗಾರ, ಭಾರತದ ಕಿಡಂಬಿ ಶ್ರೀಕಾಂತ್ ಅವರು ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಿತ್ತು. ಆದರೆ,
ಪುರುಷರ ಬ್ಯಾಡ್ಮಿಂಟನ್​ ಸಿಂಗಲ್ಸ್​ ಫೈನಲ್​ ಪಂದ್ಯದಲ್ಲಿ ಲೀ ಚಾಂಗ್​ ವೀ ವಿರುದ್ಧ ಶ್ರೀಕಾಂತ್​ ಸೋಲು ಕಂಡು, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

ಇಂಗ್ಲೆಂಡಿನ ಲೀ ಚಾಂಗ್​ ಮೊದಲ ಎರಡು ಸೆಟ್​ಗಳಲ್ಲಿ 19-21, 21-14 ಮೂಲಕ ಇಬ್ಬರೂ ಒಂದೊಂದು ಸೆಟ್​ ಗೆದ್ದಿದ್ದರು, ಅಂತಿಮ ಸೆಟ್ 21-14 ಅಂತರದಲ್ಲಿ ಲೀ ಚಾಂಗ್ ಜಯ ಸಾಧಿಸಿದರು. ಒಲಂಪಿಕ್ಸ್ ನಲ್ಲಿ ಮೂರು ಬೆಳ್ಳಿ ಪದಕ ವಿಜೇತ, ವಿಶ್ವ ನಂ.7ನೇ ಆಟಗಾರ ಲೀ ಚಾಂಗ್ ಅವರು ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.

ನಾಲ್ಕು ವರ್ಷಗಳ ಹಿಂದೆ ಕಿಡಂಬಿ ಶ್ರೀಕಾಂತ್ ಅವರು ಮೊದಲ ಬಾರಿಗೆ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಸ್ಪರ್ಧಿಸಿದ್ದರು. ಕಿಡಂಬಿ ಶ್ರೀಕಾಂತ್​ ಅವರು ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದರು. ಆದರೆ, ಇತ್ತೀಚೆಗೆ ವಿಶ್ವದ ನಂಬರ್ 01 ಆಟಗಾರ ಎನಿಸಿಕೊಂಡ 25 ವರ್ಷದ ಕಿಡಂಬಿ ಶ್ರೀಕಾಂತ್ ಅವರು ಎರಡನೇ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿಯೇ ಬೆಳ್ಳಿ ಪದಕ ಪಡೆದಿರುವುದು ಸಾಧನೆ.

Story first published: Sunday, April 15, 2018, 12:06 [IST]
Other articles published on Apr 15, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ