ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

CWG 2022: ಬ್ಯಾಡ್ಮಿಂಟನ್‌ನಲ್ಲಿ ಭಾರತ ಐತಿಹಾಸಿಕ ಸಾಧನೆ: ಡಬಲ್ಸ್‌ನಲ್ಲಿಯೂ ಚಿನ್ನ ಗೆದ್ದ ಭಾರತ

VWG 2022: After PV Sindhu and Lakshya Sen men doubles pair Chira and Sathwik also won Gold

ಕಾಮನ್‌ವೆಲ್ತ್ ಗೇಮ್ಸ್‌ನ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತ ಐತಿಕಾಸಿಕ ಸಾಧನೆ ಮಾಡಿದೆ. ಪಿವಿ ಸಿಂಧು, ಲಕ್ಷ್ಯಸೇನ್ ಬಳಿಕ ಭಾರತ ಮತ್ತೊಂದು ಚಿನ್ನದ ಪದಕ ಗೆದ್ದಿದೆ. ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಜೋಡಿ ಫೈನಲ್‌ನಲ್ಲಿ ಗೆಲ್ಲುವ ಮೂಲಕ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ದೊರೆತಿದೆ.

ಇದಕ್ಕೂ ಮುನ್ನ ಭಾರತದ ಪರವಾಗಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪಿವಿ ಸಿಂಧು ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. ಅದಾದ ಬಳಿಕ ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯಸೇನ್ ಕೂಡ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದರು. ಇದೀಗ ಡಬಲ್ಸ್ ವಿಭಾಗದಲ್ಲಿಯೂ ಭಾರತ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಈ ಮೂಲಕ ಈ ಬಾರಿಯ ಕಾಮನ್‌ವೆಲ್ತರ್ ಗೇಮ್ಸ್‌ನಲ್ಲಿ ಭಾರತ ಗೆದ್ದ ಚಿನ್ನದ ಪದಕಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.

ಸಾತ್ವಿಕ್ ಹಾಗೂ ಚಿರಾಗ್‌ಗೆ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಬೆನ್ ಲೇನ್ ಹಾಗೂ ಸೀನ್ ವೆಂಡಿ ಜೋಡಿ ಎದುರಾಳಿಯಾಗಿತ್ತು. ಈ ಜೋಡಿಯ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಭಾರತದ ಆಟಗಾರರು ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದ್ದಾರೆ. 21-15 21-13 ಅಂಕಗಳಿಂದ ಭಾರತದ ಜೋಡಿ ಫೈನಲ್‌ನಲ್ಲಿ ಎದುರಾಳಿಯನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಗೋಲ್ಡ್‌ಕೋಸ್ಟ್‌ನಲ್ಲಿ ಬೆಳ್ಳಿ ಗೆದ್ದಿದ್ದ ಈ ಜೋಡಿ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಈ ಬಾರಿಯ ಬ್ಯಾಡ್ಮಿಂಟನ್‌ನಲ್ಲಿ ಭಾರತ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.

ಚಿನ್ನ ಗೆದ್ದ ಪಿವಿ ಸಿಂಧು: ಇದಕ್ಕೂ ಮುನ್ನ ಭಾರತದ ಪಿವಿ ಸಿಂಧು ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕದ ಬೇಟೆಯನ್ನು ಆರಂಭಿಸಿದರು. ಬ್ಯಾಡಿಂಟನ್ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಭಾರತದ ಪಿ.ವಿ ಸಿಂಧು ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ನೇರ ಗೇಮ್‌ಗಳಿಂದ ಗೆಲ್ಲುವ ಮೂಲಕ ಸ್ವರ್ಣ ಪದಕ ಜಯಿಸಿದ್ದರು.

ಲಕ್ಷ್ಯಸೇನ್ ಗೆ ಸ್ವರ್ಣ ಪದಕ: ಅದಾದ ಬಳಿಕ ಮಲೇಷ್ಯಾದ ಆಟಗಾರನ ವಿರುದ್ಧ ಭಾರತದ 20ರ ಹರೆಯದ ಯುವ ಆಟಗಾರ ಲಕ್ಷ್ಯಸೇನ್ 19-21, 21-9, 21-16 ಅಂತರದಿಂದ ಗೆಲುವು ಸಾಧಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಮಲೇಶಿಯಾದ ಯಂಗ್ ವಿರುದ್ಧ ಮೊದಲ ಗೇಮ್ಸ್‌ನಲ್ಲಿ ಸೋಲು ಅನುಭವಿಸಿದರೂ ಬಳಿಕ ಅದ್ಭುತವಾಗಿ ತಿರುಗಿಬಿದ್ದು ಚಿನ್ನದ ಪದಕವನ್ನು ಖಚಿತಪಡಿಸಿದರು.

11ನೇ ಅಥವಾ ಅಂತಿಮ ದಿನದಲ್ಲಿ ಭಾರತಕ್ಕೆ ಬಂದ ಪದಕಗಳು:

4 ಚಿನ್ನದ ಪದಕಗಳು: ಪಿವಿ ಸಿಂಧು (ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್), ಲಕ್ಷ್ಯ ಸೇನ್ (ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್), ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ / ಚಿರಾಗ್ ಶೆಟ್ಟಿ (ಪುರುಷರ ಡಬಲ್ಸ್ ಬ್ಯಾಡ್ಮಿಂಟನ್), ಅಚಂತಾ ಶರತ್ ಕಮಲ್ (ಪುರುಷರ ಟೇಬಲ್ ಟೆನಿಸ್ ಸಿಂಗಲ್ಸ್)
1 ಬೆಳ್ಳಿ ಪದಕ : ಭಾರತೀಯ ಪುರುಷರ ಹಾಕಿ ತಂಡ
1 ಕಂಚಿನ ಪದಕ : ಜಿ ಸಂಥಿಯಾನ್ (ಪುರುಷರ ಸಿಂಗಲ್ಸ್ ಟೇಬಲ್ ಟೆನಿಸ್)

Story first published: Monday, August 8, 2022, 18:54 [IST]
Other articles published on Aug 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X