ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಡೆನ್ಮಾರ್ಕ್ ಓಪನ್: 2ನೇ ಸುತ್ತಿಗೆ ಲಗ್ಗೆಯಿಟ್ಟ ಲಕ್ಷ್ಯ ಸೇನ್, ಪ್ರಣಯ್

Denmark Open 2022: Lakshya Sen and HS Prannoy entered into 2nd round

ಒಡೆನ್ಸ್‌ನಲ್ಲಿ ನಡೆದ ಡೆನ್ಮಾರ್ಕ್ ಓಪನ್ ಸೂಪರ್ 750 ಟೂರ್ನಮೆಂಟ್‌ನಲ್ಲಿ ಭಾರತದ ಲಕ್ಷ್ಯ ಸೇನ್ ಮತ್ತು ಹೆಚ್‌ಎಸ್ ಪ್ರಣಯ್ ಗೆಲುವಿನೊಂದಿಗೆ ತಮ್ಮ ಅಭಿಯಾನ ಆರಂಭಿಸಿದ್ದಾರೆ. ಶ್ರೇಯಾಂಕ ರಹಿತ ಲಕ್ಷ್ಯ ಸೇನ್ ಭರ್ಜರಿ ಪ್ರದರ್ಶನ ನೀಡಿ ವಿಶ್ವದ ನಂ. 6 ಆಟಗಾರ ಆಂಟನಿ ಗಿಂಟಿಂಗ್ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸಿದರು. ಮತ್ತೊಂದೆಡೆ ಎಚ್‌ ಎಸ್ ಪ್ರಣಯ್ ಅವರು ವಿಶ್ವ ಚಾಂಪಿಯನ್‌ ಶಿಪ್‌ನ ಕಂಚಿನ ಪದಕ ವಿಜೇತ ಚೀನಾದ ಜಾವೊ ಜುನ್ ಪೆಂಗ್ ಅವರ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯಗಳಲ್ಲಿ ನೇರ ಗೇಮ್‌ಗಳಲ್ಲಿ ಮಣಿಸಿದರು.

ಆದರೆ ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಮಹಿಳೆಯರ ಸಿಂಗಲ್ಸ್‌ನಲ್ಲಿ ಮೊದಲ ಸುತ್ತಿನಲ್ಲಿಯೇ ಸೋತು ನಿರ್ಗಮಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಆರಂಭಿಕ ಸುತ್ತಿನಲ್ಲಿ ಸೋತ ನಂತರ ಉತ್ತಮ ಪುನರಾಗಮನದ ಹೊರತಾಗಿಯೂ ಸೈನಾ 3 ಪಂದ್ಯಗಳಲ್ಲಿ ಚೀನಾದ ಜಾಂಗ್ ಯಿ ಮಾನ್ ವಿರುದ್ಧ ಸೋಲು ಅನುಭವಿಸಿದ್ದಾರೆ. ಅನುಭವಿ ಶಟ್ಲರ್ ಇತ್ತೀಚಿನ ದಿನಗಳಲ್ಲಿ ಅತ್ಯುನ್ನತ ಮಟ್ಟದಲ್ಲಿ ಸ್ಥಿರತೆಯನ್ನು ಕಂಡುಕೊಳ್ಳಲು ಸಾಧ್ಯವಾಗದ ಕಾರಣ ಮತ್ತೊಮ್ಮೆ ಹಿನ್ನಡೆ ಅನುಭವಿಸುವಂತಾಗಿದೆ.

ಬಿಸಿಸಿಐ 36ನೇ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ಅಧಿಕೃತ ಆಯ್ಕೆ: AGMನಲ್ಲಿ ಮಹತ್ವದ ನಿರ್ಧಾರಬಿಸಿಸಿಐ 36ನೇ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ಅಧಿಕೃತ ಆಯ್ಕೆ: AGMನಲ್ಲಿ ಮಹತ್ವದ ನಿರ್ಧಾರ

ವಿಪರ್ಯಾಸವೆಂದರೆ ಗುರುವಾರ ನಡೆಯಲಿರುವ ಅಖಿಲ ಭಾರತೀಯ ಪುರುಷರ ಸಿಂಗಲ್ಸ್ ಎರಡನೇ ಸುತ್ತಿನಲ್ಲಿ ಲಕ್ಷ್ಯ ಸೇನ್ ಹಾಗೂ ಎಚ್‌ಎಸ್ ಪ್ರಣಯ್ ಮುಖಾಮುಖಿಯಾಗಬೇಕಿದೆ. 2022 ರಲ್ಲಿ ಐದನೇ ಬಾರಿಗೆ ಇಬ್ಬರು ಭಾರತೀಯ ಶಟ್ಲರ್‌ಗಳು ಪರಸ್ಪರ ಮುಖಾಮುಖಿಯಾಗುತ್ತಿದ್ದಾರೆ.

ಕುತೂಹಲಕಾರಿ ಅಂಶವೆಂದರೆ ಆಗಸ್ಟ್‌ನಲ್ಲಿ ಟೋಕಿಯೊದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪ್ರಣಯ್ ಪ್ರಿ- ಕ್ವಾರ್ಟರ್‌ ಫೈನಲ್‌ನಲ್ಲಿ ಲಕ್ಷ್ಯ ಅವರನ್ನು ಸೋಲಿಸಿದರು. ಜೂನ್‌ನಲ್ಲಿ ನಡೆದ ಇಂಡೋನೇಷ್ಯಾ ಓಪನ್‌ನಲ್ಲಿ ಪ್ರಣಯ್ ಲಕ್ಷ್ಯ ಸೇನ್ ಅವರನ್ನು ಸೋಲಿಸಿದ್ದರೆ, ವರ್ಷದ ಆರಂಭದಲ್ಲಿ ನಡೆದ ಜರ್ಮನ್ ಓಪನ್ ಮತ್ತು ಇಂಡಿಯಾ ಓಪನ್‌ನಲ್ಲಿ ಪ್ರಣಯ್ ಅವರನ್ನು ಲಕ್ಷ್ಯ ಸೇನ್ ಸೋಲಿಸಿದ್ದರು.

ಮಂಗಳವಾರ ಒಡೆನ್ಸ್‌ನಲ್ಲಿ ನಡೆದ ಡೆನ್ಮಾರ್ಕ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಕಿಡಂಬಿ ಶ್ರೀಕಾಂತ್ ಹಾಂಕಾಂಗ್‌ನ ಎನ್‌ಜಿ ಕಾ ಲಾಂಗ್ ಆಂಗಸ್ ಅವರನ್ನು ಎದುರಿಸಿದ್ದಾರೆ. ಈ ಪೈಪೋಟಿಯ ಪಂದ್ಯದಲ್ಲಿ ಗೆಲುವು ಸಾಧಿಸಿದ ಕಿಡಂಬಿ ಶ್ರೀಕಾಂತ್ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಐದು ವರ್ಷಗಳ ಹಿಂದೆ ಅವರು ಚಾಂಪಿಯನ್ ಪಟ್ಟಕ್ಕೇರಿದ್ದ ತಾಣದಲ್ಲಿಯೇ ಕಣಕ್ಕಿಳಿದ 2021 ರ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ಶ್ರೀಕಾಂತ್ ಹಾಗೂ ಹಾಂಕಾಂಗ್‌ನ ಎನ್‌ಜಿ ಕಾ ಲಾಂಗ್ ಆಂಗಸ್ ವರುದ್ಧದ ಹೋರಾಟ 56 ನಿಮಿಷಗಳ ಕಾಲ ಸಾಗಿತು. ಈ ಪೈಪೋಟಿಯ ಪಂದ್ಯದಲ್ಲಿ ಶ್ರೀಕಾಂತ್ 17-21 21-14 21-12 ಅಂತರದಿಂದ ಗೆಲುವು ಸಾಧಿಸಿದ್ದಾರೆ.

T20 World Cup: ಅಭ್ಯಾಸ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ ಆಕಾಶ್ ಚೋಪ್ರಾT20 World Cup: ಅಭ್ಯಾಸ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ ಆಕಾಶ್ ಚೋಪ್ರಾ

ಮತ್ತೊಂದೆಡೆ ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತರಾದ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಅವರು ತಮ್ಮ ಮಹಿಳೆಯರ ಡಬಲ್ಸ್ ಆರಂಭಿಕ ಪಂದ್ಯದಲ್ಲಿ ಡೆನ್ಮಾರ್ಕ್‌ನ ಅಲೆಕ್ಸಾಂಡ್ರಾ ಬೋಜೆ ಮತ್ತು ಅಮಾಲಿ ಮೆಗೆಲುಂಡ್ ಅವರನ್ನು 21-15 21-15 ರಿಂದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದರು. ಭಾರತದ ಈ ಜೋಡಿ ಎರಡನೇ ಸುತ್ತಿನಲ್ಲಿ ಆರನೇ ಶ್ರೇಯಾಂಕದ ಜೊಂಗ್‌ಕೋಲ್ಫಾನ್ ಕಿತ್ತಿತಾರಾಕುಲ್ ಮತ್ತು ಥಾಯ್ಲೆಂಡ್‌ನ ರವಿಂದ ಪ್ರಜೊಂಗ್‌ಜೈ ಅವರನ್ನು ಎದುರಿಸಲಿದೆ

Story first published: Wednesday, October 19, 2022, 23:58 [IST]
Other articles published on Oct 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X