ಭಾರತದ ಪುರುಷರ ಡಬಲ್ಸ್ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಫ್ರೆಂಚ್ ಓಪನ್‌ನ ಸೆಮಿಫೈನಲ್ ಪ್ರವೇಶ ಪಡೆದಿದ್ದಾರೆ. ಏಳನೇ ಶ್ರೇಯಾಂಕದ ಜೋಡಿ ಜಪಾನ್‌ನ ಅಗ್ರ ಶ್ರೇಯಾಂಕದ ಟಕುರೊ ಹಾಕಿ ಮತ್ತು ಯುಗೊ ಕೊಬಯಾಶಿ ಅವರನ್ನು 23-21, 21-18 ಅಂತರದಿಂದ ಮಣಿಸಿದರು. ಶನಿವಾರ ನಡೆಯಲಿರುವ ಸೆಮಿಫೈನಲ್ ಸೆಣೆಸಾಟದಲ್ಲಿ ದಕ್ಷಿಣ ಕೊರಿಯಾದ ಶ್ರೇಯಾಂಕರಹಿತ ಚೋಯ್ ಸೋಲ್-ಗ್ಯು ಮತ್ತು ಕಿಮ್ ವಾನ್-ಹೊ ಜೋಡಿಯನ್ನು ಎದುರಿಸಲಿದ್ದಾರೆ.
ಪಂದ್ಯದ ಆರಂಭದಲ್ಲಿಯೇ ಉತ್ತಮ ಹೋರಾಟವನ್ನು ಪ್ರದರ್ಶಿಸುವ ಮೂಲಕ ಪೈಪೋಟಿಯ ಆರಂಭ ಪಡೆಯಿತು. ಭಾರತದ ಜೋಡಿಯು ವಿರಾಮದ ವೇಳೆಗೆ 11-9 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು. ಇನ್ನು ಮೊದಲ ಗೇಮ್‌ನ ದ್ವಿತೀಯಾರ್ಧದಲ್ಲಿ ಜಪಾನ್ ಜೋಡಿ ಕಠಿಣ ಹೋರಾಟ ನೀಡಿತಾದರೂ ಭಾರತೀಯ ಜೋಡಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು.
17-15 ಅಂತರದ ಬಳಿಕ ಭಾರತದ ಜೋಡಿ ಮುಂದಿನ ಮೂರು ಅಂಕಗಳನ್ನು ತಮ್ಮದಾಗಿಸಿಕೊಂಡು 20-15 ಅಂಕಗಳ ಮೂಲಕ ಮೇಲುಗೈ ಸಾಧಿಸಿತು. ಆದರೆ ನಂತರದ ಐದು ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟಿದ್ದರಿಂದ ಕಠಿಣ ಪರಿಸ್ಥಿತಿ ಎದುರಿಸಿದೆ. ನಂತರ ಭಾರತದ ಜೋಡಿ 22-21 ಮುನ್ನಡೆ ಪಡೆಯಲು ಯಶಸ್ವಿಯಾದರು. ಜಪಾನಿ ಜೋಡಿ ತಪ್ಪು ಮಾಡಿದ ಕಾರಣ ಅಂತಿಮವಾಗಿ ಅಂಕವನ್ನು ತನ್ನ ವಶಕ್ಕೆ ಪಡೆಯುವಲ್ಲಿ ಭಾರತದ ಜೋಡಿ ಯಶಸ್ವಿಯಾಯಿತು.
ಇನ್ನು ಎರಡನೇ ಗೇಮ್ ಕೂಡ ಸಾಕಷ್ಟು ಪೈಪೋಟಿಯಿಂದ ಕೂಡಿತ್ತು. ಪಾಯಿಂಟ್ 7-7 ಆಗಿದ್ದಾಗ ಸತತ ಮೂರು ಅಂಕಗಳನ್ನು ಗಳಿಸಿ ಜಪಾನ್ ಜೋಡಿ ಮೇಲುಗೈ ಸಾಧಿಸಿತು. ಈ ಮೂಲಕ ಭಾರತ ಆಟಗಾರರು 11-8 ಹಿನ್ನಡರೆ ಅನುಭವಿಸಿತ್ತು. ವಿರಾಮದ ಬಳಿಕ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಜೋಡಿ ಸತತ ಮೂರು ಅಂಕಗಳನ್ನು ಗಳಿಸಿದ ನಂತರ 15-15 ಸ್ಕೋರ್‌ಗಳನ್ನು ಸಮಬಲಗೊಳಿಸುವ ಮೂಲಕ ದ್ವಿತೀಯಾರ್ಧದಲ್ಲಿ ಪುನರಾಗಮನ ಮಾಡುವಲ್ಲಿ ಯಶಸ್ವಿಯಾದರು. ಅದಾದ ಬಳಿಕ ತೀವ್ರ ಪೈಪೋಟಿ ನಡೆಯಿತು. ಒಂದು ಹಂತದಲ್ಲಿ 18-18 ರಲ್ಲಿ ಸಮಬಲ ಸಾಧಿಸಿದ ಬಳಿಕ ಭಾರತದ ಜೋಡಿ ಮುಂದಿನ ಮೂರು ಪಾಯಿಂಟ್‌ಗಳನ್ನು ತನ್ನದಾಗಿಸಿಕೊಂಡಿತು. ಈ ಮೂಲಕ 21-18 ಅಂಕಗಳಿಂದ ಎರಡನೇ ಸೆಟ್ ಕೂಡ ತನ್ನ ವಶಕ್ಕೆ ಪಡೆದು ಪಂದ್ಯದಲ್ಲಿ ಗೆಲುವು ಸಾಧಿಸಿದೆ.