ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಥಾಯ್ಲೆಂಡ್ ಓಪನ್‌ನಿಂದ ಹಿಂದೆ ಸರಿದ ಭಾರತದ ಅಗ್ರ ಶ್ರೇಯಾಂಕಿತ ಡಬಲ್ಸ್ ಜೋಡಿ

Indias top ranked badminton doubles pair Satwik-Chirag withdraws from the Thailand Open

ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಭಾರತೀಯ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಥೈಲ್ಯಾಂಡ್ ಓಪನ್‌ನಿಂದ ಹೊರಗುಳಿಯಬೇಕಾದ ಅನುವಾರ್ಯತೆಗೆ ಒಳಗಾಗಿದ್ದಾರೆ. ಈ ತಿಂಗಳಲ್ಲಿ ನಡೆದ ಇಂಡಿಯಾ ಓಪನ್‌ನಲ್ಲಿ ಈ ಜೋಡಿ ಆಘಾತಕಾರಿ ರೀತಿಯಲ್ಲಿ ಹೊರಬಿದ್ದಿತ್ತು. ಈ ಜೋಡಿಯ ಪೈಕಿ ಒಬ್ಬರಾದ ಸಾತ್ವಿಕ್ ಸೊಂಟದ ನೋವಿಗೆ ಒಳಗಾಗಿದ್ದು ಸಂಪೂಈರ್ಣವಾಗಿ ಚೇತರಿಕೆ ಕಾಣದ ಕಾರಣ ಥಾಯ್ಲೆಂಡ್ ಓಪನ್‌ನಿಂದ ಹೊರಗುಳಿಯುತ್ತಿರುವುದನ್ನು ಚಿರಾಗ್ ಶೆಟ್ಟಿ ದೃಢಪಡಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ನಡೆದ ಇಂಡಿಯಾ ಓಪನ್ ಸೂಪರ್ 750 ಪಂದ್ಯಾವಳಿಯಲ್ಲಿ ಸಾತ್ವಿಕ್ ಗಾಯಗೊಂಡಿದ್ದರು. ಹೊಸದಿಲ್ಲಿಯಲ್ಲಿ ನಡೆದ ಪಂದ್ಯಾವಳಿಯಿಂದ ಮಧ್ಯದಲ್ಲಿಯೇ ಹಿಂದೆ ಸರಿಯಬೇಕಾಯಿತು. ಈ ರೀತಿಯಾಗಿ ಭಾರತದ ಜೋಡಿಯ ಸ್ಪರ್ಧೆ ಅಂತ್ಯವಾಗಿತ್ತು. ಈ ಬಗ್ಗೆ ಚಿರಾಗ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. "ಅವರಿನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹಾಗಾಗಿ ಥಾಯ್ಲೆಂಡ್‌ನಲ್ಲಿ ಆಡುತ್ತಿಲ್ಲ" ಎಂದು ಚಿರಾಗ್ ಸ್ಪಷ್ಟಪಡಿಸಿದ್ದಾರೆ.

U-19 ಮಹಿಳಾ ಟಿ20 ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾU-19 ಮಹಿಳಾ ಟಿ20 ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ

ಇನ್ನು ಈ ಸಂದರ್ಭದಲ್ಲಿ ಚಿರಾಗ್ ಶೆಟ್ಟಿ "ಬಹುಶಃ ತಾವಿನ್ನು ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ಅನ್ನು ಗುರಿಯಾಗಿರಿಸಿಕೊಳ್ಳಬಹುದು" ಎಂದಿದ್ದಾರೆ. ಋತುವಿನ ಆರಂಭಿಕ ಮಲೇಷ್ಯಾ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ ಅಗ್ರ ಶ್ರೇಯಾಂಕದ ಭಾರತೀಯ ಜೋಡಿ ಥಾಯ್ಲೆಂಡ್ ಓಪನ್‌ನ ಆರಂಭಿಕ ಸುತ್ತಿನಲ್ಲಿ ಚೈನೀಸ್ ತೈಪೆಯ ಸು ಚಿಂಗ್ ಹೆಂಗ್ ಮತ್ತು ಯೆ ಹಾಂಗ್ ವೀ ಅವರನ್ನು ಎದುರಿಸಬೇಕಿತ್ತು.

ಭಾರತ ತಂಡಕ್ಕೆ ಏಕದಿನ ವಿಶ್ವಕಪ್ ಗೆಲ್ಲುವ ಆಸೆಯಿದ್ದರೆ ಹೀಗೆ ಮಾಡಲಿ ಎಂದ ಸೌರವ್ ಗಂಗೂಲಿಭಾರತ ತಂಡಕ್ಕೆ ಏಕದಿನ ವಿಶ್ವಕಪ್ ಗೆಲ್ಲುವ ಆಸೆಯಿದ್ದರೆ ಹೀಗೆ ಮಾಡಲಿ ಎಂದ ಸೌರವ್ ಗಂಗೂಲಿ

ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಥೈಲ್ಯಾಂಡ್ ಓಪನ್‌ನಿಂದ ಹೊರಗುಳಿಯುತ್ತಿರುವ ಕಾರಣ ಈ ಟೂರ್ನಿಯಲ್ಲಿ ವಿಶ್ವ ನಂ. 34 ಕೃಷ್ಣ ಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್ ಗೌಡ್ ಪಂಜಾಲ ಈಗ ಪುರುಷರ ಡಬಲ್ಸ್‌ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

"ನಾವು ವೇಗವಾಗಿ ಆಡುವ ಮಟ್ಟಕ್ಕೆ ಒಗ್ಗಿಕೊಳ್ಳಬೇಕಾಗಿದೆ. ಸೂಪರ್ 100 ಮತ್ತು 300 ವಿಭಾಗದಲ್ಲಿ ನಾವು ಉತ್ತಮ ಮಟ್ಟದಲ್ಲಿ ಆಡುತ್ತಿದ್ದೇವೆ. ಆದರೆ ನಾವು ದೊಡ್ಡ ಪಂದ್ಯಾವಳಿಗಾಗಿ ನಮ್ಮ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಿದೆ. ಈ ವರ್ಷ ಅಗ್ರ 20 ರೊಳಗೆ ಬರುವುದು ನಮ್ಮ ಗುರಿಯಾಗಿದೆ" ಎಂದಿದ್ದಾರೆ ಕೃಷ್ಣ ಪ್ರಸಾದ್ ಗರಗ.

Story first published: Monday, January 30, 2023, 21:29 [IST]
Other articles published on Jan 30, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X