ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಪಿವಿ ಸಿಂಧು ಸೆಮಿ ಫೈನಲ್ ಕದನ, ದಿನಾಂಕ, ಸಮಯ ಹೆಡ್‌ 2 ಹೆಡ್ ಮಾಹಿತಿ

Olympics: PV Sindhu vs Tai Tzu-ying Semifinal battle, Date, Time and other details

ಟೋಕಿಯೋ, ಜುಲೈ 30: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪರವಾಗಿ ಪದಕದ ಭರವಸೆ ಮೂಡಿಸಿದ್ದ ಹಲವು ಕ್ರೀಡಾಪಟುಗಳು ಈಗಾಗಲೇ ಸೋಲು ಕಂಡು ಒಲಿಂಪಿಕ್ಸ್‌ನಿಂದ ಹೊರಬಿದ್ದಿದ್ದಾರೆ. ಇನ್ನೂ ಕೆಲ ಅಥ್ಲೀಟ್‌ಗಳಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿದೆ. ಅದರಲ್ಲಿ ಪ್ರಮುಖವಾದವರು ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು. ಸೆಮಿ ಫಯನಲ್‌ಗೆ ಲಗ್ಗೆಯಿಟ್ಟಿರುವ ಪಿವಿ ಸಿಂಧು ಪ್ರಶಸ್ತಿ ಸುತ್ತಿಗೆ ಮತ್ತಷ್ಟಯ ಹತ್ತಿರವಾಗಿದ್ದಾರೆ. ಆದರೆ ಸೆಮಿ ಫೈನಲ್ ಕದನದ ಅಗ್ನಿ ಪರೀಕ್ಷೆಯನ್ನು ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಹೇಗೆ ಎದುರಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಭಾರತ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಈವರೆಗೆ ಒಂದು ಪದಕವನ್ನು ಮಾತ್ರವೇ ಗೆದ್ದುಕೊಂಡಿದೆ. ಮೀರಾಬಾಯಿ ಚಾನು ವೈಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿಯ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಶುಕ್ರವಾರ ಭಾರತದ ಬಾಕ್ಸರ್ ಲಾವ್ಲಿನಾ ಬೋರ್ಗೋಹೈನ್ ಭಾರತಕ್ಕೆ ಮತ್ತೊಂದು ಒಲಿಂಪಿಕ್ಸ್ ಪದಕವನ್ನು ಖಚಿತಪಡಿಸಿದ್ದಾರೆ. 69 ಕೆಜಿ ಬಾಕ್ಸಿಂಗ್‌ನಲ್ಲಿ ಲಾವ್ಲಿನಾ ಕನಿಷ್ಟ ಕಂಚಿನ ಪದಕವನ್ನು ಖಚಿತಪಡಿಸಿದ್ದಾರೆ. ಈ ಮಧ್ಯೆ ಪಿವಿ ಸಿಂಧು ಅವರಿಂದಲೂ ಭಾರತ ಮತ್ತೊಂದು ಪದಕದ ನಿರೀಕ್ಷೆಯನ್ನು ಮಾಡುತ್ತಿದೆ.

ಟೋಕಿಯೋ ಒಲಿಂಪಿಕ್ಸ್: ಸೆಮಿಫೈನಲ್ ಪ್ರವೇಶಿಸುವಲ್ಲಿ ಎಡವಿದ ದ್ಯುತಿ ಚಾಂದ್ಟೋಕಿಯೋ ಒಲಿಂಪಿಕ್ಸ್: ಸೆಮಿಫೈನಲ್ ಪ್ರವೇಶಿಸುವಲ್ಲಿ ಎಡವಿದ ದ್ಯುತಿ ಚಾಂದ್

ಸೆಮಿ ಫೈನಲ್‌ನಲ್ಲಿ ಭಾರತದ ಪಿವಿ ಸಿಂಧುಗೆ ಕಠಿಣ ಸವಾಲು ಎದುರಾಗಲಿದೆ. ಪ್ರಸಕ್ತ ನಂಬರ್ 1 ಆಟಗಾರ್ತಿಯಾಗಿರುವ ಚೈನೀಸ್ ತೈಪೆಯ ತಾಯ್ ಟ್ಜು ಯಿಂಗ್ ಅವರನ್ನು ಪಿವಿ ಸಿಂಧು ಸೆಮಿ ಫೈನಲ್‌ನಲ್ಲಿ ಎದುರಿಸಲಿದ್ದಾರೆ. ಈ ಪಂದ್ಯದ ಮೇಲೆ ಈಗ ಭಾರತೀಯ ಕ್ರೀಡಾ ಅಭಿಮಾನಗಳ ಚಿತ್ತ ನೆಟ್ಟಿದೆ.

ಹೆಡ್‌ ಟು ಹೆಟ್ ಮಾಹಿತಿ: ಭಾರತದ ಪಿವಿ ಸಿಂಧು ವಿರುದ್ಧ ಚೈನೀಸ್ ತೈಪೆಯ ತಾಯ್ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಹೀಗಾಗಿ ಪಿವಿ ಸಿಂಧುಗೆ ಈ ಪಂದ್ಯ ಅಗ್ನಿ ಪರೀಕ್ಷೆಯಾಗಿರಲಿದೆ. ಈ ಇಬ್ಬರು ಆಟಗಾರ್ತಿಯರ ಮಧ್ಯೆ ಈವರೆಗೆ ಒಟ್ಟು 18 ಪಂದ್ಯಗಳು ನಡೆದಿದೆ. ಇದರಲ್ಲಿ ತಾಯ್ ಟ್ಜು ಯಿಂಗ್ ಸಂಪೂರ್ಣ ಮೇಲುಗೈ ಸಾಧಿಸಿದ್ದಾರೆ. ತಾಯ್ ಟ್ಜು ಯಿಂಗ್ ಒಟ್ಟು 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಪಿವಿ ಸಿಂಧು ಕೇವಲ 5ರಲ್ಲಿ ಗೆದ್ದಿದ್ದಾರೆ. ಇಷ್ಟು ಮಾತ್ರವಲ್ಲದೆ ಚೂನೀಸ್ ತೈಪೆಯ ಈ 27ರ ಹರೆಯದ ಯುವ ಆಟಗಾರ್ತಿ ಅತಿ ಹೆಚ್ಚು ವಾರಗಳ ಕಾಲ ವಿಶ್ವ ನಂಬರ್ 1 ಆಟಗಾರ್ತಿಯಾಗಿ ಉಳಿದುಕೊಂಡಿರುವ ದಾಖಲೆಯನ್ನು ಹೊಂದಿದ್ದಾರೆ.

ಕ್ವಾರ್ಟರ್‌ಫೈನಲ್‌ನಲ್ಲಿ ಏನಾಯಿತು?: ಈ ಬಾರಿಯ ಒಲಿಂಪಿಕ್ಸ್‌ನಲ್ಲಿ 9ನೇ ಸ್ಥಾನಿಯಾಗಿ ಪಿವಿ ಸಿಂಧು ಕಣಕ್ಕಿಳಿದಿದ್ದರು. ಕ್ವಾರ್ಟರ್‌ಫೈನಲ್‌ನಲ್ಲಿ ಸಿಂಧುಗೆ ಆತಿಥೆಯ ಜಪಾನ್‌ನ ಆಟಗಾರ್ತಿಯಾದ ಅಕಾನೆ ಯಮಗುಚಿ ವಿರುದ್ಧ ಸೆಣೆಸಾಡಿ ಗೆಲುವು ಸಾಧಿಸಿದರು. 21-13 22-20 ಅಂಕಗಳ ಮೂಲಕ ಸಿಂಧು ಭರ್ಜರಿಯಾಗಿ ಗೆಲುವು ಸಾಧಿಸಿ ಸೆಮಿ ಫೈನಲ್‌ಗೆ ಪ್ರವೇಶ ಗಿಟ್ಟಿಸಿದ್ದಾರೆ. ಈ ಪಂದ್ಯ 56 ನಿಮಿಷಗಳಲ್ಲಿ ಮುಕ್ತಾಯಕಂಡಿತ್ತು. ಕೆಲ ಕಠಿಣ ಸವಾಲುಗಳು ಸಿಂಧುಗೆ ಈ ಪಂದ್ಯದಲ್ಲಿ ಎದುರಾಗಿತ್ತು. ಅದರಲ್ಲೀ ಎರಡನೇ ಸೆಟ್‌ನಲ್ಲಿ ಜಪಾನ್‌ನ ಆಟಗಾರ್ತಿ ಉತ್ತಮ ಹೋರಾಟವನ್ನು ಪ್ರದರ್ಶಿಸಿದರು. ಆದರೆ ಅಂತಿಮವಾಗಿ ಗೆಲುವು ಭಾರತೀಯ ಆಟಗಾರ್ತಿಯ ಪಾಲಾಗಿತ್ತು.

ಕ್ವಾರ್ಟರ್‌ಫೈನಲ್‌ನಲ್ಲಿ ತಿಣುಕಾಡಿ ಗೆದ್ದ ತಾಯ್: ಮತ್ತೊಂದೆಡೆ ತಾಯ್ ಸೆಮಿಫೈನಲ್‌ನಲ್ಲಿ ಥಾಲ್ಯಾಂಡ್‌ನ ರಾಚನೋಕ್ ಇಂಟಾನೋನ್ ವಿರುದ್ಧ ತಿಣುಕಾಡಿ ಗೆಲುವು ಸಾಧಿಸಿದರು. 14-21, 21-18, 21-18 ಅಂತರದಿಂದ ತಾಯ್ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಸೆಮಿ ಫೈನಲ್‌ನಲ್ಲಿ ಪಿವಿ ಸಿಂಧು ಚೈನೀಸ್ ತೈಪೆಯ ತಾಯ್ ಟ್ಜು ಯಿಂಗ್ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸುವ ವಿಶ್ವಾಸವನ್ನು ಹೊಂದಿದ್ದಾರೆ.

ಪಂದ್ಯದ ಸಂಪೂರ್ಣ ಮಾಹಿತಿ
ಸಮಯ: ಪಿವಿ ಸಿಂಧು ಹಾಗೂ ತಾಯ್ ಟ್ಜು ಯಿಂಗ್ ವಿರುದ್ಧದ ಸೆಮಿಫೈನಲ್ ಕದನ ಶನಿವಾರ ನಡೆಯಲಿದೆ. ಮಧ್ಯಾಹ್ನ 2:30ಕ್ಕೆ ಪಂದ್ಯ ನಿಗದಿಯಾಗಿದೆ.
ನೇರಪ್ರಸಾರ: ಪಿವಿ ಸಿಂಧು ಹಾಗೂ ತಾಯ್ ಟ್ಜು ಯಿಂಗ್ ವಿರುದ್ಧದ ಸೆಮಿಫೈನಲ್ ಪಂದ್ಯ ಸೋನಿ ನೆಟ್‌ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ. ಸೋನಿ ಲಿವ್ ಒಟಿಟಿ ವೇದಿಯಲ್ಲಿ ಈ ಪಂದ್ಯವನ್ನು ವೀಕ್ಷಿಸುವ ಅವಕಾಶವಿದೆ. ಜಿಯೋ ಟಿವಿಯಲ್ಲಿ ಕೂಡ ವೀಕ್ಷಕರು ನೇರಪ್ರಸಾರವನ್ನು ವೀಕ್ಷಿಸುವ ಅವಕಾಶವಿದೆ.

Story first published: Saturday, July 31, 2021, 10:23 [IST]
Other articles published on Jul 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X