ಸಿಂಧು ಸೋಲಿಸಿದ ಸೈನಾ - 3ನೇ ಬಾರಿಗೆ ರಾಷ್ಟ್ರೀಯ ಚಾಂಪಿಯನ್

Posted By:

ನಾಗ್ಪುರ್, ನವೆಂಬರ್ 08: ವಿಶ್ವದ ನಂಬರ್ 02 ಆಟಗಾರ್ತಿ ಪಿ.ವಿ. ಸಿಂಧುರನ್ನು ಸೋಲಿಸಿದ ವಿಶ್ವದ ನಂಬರ್ 11 ಸೈನಾ ನೆಹ್ವಾಲ್ ಅವರು ಮೂರನೇ ಬಾರಿಗೆ ರಾಷ್ಟ್ರೀಯ ಚಾಂಪಿಯನ್ ಎನಿಸಿಕೊಂಡಿದ್ದಾರೆ.

ಬುಧವಾರದಂದು ನಡೆದ 82ನೇ ರಾಷ್ಟ್ರೀಯ ಸೀನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್‌ ವಿಭಾಗದ ಅಂತಿಮ ಹಣಾಹಣಿಯಲ್ಲಿ 21-17, 27-25ರಲ್ಲಿ ಸಿಂಧುರನ್ನು ಸೈನಾ ಸೋಲಿಸಿದರು.

Saina Beats Sindhu to become National Champion for 3rd time

ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಸಿಂಧು 17-21, 21-15, 21-11ರಲ್ಲಿ ರುತ್ವಿಕಾ ಶಿವಾನಿ ವಿರುದ್ಧ ಜಯ ಸಾಧಿಸಿದ್ದರು. ಸೈನಾ 21-11, 21-10ರಲ್ಲಿ ಐದನೇ ಶ್ರೇಯಾಂಕಿತ ಆಟಗಾರ್ತಿ ಅನುರಾ ಪ್ರಭು ದೇಸಾಯಿ ಅವರನ್ನು ಸೋಲಿಸಿ ಫೈನಲ್ ತಲುಪಿದ್ದನ್ನು ಇಲ್ಲಿ ಸ್ಮರಿಸಬಹುದು.

2006 ಮತ್ತು 2007ರಲ್ಲಿ ಸೈನಾ ಅವರು ಪ್ರಶಸ್ತಿ ಗಳಿಸಿದ್ದರು. 2011 ಮತ್ತು 2013ರಲ್ಲಿ ಸಿಂಧು ಟ್ರೋಫಿ ಗೆದ್ದಿದ್ದರು.

ರಾಷ್ಟ್ರೀಯ ಸೀನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಕಿದಂಬಿ ಶ್ರೀಕಾಂತ್ ವಿರುದ್ಧ ಎಚ್‌.ಎಸ್‌.ಪ್ರಣಯ್‌ ಜಯಗಳಿಸಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿರುವ ಶ್ರೀಕಾಂತ್‌ ಹಾಗೂ 11ನೇ ಸ್ಥಾನದಲ್ಲಿರುವ ಪ್ರಣಯ್‌ ಬುಧವಾರ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಿದ್ದರು. 21-15, 16-21, 21-7 ಅಂತರದಿಂದ ಶ್ರೀಕಾಂತ್‌ ಅವರನ್ನು ಪ್ರಣಯ್‌ ಸೋಲಿಸಿದರು.

Story first published: Wednesday, November 8, 2017, 20:33 [IST]
Other articles published on Nov 8, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ