ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸೈನಾ ನೆಹ್ವಾಲ್ ಕೋವಿಡ್ ಪಾಸಿಟಿವ್ ವರದಿಯ ಬಗ್ಗೆ ಗೊಂದಲ

Thailand Open 2021: Saina Nehwal Covid-19 positive report was false

ಭಾರತೀಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ ಎಂಬ ಸಂಗತಿಯನ್ನು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ತಿಳಿಸಿದ್ದು ಅವರು 10 ದಿನಗಳ ಕಾಲ ಬ್ಯಾಂಕಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಬೇಕೆಂದು ತಿಳಿಸಿತ್ತು. ಇದು ಥಾಯ್ಲೆಂಡ್ 2021ರ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆಗೆ ಆಶ್ಚರ್ಯವನ್ನು ಮೂಡಿಸಿತ್ತು. ಈ ಬಗ್ಗೆ ಸ್ವತಃ ಸೈನಾ ಟ್ವೀಟ್‌ನಲ್ಲಿ ಗೊಂದಲವನ್ನು ವ್ಯಕ್ತಪಡಿಸಿದ್ದರು.

ಈ ಬೆಳವಣಿಗೆಯ ಬಗ್ಗೆ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ ಮೂಲಗಳು ಇಂಡಿಯಾ ಟುಡೇಗೆ ಪ್ರತಿಕ್ರಿಯಿಸಿದ್ದು ಸೈನಾ ನೆಹ್ವಾಲ್‌ಗೆ ಕೊರೊನಾ ವೈರಸ್ ಪಾಸಿಟಿವ್ ಎಂಬುದು ಸುಳ್ಳು ವರದಿ ಎಂದಿರುವುದಾಗಿ ಪ್ರಕಟಿಸಿದೆ. ಬುಧವಾರದಿಂದ ಆರಂಭವಾಗಲಿರುವ ಟೂರ್ನಿಯಲ್ಲಿ ಸೈನಾ ನೆಹ್ವಾಲ್ ಪಾಲ್ಗೊಳ್ಳಲಿದ್ದಾರೆ ಎಂದು ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ ಮೂಲಗಳ ಹೇಳೀಕೆಯನ್ನು ಇಂಡಿಯಾ ಟುಡೇ ವರದಿಯಲ್ಲಿ ಉಲ್ಲೇಖಿಸಿದೆ.

ಭಾರತದ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್‌ಗೆ ಕೊರೊನಾ ಪಾಸಿಟಿವ್ಭಾರತದ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್‌ಗೆ ಕೊರೊನಾ ಪಾಸಿಟಿವ್

ಈ ವಿಚಾರವಾಗಿ ಸೈನಾ ನೆಹ್ವಾಲ್ ಮಧ್ಯಾಹ್ನದ ವೇಳೆಗೆ ಟ್ವೀಟ್‌ ಮಾಡಿ ಗೊಂದಲವನ್ನು ಹೇಳಿಕೊಂಡಿದ್ದರು. ನಿನ್ನೆಯಿಂದ ನಾನು ಈ ಕ್ಷಣದವರೆಗೂ ಯಾವುದೇ ಕೊರೊನಾ ವರದಿಯನ್ನು ಪಡೆದುಕೊಂಡಿಲ್ಲ. ನನಗೆ ಗೊಂದಲವುಂಟಾಗಿದ್ದು, ಈಗ ಅಭ್ಯಾಸಕ್ಕೆ ಕೆಲವೇ ಕ್ಷಣಗಳ ಮುನ್ನ ಬ್ಯಾಂಕಾಕ್ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದು ನನ್ನದು ಕೊವಿಡ್ ಪಾಸಿಟಿವ್ ಎಂದಿದ್ದಾರೆ. ನಿಯಮಗಳ ಪ್ರಕಾರ ವರದಿ ಪರೀಕ್ಷೆಯ 5 ಗಂಟೆಯೊಳಗೆ ಬರಬೇಕು ಎಂದು ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದರು.

ಸೈನಾ ಮತ್ತು ಅವರ ಪತಿ ಎಚ್‌ಎಸ್ ಪ್ರಣಯ್ ಕೊರೊನಾವೈರಸ್‌ಗೆ ತುತ್ತಾಗಿದ್ದಾರೆ ಎಂದು ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ ಮೊದಲಿಗೆ ಹೇಳಿತ್ತು. ಈ ಬಗ್ಗೆ ಮತ್ತಷ್ಟು ಸ್ಪಷ್ಟನೆಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

Story first published: Tuesday, January 12, 2021, 18:16 [IST]
Other articles published on Jan 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X