ಟೋಕಿಯೋ ಒಲಿಂಪಿಕ್ಸ್: ಕಂಚಿನ ಪದಕ ಗೆದ್ದ ಸಿಂಧು ಬಗೆಗಿನ ಕುತೂಹಲಕಾರಿ ಸಂಗತಿಗಳಿವು!

ಟೋಕಿಯೋ, ಆಗಸ್ಟ್ 1: ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಪಿವಿ ಸಿಂಧು ಚಿನ್ನದ ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ಪದಕದ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಪಿವಿ ಸಿಂಧು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಭಾರತಕ್ಕೆ ಎರಡನೇ ಪದಕವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಕಂಚಿನ ಪದಕ್ಕಾಗಿ ನಡೆದ ಸೆಣೆಸಾಟದಲ್ಲಿ ಚೀನಾದ ಹಿ ಬಿಂಗ್ಜಿಯಾವೊ ವಿರುದ್ಧ ಸಿಂಧು 21-13 21-15 ಅಂತರದಿಂದ ಗೆಲುವು ಸಾಧಿಸಿದರು.

ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ನಲ್ಲಿ ಈಗಾಲೇ ಸಾಕಷ್ಟು ಸಾಧನೆ ಮಾಡಿರುವ ಪಿವಿ ಸಿಂಧು ಈ ಗೆಲುವಿನ ಮೂಲಕ ಒಲಿಂಪಿಕ್ಸ್‌ನಲ್ಲಿ ಎರಡನೇ ಪದಕವನ್ನು ಗೆದ್ದ ಭಾರತದ ಪ್ರಥಮ ಮಹಿಳಾ ಕ್ರೀಡಾಪಟು ಎನಿಸಿದ್ದಾರೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸಿಂಧು ಬೆಳ್ಳಿಯ ಪದಕ ಗೆದ್ದಿದ್ದರು.

ಟೋಕಿಯೋ ಒಲಿಂಪಿಕ್ಸ್: ಬಾಕ್ಸಿಂಗ್‌ನಲ್ಲಿ ದಿಟ್ಟ ಹೋರಾಟ ನಡೆಸಿದ ಸೈನಿಕ ಸತೀಶ್!ಟೋಕಿಯೋ ಒಲಿಂಪಿಕ್ಸ್: ಬಾಕ್ಸಿಂಗ್‌ನಲ್ಲಿ ದಿಟ್ಟ ಹೋರಾಟ ನಡೆಸಿದ ಸೈನಿಕ ಸತೀಶ್!

ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸಾಧನೆಗಳ ಬಗ್ಗೆ ಕ್ರೀಡಾ ಪ್ರೇಮಿಗಳು ಸಾಕಷ್ಟು ಮಾಹಿತಿಯನ್ನು ಹೊಂದಿದ್ದಾರೆ. ಆದರೆ ಈ ವಿಶೇಷ ವರದಿಯಲ್ಲಿ ಪಿವಿ ಸಿಂಧು ಅವರ ಬಗ್ಗೆ ಕೆಲ ಕುತೂಹಲಕಾರಿ ವಿಚಾರಗಳನ್ನು ನೋಡೋಣ. ಮುಂದೆ ಓದಿ..

ಪಿವಿ ಸಿಂಧು ಹೆತ್ತವರಿಬ್ಬರೂ ಕ್ರೀಡಾಪಟುಗಳು

ಪಿವಿ ಸಿಂಧು ಹೆತ್ತವರಿಬ್ಬರೂ ಕ್ರೀಡಾಪಟುಗಳು

ಪಿವಿ ಸಿಂಧು 1995ರ ಜುಲೈ 5ರಂದು ಪಿವಿ ರಮಣ ಹಾಗೂ ಪಿ ವಿಜಯ ದಂಪತಿಗೆ ಜನಿಸಿದರು. ಪಿವಿ ಸಿಂಧು ಅವರ ಹೆತ್ತವರಿಬ್ಬರು ಕೂಡ ಕ್ರೀಡಾಪಟುಗಳಾಗಿದ್ದಾರೆ. ಇಬ್ಬರು ಕೂಡ ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಪಟುಗಳಾಗಿದ್ದಾರೆ. ಹೀಗಾಗಿ ಪಿವಿ ಸಿಂಧು ಕ್ರೀಡಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುದರಲ್ಲಿ ಆಶ್ಚರ್ಯವಿಲ್ಲ. ಅದರಲ್ಲೂ ಅವರ ತಂದೆ ಪಿವಿ ರಮಣ ವಾಲೀಬಾಲ್‌ಗೆ ನೀಡಿದ ಕೊಡುಗೆಗಾಗಿ 2000ನೇ ಇಸವಿಯಲ್ಲಿ ಅರ್ಜುನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

ಅಭ್ಯಾಸಕ್ಕಾಗಿ ನಿತ್ಯವೂ 120 ಕಿಮೀ ಪ್ರಯಾಣ

ಅಭ್ಯಾಸಕ್ಕಾಗಿ ನಿತ್ಯವೂ 120 ಕಿಮೀ ಪ್ರಯಾಣ

ಪಿವಿ ಸಿಂಧು ಬಾಲ್ಯದಲ್ಲಿಯೇ ಬ್ಯಾಡ್ಮಿಂಟನ್ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ಹೀಗಾಗಿ ಸಿಂಧು ಹೆತ್ತವರು ಈ ಆಸಕ್ತಿಯನ್ನು ಪೋಷಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಇದಕ್ಕಾಗಿ 60 ಕಿಮೀ ದೂರದಲ್ಲಿರುವ ಪುಲೆಲ್ಲಾ ಗೋಪಿಚಂದ್ ಅವರ ಬ್ಯಾಡ್ಮಿಂಟನ್ ಅಕಾಡೆಮಿಗೆ ತರಬೇತಿಗೆ ಸೇರಿದಿದ್ದರು. ಹೀಗಾಗಿ ಪಿವಿ ಸಿಂಧು ಸುಮಾರು 12 ವರ್ಷಗಳ ಕಾಲ ನಿತ್ಯವೂ 120 ಕಿಮೀ ನಿತ್ಯವೂ ಪ್ರಯಾಣಿಸುತ್ತಿದ್ದರು. ನಿತ್ಯವೂ ಎರಡು ಬಾರಿ ಪ್ರಯಾಣಿಸಿ ಪಿವಿ ಸಿಂಧು ಗೋಪಿಚಂದ್ ಅವರ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದರು. "ಸಿಂಧು ಅವರ ತಂದೆ ನಿತ್ಯವೂ ಮರೇಡ್‌ಪಲ್ಲಿಯಿಂದ ಗೋಪಿಚಂದರ್ ಅಕಾಡೆಮಿಯಿರುವ ಗಾಚಿಬೌಲಿಗೆ ಎರಡು ಬಾರಿ ಬಿಟ್ಟು ಬರುತ್ತಿದ್ದರು. ಇತ್ತೀಚೆಗಷ್ಟೇ ಸಿಂಧು ಗೋಪಿಚಂದ್ ಅವರ ಅಕಾಡೆಮಿಗೆ ಹತ್ತಿರವಿರುವಂತೆ ತಮ್ಮ ವಾಸ್ತವ್ಯ ಬದಲಾಯಿಸಿಕೊಂಡಿದ್ದಾರೆ" ಎಂದು ಭಾರತದ ಮಾಜಿ ಬ್ಯಾಡ್ಮಿಂಟನ್ ಪಟು ಜೆಬಿಎಸ್ ವಿದ್ಯಾಧರ್ ಮಾಹಿತಿ ನೀಡಿದ್ದಾರೆ.

ಟೂರ್ನಿಗಾಗಿ ಸೋದರಿಯ ಮದುವೆಯನ್ನು ತಪ್ಪಿಸಿಕೊಂಡಿದ್ದ ಸಿಂಧು

ಟೂರ್ನಿಗಾಗಿ ಸೋದರಿಯ ಮದುವೆಯನ್ನು ತಪ್ಪಿಸಿಕೊಂಡಿದ್ದ ಸಿಂಧು

ಪಿವಿ ಸಿಂಧು ಅವರ ಹಿರಿಯ ಸೋದರಿ ಪಿ ದಿವ್ಯಾ 2012ರಲ್ಲಿ ಹೈದರಾಬಾದ್‌ನಲ್ಲಿ ಮದುವೆಯಾಗಿದ್ದರು. ಆದರೆ ಬ್ಯಾಡ್ಮಿಂಟನ್ ತಾರೆ ಸಿಂಧು ಈ ಮದುವೆಯಲ್ಲಿ ಭಾಗವಹಿಸಿರಲಿಲ್ಲ. ಇದಕ್ಕೆ ಕಾರಣ ಬ್ಯಾಡ್ಮಿಂಟನ್ ಟೂರ್ನಿ. ಆಗ 17ರ ಹರೆಯದಲ್ಲಿದ್ದ ಸಿಂಧು ಲಕ್ನೋದಲ್ಲಿ ಸೈಯದ್ ಮೋದಿ ಇಂಟರ್‌ನ್ಯಾಷನಲ್ ಇಂಡಿಯಾ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್‌ನಲ್ಲಿ ಆಡುತ್ತಿದ್ದರು.

ಸಿಂಧುಗೆ ಕಾರು ಗಿಫ್ಟ್ ಮಾಡಿದ್ದ ಸಚಿನ್ ತೆಂಡೂಲ್ಕರ್

ಸಿಂಧುಗೆ ಕಾರು ಗಿಫ್ಟ್ ಮಾಡಿದ್ದ ಸಚಿನ್ ತೆಂಡೂಲ್ಕರ್

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಪಿವಿ ಸಿಂಧು ಬೆಳ್ಳಿ ಪದಕ ಗೆದ್ದಿದ್ದರು. ಈ ವಿಶೇಷ ಸಾಧನೆಯನ್ನು ಮತ್ತಷ್ಟು ವಿಶೇಷವಾಗಿಸಿದ್ದರು ಭಾರತದ ಕ್ರಿಕೆಟ್ ಸೂಪರ್ ಸ್ಟಾರ್ ಸಚಿನ್ ತೆಂಡೂಲ್ಕರ್. ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆಗಾಗಿ ಸಚಿನ್ ತೆಂಡೂಲ್ಕರ್ ಪಿವಿ ಸಿಂಧುಗೆ ಬಿಎಂಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

ಆಹಾರ ಪ್ರಿಯೆ ಸಿಂಧು

ಆಹಾರ ಪ್ರಿಯೆ ಸಿಂಧು

ಬ್ಯಾಡ್ಮಿಂಟನ್‌ನ ಸ್ಟಾರ್ ಎನಿಸಿರುವ ಪಿವಿ ಸಿಂಧು ಭೊಜನಪ್ರಿಯೆಯೂ ಹೌದು. ಅವರ ಸಾಮಾಜಿಕ ಜಾಲತಾಣದ ಖಾತೆಯನ್ನು ಗಮನಿಸಿದರೆ ಈ ವಿಚಾರ ತಿಳಿಯುತ್ತದೆ. ರುಚಿಕರ ಖಾದ್ಯಗಳ ಜೊತೆಗೆ ವಿಶೇಷ ಆಹಾರಗಳ ಜೊತೆಗೆ ಪಿವಿ ಸಿಂಧು ಸಾಕಷ್ಟು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಸಿಹಿ ಮೊಸರು ಸಿಂಧು ಅವರ ನೆಚ್ಚಿನ ಆಹಾರವಾಗಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Sunday, August 1, 2021, 21:00 [IST]
Other articles published on Aug 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X