ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SL: ಭಾರತ vs ಶ್ರೀಲಂಕಾ ಟಿ20 ಪಂದ್ಯಕ್ಕೆ ಈ ಕ್ರೀಡಾಂಗಣದ ಟಿಕೆಟ್ ದರ ಏರಿಕೆ?

IND vs SL: Wankhede Stadium Ticket Price Likely To Increase For India vs Sri Lanka T20 Match

2023ರ ಜನವರಿ 3ರಿಂದ ಭಾರತ ಕ್ರಿಕೆಟ್ ತಂಡವು 2022ರ ಏಷ್ಯಾ ಕಪ್ ವಿಜೇತ ತಂಡ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

ಶ್ರೀಲಂಕಾ ವಿರುದ್ಧ ಮೂರು ಟಿ20 ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಸೆಡಸಾಡಲಿದ್ದು, ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ಮೊದಲ ಟಿ20 ಪಂದ್ಯವನ್ನು ಆಯೋಜಿಸಲಿದೆ. ವರದಿಗಳ ಪ್ರಕಾರ, ಪ್ರೇಕ್ಷಕರ ಟಿಕೆಟ್ ದರಗಳು ಹೆಚ್ಚಾಗುವ ಸಾಧ್ಯತೆಯಿದೆ.

ದ್ವೀಪ ರಾಷ್ಟ್ರ ಹೊಸ ವರ್ಷವನ್ನು ಎರಡು ಮಾದರಿಗಳ ವೈಟ್ ಬಾಲ್ ಸರಣಿಯಿಂದ ಕಿಕ್‌ಸ್ಟಾರ್ಟ್ ಮಾಡಲು ಭಾರತದ ಪ್ರವಾಸ ಕೈಗೊಳ್ಳಲಿದೆ. ಮುಂಬೈನಲ್ಲಿ ನಡೆದ ಕೊನೆಯ ಟಿ20 ಪಂದ್ಯದಿಂದ ಟಿ20 ಸ್ಪರ್ಧೆಯನ್ನು ಆಯೋಜಿಸುವ ಬಜೆಟ್ ಹೆಚ್ಚಾದ ಕಾರಣ ಪ್ರವೇಶ ಟಿಕೆಟ್‌ಗಳ ಬೆಲೆಯನ್ನು ಹೆಚ್ಚಿಸಲು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ನಿರ್ಧರಿಸಿದೆ.

ENG vs PAK 2nd Test: ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ 3ನೇ ಆಟಗಾರ ಜೋ ರೂಟ್ENG vs PAK 2nd Test: ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ 3ನೇ ಆಟಗಾರ ಜೋ ರೂಟ್

"ವೆಚ್ಚಗಳು ಹೆಚ್ಚಾದಂತೆ ಟಿ20 ಆಯೋಜಿಸುವ ಬಜೆಟ್ ಕೂಡ ಹೆಚ್ಚಾಗಿದೆ. ಆದ್ದರಿಂದ ಸಾರ್ವಜನಿಕರಿಗೆ ಟಿಕೆಟ್ ದರವನ್ನು ಸ್ವಲ್ಪ ಹೆಚ್ಚಿಸುವ ಅಗತ್ಯವಿದೆ ಎಂದು ನಾವು ಭಾವಿಸಿದ್ದೇವೆ. ಎಂಸಿಎ ಕ್ಲಬ್‌ಗಳು ಮತ್ತು ದಾನಿಗಳ (7,000) ಟಿಕೆಟ್ ದರಗಳು ಯಥಾಸ್ಥಿತಿಯಲ್ಲಿರುತ್ತವೆ," ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 6, 2019ರಂದು ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಮುಖಾಮುಖಿಯಾದಾಗ ವಾಂಖೆಡೆ ಸ್ಟೇಡಿಯಂ ಕೊನೆಯ ಬಾರಿಗೆ ಟಿ20 ಪಂದ್ಯವನ್ನು ಆಯೋಜಿಸಿತ್ತು.

IND vs SL: Wankhede Stadium Ticket Price Likely To Increase For India vs Sri Lanka T20 Match

2019ರಿಂದ ಶ್ರೀಲಂಕಾ ಸರಣಿಗಿಂತ ಮುಂಚಿತವಾಗಿ ಟಿಕೆಟ್‌ಗಳ ಬೆಲೆಗಳು ಶೇ.10ರಿಂದ 15ರವರೆಗೆ ಏರಿಕೆಯಾಗಿದೆ. ಇದೀಗ ಮತ್ತೆ ಡಿಸೆಂಬರ್ 9ರಂದು ಶುಕ್ರವಾರ ನಡೆದ ಎಂಸಿಎ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಟಿಕೆಟ್ ದರವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಭಾರತ ವಿರುದ್ಧ ಶ್ರೀಲಂಕಾ 3 ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಆಡುತ್ತದೆ
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಇತ್ತೀಚೆಗಷ್ಟೇ ಮುಕ್ತಾಯಗೊಂಡ ನೆರೆಯ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಸೋತಿದೆ. 50 ಓವರ್‌ಗಳ ಪಂದ್ಯಗಳಲ್ಲಿ ಭಾರತ ಕ್ರಿಕೆಟ್ ತಂಡ ಇತ್ತೀಚಿನ ದ್ವಿಪಕ್ಷೀಯ ಸರಣಿಗಳನ್ನು ಸೋತು ವೈಫಲ್ಯ ಅನುಭವಿಸಿದೆ.

ಬಿಸಿಸಿಐನ ಕೇಂದ್ರ ಒಪ್ಪಂದ ಕಳೆದುಕೊಳ್ಳುವ ಸಂದಿಗ್ಧತೆಯಲ್ಲಿ ಈ ಆಟಗಾರರು; ಸೂರ್ಯ, ಗಿಲ್‌ಗೆ ಬಡ್ತಿಬಿಸಿಸಿಐನ ಕೇಂದ್ರ ಒಪ್ಪಂದ ಕಳೆದುಕೊಳ್ಳುವ ಸಂದಿಗ್ಧತೆಯಲ್ಲಿ ಈ ಆಟಗಾರರು; ಸೂರ್ಯ, ಗಿಲ್‌ಗೆ ಬಡ್ತಿ

ಭಾರತ ತಂಡವು ಈಗ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಭಾರತವು ಕ್ಲೀನ್‌ಸ್ವೀಪ್ ಮಾಡಲು ಎದುರು ನೋಡುತ್ತಿದೆ. ರೆಡ್ ಬಾಲ್ ಸರಣಿಯು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಮಹತ್ವದ್ದಾಗಿದೆ.

ಈ ಟೆಸ್ಟ್ ಸರಣಿಯ ಮುಕ್ತಾಯದ ನಂತರ ಭಾರತವು 2023ರ ಜನವರಿಯಲ್ಲಿ ಶ್ರೀಲಂಕಾ ವಿರುದ್ಧ ಟಿ20 ಸರಣಿಯ ಮೂಲಕ ಹೊಸ ವರ್ಷವನ್ನು ಆರಂಭಿಸಲಿದೆ.

Story first published: Tuesday, December 13, 2022, 5:45 [IST]
Other articles published on Dec 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X