ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಡೆಸುವ ಹಕ್ಕು ಕಳೆದುಕೊಂಡ ಭಾರತ

India loses hosting rights of 2021 mens world boxing championships

ನವದೆಹಲಿ, ಏಪ್ರಿಲ್ 28: 2021ರ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಡೆಸಲಿದ್ದ ಹಕ್ಕನ್ನು ಭಾರತ ಕಳೆದುಕೊಂಡಿದೆ. ಚಾಂಪಿಯನ್‌ಶಿಪ್ ನಡೆಸಲು ಪಾವತಿಸಬೇಕಿದ್ದ ಹಣ ಪಾವತಿಸಲು ರಾಷ್ಟ್ರೀಯ ಫೆಡರೇಶನ್ ವಿಫಲವಾಗಿರುವ ಕಾರಣ ಟೂರ್ನಿ ಆಯೋಜನೆಯ ಹಕ್ಕು ಮಂಗಳವಾರ (ಏಪ್ರಿಲ್ 28) ಸರ್ಬಿಯಾದ ಪಾಲಾಗಿದೆ.

ತ್ರಿಶತಕ ಬಾರಿಸಿದ್ದ ಬ್ಯಾಟ್ ಹರಾಜಿಗಿಟ್ಟ ಪಾಕಿಸ್ತಾನ ಕ್ರಿಕೆಟಿಗ ಅಝರ್ ಅಲಿತ್ರಿಶತಕ ಬಾರಿಸಿದ್ದ ಬ್ಯಾಟ್ ಹರಾಜಿಗಿಟ್ಟ ಪಾಕಿಸ್ತಾನ ಕ್ರಿಕೆಟಿಗ ಅಝರ್ ಅಲಿ

2021ರ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಡೆಸುವ ಹಕ್ಕನ್ನು 2017ರಲ್ಲಿ ಭಾರತ ತನ್ನದಾಗಿಸಿಕೊಂಡಿತ್ತು. ಆದರೆ ಹಣ ಪಾವತಿಸದ ಕಾರಣ ಇಂಟರ್ ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಶನ್ (ಎಐಬಿಎ) ಭಾರತ ಹೊಂದಿದ್ದ ಒಪ್ಪಂದವನ್ನು ಅಂತ್ಯಗೊಳಿಸಿದೆ.

'ಆತ ಕೊರೊನಾಗಿಂತ ಕೆಟ್ಟವ': ರಾಮ್‌ನರೇಶ್‌ ಮೇಲೆ ಕ್ರಿಸ್ ಗೇಲ್ ಕಿಡಿ!'ಆತ ಕೊರೊನಾಗಿಂತ ಕೆಟ್ಟವ': ರಾಮ್‌ನರೇಶ್‌ ಮೇಲೆ ಕ್ರಿಸ್ ಗೇಲ್ ಕಿಡಿ!

'ಚಾಂಪಿಯನ್‌ಶಿಪ್ ಆಯೋಜಿಸಬೇಕಿದ್ದ ನವದೆಹಲಿಯು ಹೋಸ್ಟ್ ಸಿಟಿ ನಿಯಮದಲ್ಲಿ ಸೂಚಿಸಲಾಗಿದ್ದ ಹಣವನ್ನು ಪಾವತಿಸಿಲ್ಲ. ಹೀಗಾಗಿ ಎಐಬಿಎಯು ಭಾರತ ಪಡೆದಿದ್ದ ಗುತ್ತಿಗೆಯನ್ನು ಕೊನೆಗೊಳಿಸಿದೆ. ಟೂರ್ನಿ ರದ್ದು ಮಾಡಿದ್ದಕ್ಕಾಗಿ ಭಾರತ ಕ್ಯಾನ್ಸಲೇಶನ್ ಪೆನಾಲ್ಟಿಯಾಗಿ ಸುಮಾರು 38,029 ರೂ. ನೀಡಬೇಕಿದೆ,' ಎಂದು ಎಐಬಿಎ ತನ್ನ ಹೇಳಿಕೆ ಮೂಲಕ ತಿಳಿಸಿದೆ.

ಸಚಿನ್ ನಾಟೌಟ್ ತೀರ್ಪು ಈಗಲೂ ನನ್ನನ್ನು ಡಿಸ್ಟರ್ಬ್ ಮಾಡುತ್ತಿದೆ: ಅಜ್ಮಲ್ಸಚಿನ್ ನಾಟೌಟ್ ತೀರ್ಪು ಈಗಲೂ ನನ್ನನ್ನು ಡಿಸ್ಟರ್ಬ್ ಮಾಡುತ್ತಿದೆ: ಅಜ್ಮಲ್

ಅಂದ್ಹಾಗೆ 2021ರಲ್ಲಿ ಭಾರತದಲ್ಲಿ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಡೆದಿದ್ದರೆ, ಚೊಚ್ಚಲ ಬಾರಿಗೆ ಈ ಟೂರ್ನಿ ನಡೆಸಿದ ಹೆಗ್ಗಳಿಕೆ ಭಾರತದ್ದಾಗುತ್ತಿತ್ತು. ಆದರೆ ಈಗ ಇದೇ ಚಾಂಪಿಯನ್‌ಶಿಪ್ ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆಯುವುದರಲ್ಲಿದೆ.

Story first published: Tuesday, April 28, 2020, 23:20 [IST]
Other articles published on Apr 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X