ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್ ಬಾಕ್ಸಿಂಗ್ ತಂಡದಿಂದ ಮೇರಿ ಕೋಮ್ ಹೊರಗೆ

Mary Kom Pulls Out of Asian Games Squad

ನವದೆಹಲಿ, ಜೂ. 30: ಐದು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರು 2018ರ ಏಷ್ಯನ್ ಗೇಮ್ಸ್ ನ ಬಾಕ್ಸಿಂಗ್ ತಂಡದಿಂದ ಹೊರ ಬಂದಿದ್ದಾರೆ. ಕೋಮ್ ಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಳ್ಳದಿರುವ ತನ್ನ ನಿರ್ಧಾರವನ್ನು ಶುಕ್ರವಾರ ತಿಳಿಸಿದ್ದಾರೆ.

ಮೇರಿ ಬದಲಿಗೆ ಮೇರಿಯ ಸಹ ಬಾಕ್ಸರ್ ಮಣಿಪುರ ಸರ್ಜುಬಾಲಾ ದೇವಿ ಅವರು ಏಷ್ಯನ್ ಗೇಮ್ಸ್ ವನಿತಾ 51 ಕೆಜಿ ವಿಭಾಗದ ಬಾಕ್ಸಿಂಗ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

'ಸೆಲೆಕ್ಷನ್ ಟ್ರಯಲ್ಸ್ ನಲ್ಲಿ ಸರ್ಜುಬಾಲಾ ದೇವಿ ಅವರು ಪಿಂಕಿರಾಣಿ ಅವರನ್ನು ಸೋಲಿಸಿ ಏಷ್ಯನ್ ಅಂತಿಮ ತಂಡಕ್ಕೆ ಆಯ್ಕೆ ಗಿಟ್ಟಿಸಿಕೊಂಡಿದ್ದಾರೆ. ಮೇರಿ ಮತ್ತು ಸರ್ಜುಬಾಲಾ ಇಬ್ಬರೂ ಸಮಾನ ಅಂಕಗಳನ್ನು ಸಂಪಾದಿಸಿದ್ದಾರೆ' ಎಂದು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್ಐ) ಶುಕ್ರವಾರ ತಿಳಿಸಿದೆ.

ಮೇರಿಯನ್ನು ಇಂಡೋ ಏಷ್ಯನ್ ನ್ಯೂಸ್ ಸರ್ವೀಸಸ್ (ಐಎಎನ್ಎಸ್) ಸಂಪರ್ಕಿಸಿದಾಗ, ಅವರು ನವೆಂಬರ್ ನಲ್ಲಿ ನಡೆಯಲಿರುವ ವರ್ಲ್ಡ್ ಚಾಂಪಿಯನ್ ಶಿಪ್ ನ 48 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವತ್ತ ಗಮನ ಹರಿಸುತ್ತಿರುವುದಾಗಿ ತಿಳಿಸಿದ್ದಾರೆ.

'ಏಷ್ಯನ್ ಗೇಮ್ಸ್ ಬಾಕ್ಸಿಂಗ್ ತಂಡದಿಂದ ನಾನೇ ಸ್ವ-ನಿರ್ಧಾರದಿಂದ ಹೊರ ಬಂದಿದ್ದೇನೆ. ಯಾಕೆಂದರೆ ಏಷ್ಯನ್ ಗೇಮ್ಸ್ ನಲ್ಲಿ 48 ಕೆಜಿ ವಿಭಾಗವೇ ಇಲ್ಲ. ಸದ್ಯ ನಾನು ವರ್ಲ್ಡ್ ಚಾಂಪಿಯನ್ ಶಿಪ್ ನತ್ತ ಗಮನ ಹರಿಸುತ್ತಿದ್ದೇನೆ. ಈ ಚಾಂಪಿಯನ್ ಶಿಪ್ ನಲ್ಲಿ 48 ಕೆಜಿ ವಿಭಾಗವಿದೆ' ಎಂದು ಐಎಎನ್ಎಸ್ ಗೆ ಮೇರಿ ತಿಳಿಸಿದ್ದಾರೆ.

'ಏಷ್ಯನ್ ಗೇಮ್ಸ್ 51 ಕೆಜಿ ವಿಭಾಗದಲ್ಲಿ ನಾನೀಗಾಗಲೇ ಭಾಗವಹಿಸಿ ಒಂದು ಚಿನ್ನ ಮತ್ತು ಒಂದು ಕಂಚಿನ ಪದಕ ಗೆದ್ದಿದ್ದಾಗಿದೆ. ಹಾಗಾಗಿ ನನಗಿರುವ ಈ ಅವಕಾಶವನ್ನು ಮುಂಬರಲಿರುವ ಯುವ ಪ್ರತಿಭೆಗಳಿಗೆ ರವಾನಿಸಲು ಬಯಸಿದ್ದೇನೆ' ಎಂದು ಕೋಮ್ ತಿಳಿಸಿದ್ದಾರೆ.

Story first published: Saturday, June 30, 2018, 17:40 [IST]
Other articles published on Jun 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X