ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೊಕಿಯೋ ಒಲಿಂಪಿಕ್ಸ್: "ಭಾರತೀಯ ಬಾಕ್ಸರ್‌ಗಳು ಹೊಸ ಇತಿಹಾಸವನ್ನು ಸೃಷ್ಟಿಸಲಿದ್ದಾರೆ"

Tokyo olympics: Indian boxers will rewrite history in Olympics says Former coach

ಒಲಿಂಪಿಕ್ಸ್‌ನಲ್ಲಿ ಭಾರತೀಯ ಬಾಕ್ಸರ್‌ಗಳು ಪ್ರತಿ ಬಾರಿಯೂ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುತ್ತಾರೆ. ಈ ಹಿಂದಿನ ಒಲಿಂಪಿಕ್ಸ್‌ಗಳಲ್ಲಿ ಅದಕ್ಕೆ ಪೂರಕವಾದ ಪ್ರದರ್ಶನ ಕೂಡ ಭಾರತೀಯ ಬಾಕ್ಸರ್‌ಗಳಿಂದ ಬಂದಿದೆ. ಈ ಬಾರಿ ಈ ಹಿಂದಿನ ಭಾರತದ ಬಾಕ್ಸರ್‌ಗಳ ದಾಖಲೆಯನ್ನು ತಿದ್ದಿ ಹೊಸ ದಾಖಲೆಯನ್ನು ಭಾರತೀಯ ಬಾಕ್ಸರ್‌ಗಳ ತಂಡ ಬರೆಯಲಿದೆ ಎಂದು ಭಾರತದ ಮಾಜಿ ರಾಷ್ಟ್ರೀಯ ಬಾಕ್ಸಿಂಗ್ ಕೋಚ್ ಗುರುಬಕ್ಸ್ ಸಿಂಗ್ ಸಂಧು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಭಾರತದ ಬಾಕ್ಸ್‌ರ್‌ಗಳು ಒಲಿಂಪಿಕ್ಸ್‌ನಲ್ಲಿ ಈವರೆಗೆ ಎರಡು ಪದಕಗಳನ್ನು ಜಯಿಸಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ವಿಜೇಂದರ್ ಸಿಂಗ್ ಕಂಚಿನ ಪದಕ ಗೆದ್ದಿದ್ದರೆ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಮೇರಿ ಕೋಮ್ ಕಂಚಿನ ಪದಕ ಗೆದ್ದಿದ್ದರು. ಈ ಎರಡು ಸಂದರ್ಭಗಳಲ್ಲಿಯೂ ಸಂಧು ಭಾರತೀಯ ಬಾಕ್ಸಿಂಗ್ ತಂಡದ ರಾಷ್ಟ್ರೀಯ ಕೋಚ್ ಆಗಿದ್ದರು.

ಒಲಿಂಪಿಕ್ಸ್: ಹೆಚ್ಚಾಗುತ್ತಿದೆ ಕೋವಿಡ್ ಆತಂಕ, ತರಬೇತಿ ಆರಂಭಿಸಿದ ಭಾರತೀಯ ಅಥ್ಲೀಟ್‌ಗಳುಒಲಿಂಪಿಕ್ಸ್: ಹೆಚ್ಚಾಗುತ್ತಿದೆ ಕೋವಿಡ್ ಆತಂಕ, ತರಬೇತಿ ಆರಂಭಿಸಿದ ಭಾರತೀಯ ಅಥ್ಲೀಟ್‌ಗಳು

ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ 68ರ ಹರೆಯದ ಗುರುಬಕ್ಸ್ ಸಿಂಗ್ ಸಂಧು ಪಾಟಿಯಾಲಾದಲ್ಲಿ ಈಗ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ. ಮುಂದಿನ ಟೋಕಿಯೋ ಒಲಿಂಪಿಕ್ಸ್ ಬಗ್ಗೆ ಅವರು ಸಾಕಷ್ಟು ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ 9 ಬಾಕ್ಸರ್‌ಗಳು ಅತ್ಯುತ್ತಮ ಪ್ರದರ್ಶನವನ್ನು ನೀಡಲಿದ್ದಾರೆ ಎಂದು ಸಂಧು ಹೇಳಿದ್ದಾರೆ.

"ನನಗೆ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಒಂದಕ್ಕಿಂತ ಹೆಚ್ಚು ಪದಕಗಳನ್ನು ಬಾಕ್ಸರ್‌ಗಳು ಪಡೆಯಲಿದ್ದಾರೆ. ಮತ್ತು ಈ ಬಾರಿ ಪದಕದ ಬಣ್ಣವು ಕೂಡ ಕಂಚಿಗಿಂತ ಉತ್ತಮವಾಗಿರುವ ವಿಶ್ವಾಸವಿದೆ" ಎಂದಿದ್ದಾರೆ ಗುರುಬಕ್ಸ್ ಸಿಂಗ್ ಸಂಧು.

"ನಾನು ಈ ತಂಡದ ಬೆಳವಣಿಗೆಯನ್ನು ನೋಡಿಕೊಂಡು ಬಂದಿದ್ದೇನೆ. ಅವರ ಬಗ್ಗೆ ನನಗೆ ತಿಳಿದಿದೆ. ಯಾಕೆಂದರೆ ಅವರಲ್ಲಿ ಕೆಲವರು ಕ್ಯಾಂಪ್‌ಗೆ ಬಂದಾಗ ನಾನು ಇನ್ನೂ ಇದ್ದೆ. ಎಲ್ಲವೂ ಸರಿಯಾಗಿ ನಡೆದರೆ ಇದು ಇತಿಹಾಸ ನಿರ್ಮಿಸುವ ಒಲಿಂಪಿಕ್ಸ್ ಆಗಲಿದೆ" ಎಂಬ ವಿಶ್ವಾಸದ ಮಾತುಗಳನ್ನು ಬಾರತೀಯ ಬಾಕ್ಸರ್‌ಗಳ ತಂಡದ ಬಗ್ಗೆ ಮಾಜಿ ಕೋಚ್ ಗುರುಬಕ್ಸ್ ಸಿಂಗ್ ಸಂಧು ವ್ಯಕ್ತಪಡಿಸಿದ್ದಾರೆ

Story first published: Tuesday, July 20, 2021, 16:42 [IST]
Other articles published on Jul 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X