ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ENG vs NZ: ಮೊದಲ ದಿನವೇ 17 ವಿಕೆಟ್‌ ಪತನ; ಲಾರ್ಡ್ಸ್ ಪಿಚ್ ಟ್ರೋಲ್ ಮಾಡಿದ ವಾಸೀಂ ಜಾಫರ್, ದೊಡ್ಡ ಗಣೇಶ್

17 Wickets Fall on First Day In ENG vs NZ 1st Test; Wasim Jaffer and Dodda Ganesh Who Made the Lords Pitch Troll

ಗುರುವಾರ (ಜೂನ್ 3) ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಮೊದಲ ಟೆಸ್ಟ್‌ನ ಮೊದಲ ದಿನ 17 ವಿಕೆಟ್‌ಗಳು ಪತನವಾದವು. ಮೊದಲು ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ 132 ರನ್‌ಗಳಿಗೆ ಆಲೌಟ್ ಆದರೆ, ನಂತರ ನ್ಯೂಜಿಲೆಂಡ್ ಬೌಲರ್‌ಗಳು ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ತಂಡವನ್ನು 1ನೇ ದಿನದ ಮುಕ್ತಾಯಕ್ಕೆ ಮುನ್ನ 116/7ಕ್ಕೆ ನಿಯಂತ್ರಿಸಿದರು.

ರಣಜಿ ನಾಕೌಟ್ಸ್, IND vs SA, ಫ್ರೆಂಚ್ ಓಪನ್ ಸೇರಿದಂತೆ ಜೂನ್ ತಿಂಗಳ ಸಂಪೂರ್ಣ ಕ್ರೀಡಾ ಕ್ಯಾಲೆಂಡರ್ರಣಜಿ ನಾಕೌಟ್ಸ್, IND vs SA, ಫ್ರೆಂಚ್ ಓಪನ್ ಸೇರಿದಂತೆ ಜೂನ್ ತಿಂಗಳ ಸಂಪೂರ್ಣ ಕ್ರೀಡಾ ಕ್ಯಾಲೆಂಡರ್

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಮೊದಲ ಟೆಸ್ಟ್‌ನ ಮೊದಲ ದಿನದಾಟದ ಕುರಿತು ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಅವರು ಬಾಲಿವುಡ್ ಚಲನಚಿತ್ರ "ರೆಡಿ'ಯ ಜನಪ್ರಿಯ ಗೀತೆ "ಮೇನ್ ಕರೂನ್ ಟು ಸಾಲಾ ಕ್ಯಾರೆಕ್ಟರ್ ಧೀಲಾ ಹೈ'ಯ ಸಾಲುಗಳೊಂದಿಗೆ ವಿಶಿಷ್ಟವಾದ ಸಲ್ಮಾನ್ ಖಾನ್ ಮೀಮ್‌ನೊಂದಿಗೆ ಲಾರ್ಡ್ಸ್ ಪಿಚ್ ಅನ್ನು ಟ್ವಿಟ್ಟರ್‌ನಲ್ಲಿ ಟ್ರೋಲ್ ಮಾಡಿದ್ದಾರೆ.

ಭಾರತದಲ್ಲಿ ಪಿಚ್ ಪರಿಸ್ಥಿತಿಗಳ ಬಗ್ಗೆ ಮಾತನಾಡುತ್ತಾರೆ

ಭಾರತದಲ್ಲಿ ಪಿಚ್ ಪರಿಸ್ಥಿತಿಗಳ ಬಗ್ಗೆ ಮಾತನಾಡುತ್ತಾರೆ

"ಲಾರ್ಡ್ಸ್‌ನಲ್ಲಿ ಒಂದೇ ದಿನದಲ್ಲಿ 17 ವಿಕೆಟ್‌ಗಳು ಬಿದ್ದಾಗ, ಬೌಲರ್‌ಗಳ ಕೌಶಲ್ಯದ ಬಗ್ಗೆ ಮಾತನಾಡುತ್ತಾರೆ. ಅಹಮದಾಬಾದ್‌ನಲ್ಲಿ ಒಂದು ದಿನದಲ್ಲಿ 17 ವಿಕೆಟ್‌ಗಳು ಬಿದ್ದಾಗ, ಪಿಚ್ ಪರಿಸ್ಥಿತಿಗಳ ಬಗ್ಗೆ ಮಾತನಾಡುತ್ತಾರೆ. #ENGvNZ," ಎಂದು ವಾಸಿಂ ಜಾಫರ್ ಟ್ವೀಟ್ ಮಾಡಿದ್ದಾರೆ.

ವಾಸಿಂ ಜಾಫರ್ ಮಾತ್ರ ಲಾರ್ಡ್ಸ್ ಪಿಚ್ ಅನ್ನು ಟೀಕಿಸದೇ, ಭಾರತದ ಇನ್ನೊಬ್ಬ ಮಾಜಿ ವೇಗದ ಬೌಲರ್ ದೊಡ್ಡ ಗಣೇಶ್ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಟೆಸ್ಟ್‌ನ ಮೊದಲ ದಿನದಲ್ಲಿ 17 ವಿಕೆಟ್‌ಗಳು ಬಿದ್ದಿದ್ದರೆ, ಭಾರತದಲ್ಲಿ ಪಿಚ್ ನರಕವಾಗಿ ಮಾರ್ಪಾಡುಗುತ್ತಿತ್ತು. ಆದರೆ ಇದು ಪ್ರಭು ನಿಮಗೆ ಗೊತ್ತಿದೆ #ದೊಡ್ಡಮಾತು #ENGvNZ #CricketTwitter," ಎಂದು ದೊಡ್ಡ ಗಣೇಶ್ ಟ್ವೀಟ್ ಮಾಡಿದ್ದಾರೆ.

ಲಾರ್ಡ್ಸ್ ಪಿಚ್ ಟೀಕಿಸಿದ ದೊಡ್ಡಗಣೇಶ್

ಲಾರ್ಡ್ಸ್ ಪಿಚ್ ಟೀಕಿಸಿದ ದೊಡ್ಡಗಣೇಶ್

ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ ಮತ್ತು ಚೊಚ್ಚಲ ಟೆಸ್ಟ್ ಪಂದ್ಯವಾಡಿದ ಮ್ಯಾಥ್ಯೂ ಪಾಟ್ಸ್ ತಲಾ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರೆ, ನ್ಯೂಜಿಲೆಂಡ್ ಪರ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್ ಮತ್ತು ಕೈಲ್ ಜೇಮಿಸನ್ ತಲಾ ಎರಡು ವಿಕೆಟ್ ಪಡೆದರು.

ಗುರುವಾರ ಲಾರ್ಡ್ಸ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದ ನಂತರ ತಮ್ಮ ಕಣ್ಣಲ್ಲಿ ಸ್ವಲ್ಪ ಕಣ್ಣೀರು ಇತ್ತು ಎಂದು ಇಂಗ್ಲೆಂಡ್‌ನ ಯುವ ವೇಗದ ಬೌಲರ್ ಮ್ಯಾಥ್ಯೂ ಪಾಟ್ಸ್ ಹೇಳಿದ್ದಾರೆ. 23ರ ಹರೆಯದ ಪಾಟ್ಸ್, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್‌ರನ್ನು ಎರಡು ರನ್‌ಗಳಿಗೆ ಔಟ್ ಮಾಡಿದರು. ನಂತರ ಡ್ಯಾರಿಲ್ ಮಿಚೆಲ್, ಟಾಮ್ ಬ್ಲುಂಡೆಲ್ ಮತ್ತು ಅಜಾಜ್ ಪಟೇಲ್ ಅವರನ್ನು ಔಟ್ ಮಾಡಿದರು.

ನಾವು ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡಿದ್ದೇವೆ

ನಾವು ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡಿದ್ದೇವೆ

ಡರ್ಹಾಮ್ ವೇಗಿ ಮ್ಯಾಥ್ಯೂ ಪಾಟ್ಸ್ ಈ ವರ್ಷ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಬೌಲರ್ ಆಗಿದ್ದು, ತಲಾ 18.57 ರಂತೆ 35 ವಿಕೆಟ್‌ಗಳನ್ನು ಕಬಳಿಸಿದ್ದಾರೆ. "ಇದು ಉತ್ತಮ ಚೊಚ್ಚಲ ಪಂದ್ಯವಾಗಿತ್ತು. ನನ್ನ ಪ್ರದರ್ಶನ ಉತ್ತಮಗೊಳಿಸಲು ಆರಂಭದಲ್ಲಿ ಕೆಲವು ವಿಕೆಟ್‌ಗಳನ್ನು ಪಡೆದಿರುವುದು ಸಂತಸ ತಂದಿದೆ. ನಾವು ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡಿದ್ದೇವೆ ಮತ್ತು ವಿಕೆಟ್‌ಗಳನ್ನು ಪಡೆಯಲು ನೋಡಿದ್ದೇವೆ," ಮ್ಯಾಥ್ಯೂ ಪಾಟ್ಸ್ ಸ್ಕೈ ಸ್ಪೋರ್ಟ್ಸ್‌ಗೆ ತಿಳಿಸಿದರು.

ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಓಪನರ್ ಸ್ಥಾನ ಯಾರಿಗೆ? ದ್ರಾವಿಡ್ & ರಾಹುಲ್ ಗೆ ಟೆನ್ಶನ್ | OneIndia Kannada
ನನ್ನ ಹೆಚ್ಚಿನ ಯಶಸ್ಸು ನನ್ನ ಕುಟುಂಬಕ್ಕೆ ಸೇರಿದೆ

ನನ್ನ ಹೆಚ್ಚಿನ ಯಶಸ್ಸು ನನ್ನ ಕುಟುಂಬಕ್ಕೆ ಸೇರಿದೆ

"ನನ್ನ ಹೆಚ್ಚಿನ ಯಶಸ್ಸು ನನ್ನ ಕುಟುಂಬಕ್ಕೆ ಸೇರಿದೆ. ಇದು ಅವರ ಹಾಗೂ ನನ್ನ ಶ್ರಮಕ್ಕೆ ಸಾಕ್ಷಿ. ಅದೊಂದು ದೊಡ್ಡ ರೀತಿಯ ಸಾಧನೆಯಾಗಿತ್ತು. ನಾನು ನಿಜವಾಗಿಯೂ ಅದರಲ್ಲಿ ಮುಳುಗಿದ್ದೇನೆ. ಇಂದು ಮುಂಜಾನೆ ಕಣ್ಣಿನಲ್ಲಿ ಸ್ವಲ್ಪ ನೀರು ಬಂತು ಮತ್ತು ನನ್ನ ಅಮ್ಮ ಮತ್ತು ತಂದೆ ಅವರಲ್ಲೂ ಕಣ್ಣೀರು ಇರಬಹುದೆಂದು ನಾನು ಊಹಿಸಬಲ್ಲೆ," ಎಂದು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು.

Story first published: Friday, June 3, 2022, 14:35 [IST]
Other articles published on Jun 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X