ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಬ್ಬರು ಆರಂಭಿಕರೂ ಶೂನ್ಯಕ್ಕೆ ಔಟ್: ಟಿ20I ಕ್ರಿಕೆಟ್‌ ಇನ್ನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ 5 ಆರಂಭಿಕ ಜೋಡಿ

5 Opening pair who were out for individual score of Zero in International T20I format

ಯಾವುದೇ ಮಾದರಿಯಾಗಿದ್ದರೂ ಕ್ರಿಕೆಟ್‌ನಲ್ಲಿ ಆರಂಭಿಕ ಆಟಗಾರರ ಪಾತ್ರ ಬಹಳ ಪ್ರಮುಖ. ಮೈದಾನದ ಪರಿಸ್ಥಿತಿಯನ್ನು ಅರಿತುಕೊಂಡು ಇನ್ನಿಂಗ್ಸ್ ಕಟ್ಟುವಲ್ಲಿ ಆರಂಭಿಕ ಜೋಡಿ ಮಹತ್ವದ ಪಾತ್ರವಹಿಸುತ್ತಾರೆ. ಆರಂಭಿಕ ಜೋಡಿಯಿಂದ ಉತ್ತಮ ಜೊತೆಯಾಟ ಬಂದರೆ ಪಂದ್ಯದ ಮೇಲಿನ ಉತ್ಸಾಹವೂ ಹೆಚ್ಚಾಗುತ್ತದೆ. ಇದರ ಜೊತೆಗೆ ತಂಡ ಬೃಹತ್ ಮೊತ್ತವನ್ನು ಪೇರಿಸಲು ಸಾಧ್ಯವಾಗುತ್ತದೆ.

ಹೀಗಾಗಿಯೇ ಪ್ರತಿ ತಂಡಗಳು ಕೂಡ ಸ್ಪೆಶಲಿಸ್ಟ್ ಆರಂಬಿಕ ಜೋಡಿಯನ್ನು ಹೊಂದಿರುತ್ತದೆ. ಕ್ರಿಕೆಟ್ ಇತಿಹಾಸದಲ್ಲಿ ಸಾಕಷ್ಟು ದಿಗ್ಗಜ ಆರಂಭಿಕ ಆಟಗಾರರು ತಮ್ಮ ತಂಡಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಮೂರು ಮಾದರಿಯಲ್ಲಿಯೂ ಆರಂಭಿಕ ಆಟಗಾರರ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ. ಕೆಲ ಸಂದರ್ಭಗಳಲ್ಲಿ ಆರಂಭಿಕ ಆಟಗಾರರೇ ಪಂದ್ಯಗಳನ್ನು ಗೆಲ್ಲಿಸಿಕೊಡುತ್ತಾರೆ. ಆದರೆ ಕೆಲ ಸಂದರ್ಭಗಳಲ್ಲಿ ಅದಕ್ಕೆ ವಿರುದ್ಧವೂ ನಡೆಯುತ್ತಿದೆ.

ಜನಾಂಗೀಯ ನಿಂದನೆ: ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಸೇರಿ 4 ಆಟಗಾರರ ಮೇಲೆ ಆರೋಪಜನಾಂಗೀಯ ನಿಂದನೆ: ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಸೇರಿ 4 ಆಟಗಾರರ ಮೇಲೆ ಆರೋಪ

ಅಪರೂಪದ ಸಂದರ್ಭಗಳಲ್ಲಿ ಆರಂಬಿಕ ಆಟಗಾರರಿಬ್ಬರು ಕೂಡ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡು ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ ದೃಷ್ಟಾಂತಗಳಿದೆ. ಟಿ20 ಕ್ರಿಕೆಟ್‌ನಲ್ಲಿಯೂ ಅಂಥಾ ಸಂದರ್ಭಗಳು ಉಂಟಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಾದರಿಯ ಇನ್ನಿಂಗ್ಸ್‌ವೊಂದರಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಇಬ್ಬರು ಆಟಗಾರರು ಕೂಡ ಶೂನ್ಯಕ್ಕೆ ಔಟಾದ ಐದು ಜೋಡಿಯ ಬಗ್ಗೆ ಇಲ್ಲಿದೆ ಮಾಹಿತಿ.

ರೋಹಿತ್ ಶರ್ಮಾ- ಅಜಿಂಕ್ಯಾ ರಹಾನೆ

ರೋಹಿತ್ ಶರ್ಮಾ- ಅಜಿಂಕ್ಯಾ ರಹಾನೆ

2015-16ರ ಏಷ್ಯಾಕಪ್ ಟೂರ್ನಿಯಲ್ಲಿ ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮಾ ಭಾರತ ತಂಡದ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದರು. ಈ ಟೂರ್ನಿಯಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಮುಖಾಮುಖಿಯಾಗಿದ್ದಾಗ ಈ ಇಬ್ಬರು ಆರಂಬಿಕರು ಕೂಡ ಶೂನ್ಯಕ್ಕೆ ಔಟಾದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಕೇವಲ 83 ರನ್ ಗಳಿಸಿತು. ಹೀಗಾಗಿ ಭಾರತಕ್ಕೆ ಗುರಿ ಸುಲಭವಾಗಿತ್ತು. ಆದರೆ ಮೊಹಮ್ಮದ್ ಅಮೀರ್ ತನ್ನ ಅದ್ಭುತ ಬೌಲಿಂಗ್‌ನಿಂದ ಆರಂಭಿಕರನ್ನು ಶೂನ್ಯಕ್ಕೆ ಔಟ್ ಮಾಡಿದ ಕಾರಣ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆದರೆ ವಿರಾಟ್ ಕೊಹ್ಲಿ ಅವರ ಅದ್ಭುತ ಪ್ರದರ್ಶನದಿಂದಾಗಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.

ಕ್ರಿಸ್ ಗೇಲ್- ಚಾಡ್ವಿಕ್ ವಾಲ್ಟನ್

ಕ್ರಿಸ್ ಗೇಲ್- ಚಾಡ್ವಿಕ್ ವಾಲ್ಟನ್

2017-18ರಲ್ಲಿ ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯಲ್ಲಿ ವಿಂಡಿಸ್ ತಂಡ ಕೂಡ ಆರಂಭಿಕರನ್ನು ಶೂನ್ಯಕ್ಕೆ ಕಳೆದುಕೊಂಡಿತ್ತು. ಆಗ ವೆಸ್ಟ್ ಇಂಡಿಸ್ ತಂಡದ ಆರಂಭಿಕರಾಗಿದ್ದವರು ಚಾಡ್ವಿಕ್ ವಾಲ್ಟನ್ ಮತ್ತು ಕ್ರಿಸ್ ಗೇಲ್. ಸರಣಿಯ ಮೂರನೇ ಪಂದ್ಯದಲ್ಲಿ ಆರಂಭಿಕರ ಆಟಗಾರರಿಬ್ಬರು ಸೊನ್ನೆ ಸುತ್ತಿದ್ದರಿ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆಲುವಿಗೆ 243 ರನ್ ಗಳ ಅಗತ್ಯವಿತ್ತು. ಆರಂಬಿಕನಾಗಿ ಕಣಕ್ಕಿಳಿದಿದ್ದ ವಾಲ್ಟನ್ ಮೊದಲ ಓವರ್‌ನಲ್ಲಿಯೇ ಶೂನ್ಯಕ್ಕೆ ಔಟಾದರು. ನಂತರ 4 ಎಸೆತಗಳ ಅಂತರದಲ್ಲಿ ಗೇಲ್ ಕೂಡ ಯಾವುದೇ ರನ್ ಗಳಿಸದೆ ಔಟಾದರು.

ಸೌಮ್ಯ ಸರ್ಕಾರ್- ತಮಿಮ್ ಇಕ್ಬಾಲ್

ಸೌಮ್ಯ ಸರ್ಕಾರ್- ತಮಿಮ್ ಇಕ್ಬಾಲ್

2018 ರಲ್ಲಿ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ನಡುವಿನ ಟಿ 20 ಸರಣಿಯಲ್ಲಿ ಬಾಂಗ್ಲಾದೇಶದ ಆರಂಭಿಕ ಆಟಗಾರರು ಕೂಡ ಇಂಥಾದ್ದೇ ಪರಿಸ್ಥಿತಿಯನ್ನು ಎದುರಿಸಿದ್ದರು. ಬಾಂಗ್ಲಾದೇಶದ ಆರಂಭಿಕರಾದ ಸೌಮ್ಯ ಸರ್ಕಾರ್ ಮತ್ತು ತಮೀಮ್ ಇಕ್ಬಾಲ್ ವಿಂಡೀಸ್ ಬೌಲರ್ ಆಶ್ಲೇ ನರ್ಸ್ ಅವರ ಮೊದಲ ಓವರ್‌ನಲ್ಲಿ ಶೂನ್ಯ ಸುತ್ತಿ ಔಟಾದರು. ಆ ಪಂದ್ಯದಲ್ಲಿ ಬಾಂಗ್ಲಾದೇಶ ಸೋಲು ಅನುಭವಿಸಿತ್ತು

ಅಹ್ಮದ್ ಶಹ್ಜಾದ್- ಕಮ್ರಾನ್ ಅಕ್ಮಲ್

ಅಹ್ಮದ್ ಶಹ್ಜಾದ್- ಕಮ್ರಾನ್ ಅಕ್ಮಲ್

2014ರ ಟಿ20 ವಿಶ್ವಕಪ್‌ನ್ಲಲಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಯಾಗಿದ್ದ ಸಂದರ್ಭದಲ್ಲಿ ಪಾಕ್ ಆರಂಭಿಕರು ಶೂನ್ಯಕ್ಕೆ ಔಟಾಗಿದ್ದರು. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ 167 ರನ್‌ಗಳ ಗುರಿಯನ್ನು ಬೆನ್ನಟ್ಟಲು ಆರಂಬಿಸಿತ್ತು. ಆದರೆ ಪಾಕ್‌ನ ಆರಂಭಿಕ ಆಟಗಾರರಾದ ಅಹ್ಮದ್ ಶಹಜಾದ್ ಮತ್ತು ನಂತರ ಕಮ್ರಾನ್ ಅಕ್ಮಲ್ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಬೇಕಾಯಿತು.

ಜೆಸ್ಸಿ ರೈಡರ್- ಮಾರ್ಟಿನ್ ಗಪ್ಟಿಲ್

ಜೆಸ್ಸಿ ರೈಡರ್- ಮಾರ್ಟಿನ್ ಗಪ್ಟಿಲ್

2010 ರ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದಾಗ ಕಿವೀಸ್ ಪಡೆಯ ಆರಂಭಿಕರು ಕೂಡ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡಿದ್ದರು. ನ್ಯೂಜಿಲೆಂಡ್ ತಂಡದ ಸ್ಪೋಟಕ ಆರಂಭಿಕರಾದ ಜೆಸ್ಸಿ ರೈಡರ್ ಮತ್ತು ಮಾರ್ಟಿನ್ ಗುಪ್ಟಿಲ್ ಇಬ್ಬರು ಕೂಡ ಈ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು.

Story first published: Friday, June 17, 2022, 14:22 [IST]
Other articles published on Jun 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X