ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರಂಭಿಕನಾಗಿ ಶುಬ್ಮನ್ ಗಿಲ್ ಕಣಕ್ಕಿಳಿಯುವುದು ಬೇಡ್ವೇ ಬೇಡ ಎಂದಿದ್ಯಾಕೆ ಆಕಾಶ್ ಚೋಪ್ರ

Aakash Chopra pointed Shubman Gill weekness said he shouldnt open in Test cricket

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಐದನೇ ಪಂದ್ಯದ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ. ಆರಂಭಿಕ ಆಟಗಾರ ಕೆಎಲ್ ರಾಹುಲ್ ಗಾಯದ ಕಾರಣ ಈ ಸರಣಿಯಿಂದ ಹೊರಗುಳಿದಿದ್ದು ಇದೀಗ ರೊಹಿತ್ ಶರ್ಮಾ ಕೂಡ ಕೋವಿಡ್ ಕಾರಣದಿಂದ ಅಂದಿನ ಪಂದ್ಯಕ್ಕೆ ಅಲಭ್ಯವಾಗುವ ಸಾಧ್ಯತೆಯಿದೆ.

ಈ ಪಂದ್ಯದಲ್ಲಿ ಭಾರತ ತಂಡದ ಪರವಾಗಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲು ಶುಬ್ಮನ್ ಗಿಲ್ ಸಜ್ಜಾಗಿದ್ದಾರೆ. ಆದರೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಶುಬ್ಮನ್ ಗಿಲ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶುಬ್ಮನ್ ಗಿಲ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಬದಲು ಬೇರೆ ಕ್ರಮಾಂಕವನ್ನು ಸೂಚಿಸಿದ್ದಾರೆ ಆಕಾಶ್ ಚೋಪ್ರ.

ಐರ್ಲೆಂಡ್ vs ಭಾರತ: ನಾಯಕತ್ವದ ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯಐರ್ಲೆಂಡ್ vs ಭಾರತ: ನಾಯಕತ್ವದ ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ

ಶುಬ್ಮನ್ ಗಿಲ್ ದೌರ್ಬಲ್ಯ ತಿಳಿಸಿದ ಚೋಪ್ರ

ಶುಬ್ಮನ್ ಗಿಲ್ ದೌರ್ಬಲ್ಯ ತಿಳಿಸಿದ ಚೋಪ್ರ

ಟೆಸ್ಟ್ ತಂಡದಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಶುಬ್ಮನ್ ಗಿಲ್ ಆರಂಭಿಕನಾಗಿ ಕಣಕ್ಕಿಳಿಯಲು ಸೂಕ್ತನಲ್ಲ ಎಂದಿದ್ದಾರೆ. ಶುಬ್ಮನ್ ಗಿಲ್ ಬ್ಯಾಟಿಂಗ್‌ನಲ್ಲಿನ ಹುಳುಕು ಹೇಳಿದ್ದಾರೆ ಆಕಾಶ್ ಚೋಪ್ರ. ಹೊಸ ಚೆಂಡಿನಲ್ಲಿ ಚೆಂಡು ಸ್ವಿಂಗ್ ಆಗುವ ಸಂದರ್ಭದಲ್ಲಿ ಶುಬ್ಮನ್ ಗಿಲ್ ಸರಾಗವಾಗಿ ಬಾರಿಸಲು ಪರದಾಡುತ್ತಾರೆ. ಹಾಗಾಗಿ ಆರಂಬಿಕನಾಗಿ ಆಡುವುದಕ್ಕಿಂತಲೂ ಮೂರನೇ ಅಥವಾ ನಾಲ್ಕನೇ ಕ್ರಮಾಂಕದಲ್ಲಿಕಣಕ್ಕಿಳಿದರೆ ಮತ್ತಷ್ಟು ಯಶಸ್ಸು ಸಾಧಿಸಲಿದ್ದಾರೆ ಎಂದಿದ್ದಾರೆ ಆಕಾಶ್ ಚೋಪ್ರ.

ಆರಂಭಿಕನಾಗಿ ಖಂಡಿತಾ ಗಿಲ್ ಕಣಕ್ಕಿಳಿಯಲಿದ್ದಾರೆ, ಆದರೆ..

ಆರಂಭಿಕನಾಗಿ ಖಂಡಿತಾ ಗಿಲ್ ಕಣಕ್ಕಿಳಿಯಲಿದ್ದಾರೆ, ಆದರೆ..

"ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಶುಬ್ಮನ್ ಗಿಲ್ ಖಂಡಿತವಾಗಿಯೂ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಆದರೆ ನನ್ನ ಪ್ರಕಾರ ಆ ಸ್ಥಾನಕ್ಕೆ ಆತ ಸೂಕ್ತ ಆಟಗಾರನಲ್ಲ. ನನ್ನ ಪ್ರಕಾರ ಮೂರು ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಆತನಿಂದ ಅತ್ಯುತ್ತಮ ಪ್ರದರ್ಶನ ಬರಲಿದೆ. ಚೆಂಡು ತಿರುವು ಪಡೆಯುತ್ತಿದ್ದಾಗ ಆತ ಸರಾಗವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅದನ್ನು ನಾವು ತವರಿನಲ್ಲಿಯೂ ನೋಡಿದ್ದೇವೆ" ಎಂದಿದ್ದಾರೆ ಆಕಾಶ್ ಚೋಪ್ರ.

ಕಳೆದ ವರ್ಷ ಆಡಿದ್ದ ಇಬ್ಬರು ಆರಂಭಿಕರೂ ಅಲಭ್ಯ

ಕಳೆದ ವರ್ಷ ಆಡಿದ್ದ ಇಬ್ಬರು ಆರಂಭಿಕರೂ ಅಲಭ್ಯ

ಕಳೆದ ವರ್ಷ ಭಾರತದ ಇಂಗ್ಲೆಂಡ್ ಪ್ರವಾಸದಲ್ಲಿ ಮೊದಲ ನಾಲ್ಕು ಪಂದ್ಯಗಳಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಆಡಿದ್ದರು. ಆದರೆ ಈ ಬಾರಿಯ ಸರಣಿಯಲ್ಲಿ ಈ ಇಬ್ಬರು ಆಟಗಾರರು ಲಬ್ಯವಿಲ್ಲ. ಕೆಎಲ್ ರಾಹುಲ್ ಗಾಯದಿಂದ ಅಲಭ್ಯವಾಗಿದ್ದರೆ ರೋಹಿತ್ ಶರ್ಮಾ ಕೊರೊನಾವೈರಸ್ ಕಾರಣದಿಂದಾಗಿ ಕಣಕ್ಕಿಳಿಯುವ ಸಾಧ್ಯತೆ ಕಡಿಮೆಯಿದೆ.

ತಂಡ ಸೇರಿಕೊಂಡ ಮಯಾಂಕ್

ತಂಡ ಸೇರಿಕೊಂಡ ಮಯಾಂಕ್

ಇನ್ನು ರೋಹಿತ್ ಶರ್ಮಾ ಕೊರೊನಾವೈರಸ್ ಕಾರಣದಿಂದ ಅಲಭ್ಯವಾಗುವ ಸಾಧ್ಯತೆ ಹಿನ್ನಲೆಯಲ್ಲಿ ಮಯಾಂಕ್ ಅಗರ್ವಾಲ್ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ವಿದೇಶಿ ನೆಲದಲ್ಲಿ ಮಯಾಂಕ್ ಅಗರ್ವಾಲ್ ಉತ್ತಮ ಆಯ್ಕೆಯಲ್ಲ ಎಂದಿದ್ದಾರೆ ಆಕಾಶ್ ಚೋಪ್ರ. "ಮಯಾಂಕ್ ಅಗರ್ವಾಲ್ ಭಾರತದ ನೆಲದಲ್ಲಿ ಹೆಚ್ಚು ರನ್‌ಗಳಿಸುವ ಆಟಗಾರ. ಭಾರತದಲ್ಲಿ ಅವರನ್ನು ತೆಡೆಯುವವರಿಲ್ಲ. ಆದೇ ಕಾರಣದಿಂದಾಗಿ ಅವರು ವಿದೇಶಿ ಪ್ರವಾಸಕ್ಕೂ ಆಯ್ಕೆಯಾಗಿದ್ದಾರೆ. ಆದರೆ ವಿದೇಶಿ ನೆಲದಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ದೊರೆತಿಲ್ಲ.ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಅವರಿಂದ ಉತ್ತಮ ಪ್ರದರ್ಶನ ಬಂದಿಲ್ಲ. ಹಾಗಾಗಿ ಇಂಗ್ಲೆಂಡ್ ಪ್ರವಾಸಕ್ಕೆ ಮಯಾಂಕ್ ಆರಂಬದಲ್ಲಿ ಆಯ್ಕೆಯಾಗಿಲ್ಲ" ಎಂದಿದ್ದಾರೆ.

Story first published: Tuesday, June 28, 2022, 10:38 [IST]
Other articles published on Jun 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X