ಆರ್‌ಸಿಬಿ ಪರ 200 ಪಂದ್ಯ ಪೂರೈಸಿದ ಕೊಹ್ಲಿಗೆ ಸ್ನೇಹಿತ ಎಬಿಡಿ ಕಡೆಯಿಂದ ಸಿಕ್ತು ವಿಶೇಷ ಉಡುಗೊರೆ

ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಐಪಿಎಲ್ ಇತಿಹಾಸ ಕಂಡ ಅತ್ಯುತ್ತಮ ಸ್ನೇಹಿತರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಆಟಗಾರರು. ಇಬ್ಬರೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 10 ವರ್ಷಗಳಿಂದ ಒಟ್ಟಿಗೆ ಆಟವನ್ನು ಆಡುತ್ತಿದ್ದು ತಮ್ಮ ನಡುವಿನ ಸ್ನೇಹ ಎಂಥದ್ದು ಎಂಬುದನ್ನು ಆಗಾಗ ಸಂದರ್ಶನಗಳಲ್ಲಿ ವ್ಯಕ್ತಪಡಿಸುತ್ತಿರುತ್ತಾರೆ.

ಐಪಿಎಲ್: ಕೆಕೆಆರ್ ವಿರುದ್ಧದ ಹೀನಾಯ ಸೋಲಿಗೆ ಕಾರಣ ಯಾರೆಂಬುದನ್ನು ಬಹಿರಂಗಪಡಿಸಿದ ಕೊಹ್ಲಿಐಪಿಎಲ್: ಕೆಕೆಆರ್ ವಿರುದ್ಧದ ಹೀನಾಯ ಸೋಲಿಗೆ ಕಾರಣ ಯಾರೆಂಬುದನ್ನು ಬಹಿರಂಗಪಡಿಸಿದ ಕೊಹ್ಲಿ

ಇದೀಗ ಮತ್ತೊಮ್ಮೆ ಈ ಇಬ್ಬರ ನಡುವಿನ ಸ್ನೇಹಕ್ಕೆ ನಿದರ್ಶನವೆಂಬಂತೆ ಎಬಿ ಡಿವಿಲಿಯರ್ಸ್ ವಿರಾಟ್ ಕೊಹ್ಲಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ಸೆಪ್ಟೆಂಬರ್ 20ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ವಿರಾಟ್ ಕೊಹ್ಲಿ ಐಪಿಎಲ್ ವೃತ್ತಿಜೀವನದಲ್ಲಿ ಮೈಲಿಗಲ್ಲಿನ ಪಂದ್ಯವಾಗಿತ್ತು, ಈ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ ಆಡಿದ 200ನೇ ಪಂದ್ಯವಾಗಿತ್ತು.

'ಧೋನಿ ಟಿಪ್ಸ್ ಕೊಟ್ಟಿದ್ದಾರೆ, ಒಳ್ಳೆಯ ಆರಂಭ ಸಿಕ್ಕಿದೆ, ಈ ಸಲ ಕಪ್ ನಮ್ದೇ' ಎಂದ ಆರ್‌ಸಿಬಿ ಆಟಗಾರ!'ಧೋನಿ ಟಿಪ್ಸ್ ಕೊಟ್ಟಿದ್ದಾರೆ, ಒಳ್ಳೆಯ ಆರಂಭ ಸಿಕ್ಕಿದೆ, ಈ ಸಲ ಕಪ್ ನಮ್ದೇ' ಎಂದ ಆರ್‌ಸಿಬಿ ಆಟಗಾರ!

ಈ ಮೂಲಕ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿಯೇ ಒಂದೇ ಫ್ರಾಂಚೈಸಿ ಪರ 200 ಪಂದ್ಯಗಳನ್ನಾಡಿದ ಮೊದಲ ಐಪಿಎಲ್ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಪಂದ್ಯ ಆರಂಭವಾಗುವ ಮುನ್ನ ವಿರಾಟ್ ಕೊಹ್ಲಿ 200 ಪಂದ್ಯಗಳನ್ನು ಪೂರೈಸುತ್ತಿರುವುದರ ಕುರಿತು ವಿಶೇಷವಾದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿಗೆ ಗೌರವವನ್ನು ಸಲ್ಲಿಸಿತ್ತು. ಈ ವಿಡಿಯೋದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್, ಸಿಬ್ಬಂದಿವರ್ಗ ಮತ್ತು ವಿವಿಧ ಆಟಗಾರರು ಶುಭಾಶಯವನ್ನು ಕೋರಿ ಮೆಚ್ಚುಗೆಯ ಮಾತುಗಳನ್ನು ಕೂಡ ಆಡಿದ್ದರು.

ಹೀಗೆ ತಾನು 14 ವರ್ಷಗಳಿಂದ ಪ್ರತಿನಿಧಿಸುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ವಿಶೇಷ ಗೌರವವನ್ನು ಪಡೆದುಕೊಂಡ ವಿರಾಟ್ ಕೊಹ್ಲಿಗೆ ತನ್ನ ನೆಚ್ಚಿನ ಸ್ನೇಹಿತ ಎಬಿ ಡಿವಿಲಿಯರ್ಸ್ ವಿಶೇಷ ಜೆರ್ಸಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ವಿರಾಟ್ ಕೊಹ್ಲಿಗೆ ಎಬಿ ಡಿವಿಲಿಯರ್ಸ್ ವಿಶೇಷ ಜೆರ್ಸಿಯನ್ನು ನೀಡಿ 200 ಐಪಿಎಲ್ ಪಂದ್ಯಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಪೂರೈಸಿರುವ ದಾಖಲೆ ಮಾಡಿದ್ದಕ್ಕೆ ಶುಭಾಶಯವನ್ನು ಕೋರಿ ಅಪ್ಪುಗೆಯನ್ನು ನೀಡಿದರು. ಸದ್ಯ ಇಬ್ಬರ ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಟ್ರೆಂಡಿಂಗ್ ಪಟ್ಟಿ ಸೇರಿದೆ.

ಕೊಲ್ಕತ್ತಾ ವಿರುದ್ಧ ಹೀನಾಯವಾಗಿ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು

RCB vs KKR ಪಂದ್ಯದ ನಡುವೆ ಕಾಣಿಸಿಕೊಂಡ ಕಿಚ್ಚ Sudeep | Oneindia Kannada

ವಿರಾಟ್ ಕೊಹ್ಲಿ ಆಡಿದ 200ನೇ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೀನಾಯವಾಗಿ ಸೋಲುಂಡಿದೆ. ಹೌದು, ಯುಎಇಯಲ್ಲಿ ಆರಂಭವಾಗಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ದ್ವಿತೀಯ ಭಾಗದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 20ರ ಸೋಮವಾರದಂದು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅಬುಧಾಬಿಯ ಶೈಖ್ ಝಾಯೆದ್ ಕ್ರೀಡಾಂಗಣದಲ್ಲಿ ಆಡಿದೆ. ಈ ಬಾರಿಯ ಐಪಿಎಲ್ ಟೂರ್ನಿಯ ಮೊದಲನೇ ಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದ್ವಿತೀಯ ಭಾಗದ ತನ್ನ ಮೊದಲನೇ ಪಂದ್ಯದಲ್ಲಿಯೇ ಕಳಪೆ ಪ್ರದರ್ಶನ ನೀಡುವುದರ ಜೊತೆಗೆ ಹೀನಾಯ ಸೋಲನ್ನು ಅನುಭವಿಸಿದೆ. ಬೆಂಗಳೂರು ಮತ್ತು ಕೊಲ್ಕತ್ತಾ ನಡುವೆ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು 19 ಓವರ್‌ಗಳಲ್ಲಿ 92 ರನ್ ಗಳಿಸಿ ಆಲ್ ಔಟ್ ಆಯಿತು. ಇನ್ನು ಬೆಂಗಳೂರು ತಂಡ ನೀಡಿದ 93 ರನ್‌ಗಳ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 10 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿ 9 ವಿಕೆಟ್‍ಗಳ ಭರ್ಜರಿ ಗೆಲುವನ್ನು ಸಾಧಿಸಿತು.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Tuesday, September 21, 2021, 12:54 [IST]
Other articles published on Sep 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X