ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Eng vs Pak: ಫೈನಲ್ ಸೋಲಿನ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ

After Lost In T20 World Cup Final Now Shaheen Afridi injury Big Concern For Pakistan

ಭಾನುವಾರ ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್‌ 2022ರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಸೋಲನುಭವಿಸುವ ಮೂಲಕ ನಿರಾಸೆ ಅನುಭವಿಸಿತು. ಈ ಸೋಲಿನ ಆಘಾತದ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ಎದುರಾಗಿದೆ.

ಪಾಕಿಸ್ತಾನದ ಪ್ರಮುಖ ವೇಗದ ಬೌಲರ್ ಶಾಹೀನ್ ಅಫ್ರಿದಿ ಮತ್ತೆ ಗಾಯಕ್ಕೆ ತುತ್ತಾಗಿರುವುದು ತಂಡದ ಆತಂಕ ಹೆಚ್ಚಾಗಲು ಕಾರಣವಾಗಿದೆ. ಶಾಹೀನ್ ಅಫ್ರಿದಿ ಫೀಲ್ಡಿಂಗ್ ವೇಳೆಯಲ್ಲಿ ಮೊಣಕಾಲಿನ ನೋವಿನಿಂದ ನರಳಿದರು. 13 ನೇ ಓವರ್‌ನಲ್ಲಿ ಹ್ಯಾರಿ ಬ್ರೂಕ್ ಕ್ಯಾಚ್ ಹಿಡಿಯಲು ಹೋದಾಗ, ಅಫ್ರಿದಿ ಮೊಣಕಾಲಿಗೆ ನೋವು ಮಾಡಿಕೊಂಡರು. ಯಶಸ್ವಿಯಾಗಿ ಕ್ಯಾಚ್ ಹಿಡಿದರು ಸಹ ಅವರ ಮೊಣಕಾಲು ನೋವಿನಿಂದ ನರಳಿದರು.

ತಕ್ಷಣ ಮೈದಾನವನ್ನು ತೊರೆದ ಅಫ್ರಿದಿ ಕೆಲ ಹೊತ್ತಿನ ಬಳಿಕ ಮತ್ತೆ ಮೈದಾನಕ್ಕೆ ವಾಪಸಾದರು. ಅವರು 15ನೇ ಓವರ್ ಬೌಲಿಂಗ್ ಮಾಡುವಾಗ ಸಾಕಷ್ಟು ಕಷ್ಟಪಟ್ಟರು. ಒಂದು ಎಸೆತವನ್ನು ಮಾತ್ರ ಎಸೆಯಲು ಸಾಧ್ಯವಾಯಿತು, ಉಳಿದ ಐದು ಎಸೆತಗಳನ್ನು ಅರೆಕಾಲಿಕ ಸ್ಪಿನ್ನರ್ ಇಫ್ತಿಕರ್ ಅಹ್ಮದ್ ಆ ಓವರ್‌ನಲ್ಲಿ ಉಳಿದ ಐದು ಎಸೆತಗಳನ್ನು ಪೂರ್ಣಗೊಳಿಸಿದರು.

ಶಾಹೀನ್ ಅಫ್ರಿದಿ ಮೈದಾನದಿಂದ ಹೊರ ನಡೆದದ್ದು ಪಾಕಿಸ್ತಾನಕ್ಕೆ ಭಾರಿ ಹೊಡೆತ ನೀಡಿತು. ಇಫ್ತಿಕರ್ ಅಹ್ಮದ್ ಬೌಲಿಂಗ್ ಲಾಭ ಪಡೆದ ಇಂಗ್ಲೆಂಡ್ ಆ ಓವರ್ ನಲ್ಲಿ 13 ರನ್ ಪಡೆದರು.

After Lost In T20 World Cup Final Now Shaheen Afridi injury Big Concern For Pakistan

ಶಾಹೀನ್ ಅಫ್ರಿದಿ ಗಾಯಗೊಂಡಿದ್ದು ನಮ್ಮ ದುರಾದೃಷ್ಟ

"ನಮ್ಮ ಬೌಲಿಂಗ್ ವಿಶ್ವದ ಅತ್ಯುತ್ತಮ ದಾಳಿಗಳಲ್ಲಿ ಒಂದಾಗಿದೆ. ದುರದೃಷ್ಟವಶಾತ್ ಶಾಹೀನ್ ಅವರ ಗಾಯದ ಸಮಸ್ಯೆ ನಮಗೆ ಕಾಡಿತು. ಆದರೆ ಗಾಯಗಳು ಆಟದ ಭಾಗವಾಗಿದೆ," ಎಂದು ಪಂದ್ಯದ ನಂತರದ ಸಂದರ್ಶನದಲ್ಲಿ ನಾಯಕ ಬಾಬರ್ ಅಜಮ್ ಹೇಳಿದರು.

ಶಾಹೀನ್ ಮೈದಾನದಿಂದ ಹೊರನಡೆದಾಗ ಅವರು 2.1 ಓವರ್ ಅಷ್ಟೇ ಬೌಲ್ ಮಾಡಿದ್ದರು. ಅವರು ತಮ್ಮ ಸಂಪೂರ್ಣ ಓವರ್ ಗಳನ್ನು ಬೌಲ್ ಮಾಡಿದ್ದರೆ ಪಂದ್ಯದ ಫಲಿತಾಂಶ ಬದಲಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಟಿ20 ವಿಶ್ವಕಪ್‌ 2022ರಲ್ಲಿ ಶಾಹೀನ್ 11 ವಿಕೆಟ್ ಪಡೆದುಕೊಂಡಿದ್ದಾರೆ.

ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಜಂಟಿಯಾಗಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಪಾಕಿಸ್ತಾನದ ಶಾದಾಬ್ ಖಾನ್, ಐರ್ಲೆಂಡ್‌ನ ಜೋಶುವಾ ಲಿಟಲ್, ದಕ್ಷಿಣ ಆಫ್ರಿಕಾದ ಅನ್ರಿಚ್ ನೋಕಿಯಾ ಮತ್ತು ನೆದರ್‌ಲ್ಯಾಂಡ್‌ನ ಪಾಲ್ ವ್ಯಾನ್ ಮೀಕೆರೆನ್ ಈ ಬಾರಿ ವಿಶ್ವಕಪ್‌ನಲ್ಲಿ 11 ವಿಕೆಟ್ ಪಡೆದಿದ್ದಾರೆ.

ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಶಾಹೀನ್ ಅವರ ಬಲ ಮೊಣಕಾಲಿನ ಅಸ್ಥಿರಜ್ಜುಗೆ ಗಾಯವಾಗಿತ್ತು. ನಂತರ ಏಷ್ಯಾಕಪ್‌ನಲ್ಲಿ ಕೂಡ ಅವರು ಆಡಲಿಲ್ಲ.

ಇಂಗ್ಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆ ಪಡೆದ ನಂತರ ಅಲ್ಲಿಯೇ ವಿಶ್ರಾಂತಿ ಪಡೆದರು. ವಿಶ್ವಕಪ್‌ ವೇಳಗೆ ಅವರು ಸಂಪೂರ್ಣವಾಗಿ ಫಿಟ್ ಆಗಿಲ್ಲದಿದ್ದರೂ ಆಡಿಸಲಾಗಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗರೂ ಕೂಡ ಆರೋಪಿಸಿದ್ದರು.

Story first published: Monday, November 14, 2022, 2:30 [IST]
Other articles published on Nov 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X