ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶೀಘ್ರದಲ್ಲೇ ಕ್ರಿಕೆಟ್‌ಗೆ ಮರಳುತ್ತೇನೆ ಎಂದ ಇಂಗ್ಲೆಂಡ್‌ನ ಸ್ಟಾರ್ ವೇಗಿ

After Not Play Cricket In 2022 England Pacer Jofra Archer Set Comeback To Cricket Soon

ಇಂಗ್ಲೆಂಡ್‌ ತಂಡದ ಸ್ಟಾರ್ ವೇಗಿ ಜೋಫ್ರಾ ಆರ್ಚರ್ ಮತ್ತೆ ಕ್ರಿಕೆಟ್‌ ಆಡಲು ಸಿದ್ಧವಾಗಿದ್ದಾರೆ. ಮೊಣಕೈ ಮತ್ತು ಕೆಳಬೆನ್ನಿನ ಗಾಯದಿಂದ ಬಳಲುತ್ತಿದ್ದ ಆರ್ಚರ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, 2023ರಲ್ಲಿ ಕ್ರಿಕೆಟ್‌ಗೆ ಮರಳುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.

"2022 ಧನ್ಯವಾದಗಳು, 2023 ನಾನು ಸಿದ್ಧವಾಗಿದ್ದೇನೆ" ಎಂದು ಟ್ವೀಟ್ ಮಾಡುವ ಮೂಲಕ ಅವರು ತಮ್ಮ ವಾಪಸಾತಿಯನ್ನು ಖಚಿತಪಡಿಸಿದ್ದಾರೆ. ಜೋಫ್ರಾ ಆರ್ಚರ್ ವಾಪಸಾತಿ ಇಂಗ್ಲೆಂಡ್ ತಂಡದ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಟಪಡಿಸಲಿದೆ.

2019ರಲ್ಲಿ ಇಂಗ್ಲೆಂಡ್ ಏಕದಿನ ವಿಶ್ವಕಪ್‌ ಗೆಲುವಿನಲ್ಲಿ ಜೋಫ್ರಾ ಆರ್ಚರ್ ಕೊಡುಗೆ ದೊಡ್ಡದಿದೆ. ಇಂಗ್ಲೆಂಡ್ ತಂಡದ ಪ್ರಮುಖ ವಿಕೆಟ್ ಟೇಕರ್ ಆಗಿದ್ದರು. 2021ರ ಮಾರ್ಚ್‌ನಲ್ಲಿ ಜೋಫ್ರಾ ಆರ್ಚರ್ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು.

ರಿಷಭ್ ಪಂತ್ ಚೇತರಿಕೆ ಬಗ್ಗೆ ಪ್ರಮುಖ ಮಾಹಿತಿ ನೀಡಿದ ಕುಟುಂಬದ ಆಪ್ತರಿಷಭ್ ಪಂತ್ ಚೇತರಿಕೆ ಬಗ್ಗೆ ಪ್ರಮುಖ ಮಾಹಿತಿ ನೀಡಿದ ಕುಟುಂಬದ ಆಪ್ತ

2022ರ ನವೆಂಬರ್ ನಲ್ಲಿ ಅಬುದಾಬಿಯಲ್ಲಿ ಟೆಸ್ಟ್ ತಂಡದ ಜೊತೆ ಅವರು ತರಬೇತಿ ಪಡೆದರು. ಒಂಬತ್ತು ಓವರ್‌ ಬೌಲಿಂಗ್ ಮಾಡಿದ ಅವರು ತಮ್ಮ ಮೊದಲ ಎಸೆತದಲ್ಲಿಯೇ ಬೌನ್ಸರ್ ಎಸೆದರು, ಬ್ಯಾಟರ್ ಝಾಕ್ ಕ್ರಾಲಿ ತಲೆಗೆ ಬಿದ್ದಿತ್ತು. ಫಿಟ್ ಆಗಿ ಕಾಣುತ್ತಿದ್ದರೂ ಮುಂಜಾಗ್ರತಾ ಕ್ರಮವಾಗಿ ಅವರನ್ನು ಪಾಕಿಸ್ತಾನದ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಿರಲಿಲ್ಲ.

ಎಸ್‌ಎಟಿ20 ಟೂರ್ನಿಯಲ್ಲಿ ಆಡಲಿರುವ ಆರ್ಚರ್

ಎಸ್‌ಎಟಿ20 ಉದ್ಘಾಟನಾ ಟೂರ್ನಿಯಲ್ಲಿ ಅವರು ಎಂಐ ಕೇಪ್‌ಟೌನ್ ತಂಡಕ್ಕಾಗಿ ಸಹಿ ಹಾಕಿದ್ದು, ಟೂರ್ನಿಯಲ್ಲಿ ಆಡಲು ಸಿದ್ಧವಾಗಿದ್ದಾರೆ. ಐಪಿಎಲ್‌ನಲ್ಲಿ ಅವರು ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಸಹಿ ಹಾಕಿದ್ದಾರೆ, 8 ಕೋಟಿ ರುಪಾಯಿ ನೀಡಿ ಮೆಗಾ ಹರಾಜಿನಲ್ಲಿ ಪಡೆದುಕೊಂಡಿದೆ, ಕಳೆದ ಆವೃತ್ತಿಯಲ್ಲಿ ಅವರು ಒಂದೇ ಒಂದು ಪಂದ್ಯವನ್ನು ಕೂಡ ಆಡಲಿಲ್ಲ. ಆದರೂ ಮುಂಬೈ ಇಂಡಿಯನ್ಸ್ ಅವರನ್ನು ಉಳಿಸಿಕೊಂಡಿದೆ.

2023ರ ಐಪಿಎಲ್‌ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಜೋಫ್ರಾ ಆರ್ಚರ್ ಜೋಡಿಯನ್ನು ನೋಡಲು ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಕಾಯುತ್ತಿದ್ದಾರೆ.

ಜನವರಿಯಲ್ಲಿ ಮೊದಲು ಎಸ್‌ಎ20 ಉದ್ಘಾಟನಾ ಪಂದ್ಯಾವಳಿ ನಡೆಯಲಿದ್ದು, ಜನವರಿ 27 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ.

ನಂತರ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವುದಕ್ಕೆ ಸಿದ್ಧವಾಗಲಿದ್ದು, ನಂತರ ಬಾಂಗ್ಲಾದೇಶಧ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗವಹಿಸಲಿದ್ದಾರೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಜೋಫ್ರಾ ಆರ್ಚರ್ ಇಂಗ್ಲೆಂಡ್‌ಗೆ ಪ್ರಮುಖ ಅಸ್ತ್ರವಾಗಲಿದ್ದಾರೆ.

Story first published: Sunday, January 1, 2023, 15:10 [IST]
Other articles published on Jan 1, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X