ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SA 2022: ಭಾರತ ತಂಡ ಹೀಗಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಖಚಿತ ಎಂದ ಆಕಾಶ್ ಚೋಪ್ರಾ

Akash Chopra Suggest India Batters Should Score More Runs Due To Hardik Pandya Unavailability

ಭಾರತ ತಂಡವು ಆಡುವ ಬಳಗದಲ್ಲಿ ಐವರು ಬೌಲರ್‌ಗಳೊಂದಿಗೆ ಆಡಿದರೆ ತಂಡ ಸಮತೋಲನ ಕಳೆದುಕೊಳ್ಳುತ್ತದೆ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗಾಗಿ ಭಾರತ ತಂಡವು ಹಾರ್ದಿಕ್ ಪಾಂಡ್ಯ ಮತ್ತು ದೀಪಕ್ ಹೂಡಾ ಅಲಭ್ಯತೆಯಿಂದ ಆಲ್ ರೌಂಡರ್‌ಗಳ ಕೊರತೆಯನ್ನು ಹೊಂದಿದೆ.

ICC T20 Ranking: ಎರಡನೇ ಸ್ಥಾನಕ್ಕೆ ಜಿಗಿದ ಸೂರ್ಯಕುಮಾರ್ ಯಾದವ್, ನಂಬರ್ 1 ಆಗಲು ಇನ್ನೊಂದು ಮೆಟ್ಟಿಲು ಬಾಕಿICC T20 Ranking: ಎರಡನೇ ಸ್ಥಾನಕ್ಕೆ ಜಿಗಿದ ಸೂರ್ಯಕುಮಾರ್ ಯಾದವ್, ನಂಬರ್ 1 ಆಗಲು ಇನ್ನೊಂದು ಮೆಟ್ಟಿಲು ಬಾಕಿ

ಬ್ಯಾಟರ್ ಆಗಿ ಹಾರ್ದಿಕ್ ಪಾಂಡ್ಯ ಅವರ ಪ್ರಭಾವವು ಅತ್ಯಂತ ಮಹತ್ವದ್ದಾಗಿದ್ದರೂ, ಆರನೇ-ಬೌಲಿಂಗ್ ಆಯ್ಕೆಯಾಗಿ ಅವರ ಲಭ್ಯತೆಯು ಭಾರತಕ್ಕೆ ಅನುಕೂಲಕರವಾಗಿತ್ತು. ಆಲ್ ರೌಂಡರ್ ತಂಡಕ್ಕೆ ಮರಳಿದ ನಂತರ ಸ್ಥಿರವಾದ ಆಧಾರದ ಮೇಲೆ ಬೌಲಿಂಗ್ ಮಾಡಿದ್ದಾರೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆಯಲು ಸಾಧ್ಯವಾಗಿಲ್ಲವಾದರೂ, 2022ರಲ್ಲಿ ಅವರು 8.65 ಎಕನಾಮಿಯಲ್ಲಿ 2 ವಿಕೆಟ್‌ಗಳನ್ನು ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಹಾರ್ದಿಕ್ ಪಾಂಡ್ಯ ಅಲಭ್ಯರಾಗಿರುವುದರಿಂದ ಟೀಂ ಇಂಡಿಯಾ ತನ್ನ ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಂತ ಬಲಿಷ್ಠ ತಂಡದ ವಿರುದ್ಧ ಗೆಲ್ಲಬೇಕಾದರೆ ಭಾರತ ತಂಡ ಹೇಗಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಆರಂಭಿಕ ಬ್ಯಾಟರ್‌ಗಳು ಉತ್ತಮವಾಗಿ ಆಡಬೇಕು

ಆರಂಭಿಕ ಬ್ಯಾಟರ್‌ಗಳು ಉತ್ತಮವಾಗಿ ಆಡಬೇಕು

ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ ಅನುಪಸ್ಥಿತಿಯಲ್ಲಿ ಭಾರತ ಐದು ಬೌಲರ್‌ಗಳು ಮತ್ತು ಆರು ಬ್ಯಾಟರ್‌ಗಳೊಂದಿಗೆ ಆಡಬೇಕಾಗುತ್ತದೆ, ಒಂದು ವೇಳೆ ಆ ರೀತಿ ಆಡಿದರೆ, ತಂಡದ ಸಮತೋಲನವು ಸಂಪೂರ್ಣವಾಗಿ ಹೋಗುತ್ತದೆ. ಮಧ್ಯಮ ಕ್ರಮಾಂಕದಲ್ಲಿ ಪಾಂಡ್ಯ ಅನುಪಸ್ಥಿತಿಯಿಂದ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಹೆಚ್ಚಿನ ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕುತ್ತಾರೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದರು. ಅವರ ಅನುಪಸ್ಥಿತಿಯಲ್ಲಿ ಆರಂಭಿಕ ಬ್ಯಾಟರ್ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಇಂಗ್ಲೆಂಡ್ ಮಂಡಳಿ ಉತ್ಸಾಹಕ್ಕೆ ತಣ್ಣೀರೆರಚಿದ ಬಿಸಿಸಿಐ: ಭಾರತ vs ಪಾಕಿಸ್ತಾನ ಟೆಸ್ಟ್ ಸರಣಿ ಆಯೋಜನೆಗೆ ರೆಡ್ ಸಿಗ್ನಲ್

ಕೊಹ್ಲಿ-ಯಾದವ್ ಮೇಲೆ ಭರವಸೆ

ಕೊಹ್ಲಿ-ಯಾದವ್ ಮೇಲೆ ಭರವಸೆ

ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರ ಇನ್-ಫಾರ್ಮ್ ಜೋಡಿಯ ಬಗ್ಗೆ ಕೂಡ ಆಕಾಶ್ ಚೋಪ್ರಾ ಮಾತಾನಾಡಿದ್ದಾರೆ.

ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸಕ್ತಿದಾಯಕ ಅಂಕಿಅಂಶಗಳನ್ನು ಹೊಂದಿದ್ದಾರೆ, ಆದರೆ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುವಾಗ ಕೊಹ್ಲಿ ಉತ್ತಮ ರನ್ ಗಳಿಸಿಲ್ಲ, ಆದರೆ ಚೇಸಿಂಗ್ ಸಂದರ್ಭದಲ್ಲಿ ಕೊಹ್ಲಿ ಕಿಂಗ್ ಆಗಿದ್ದಾರೆ. ಸೂರ್ಯಕುಮಾರ್ ಯಾದವ್ ಕೂಡ ಮೊದಲ ಬ್ಯಾಟಿಂಗ್‌ನಲ್ಲಿ ಕಳಪೆ ಆಟ ಪ್ರದರ್ಶಿಸಿದ್ದರೆ, ಚೇಸಿಂಗ್‌ನಲ್ಲಿ ಮಾತ್ರ ಅಬ್ಬರಿಸಿದ್ದಾರೆ, ಎಂದು ಅವರು ಹೇಳಿದರು.

ಬೌಲರ್‌ಗಳ ನಡುವೆಯೂ ಬದಲಾವಣೆ

ಬೌಲರ್‌ಗಳ ನಡುವೆಯೂ ಬದಲಾವಣೆ

ಬ್ಯಾಟಿಂಗ್ ವಿಭಾಗದಂತೆಯೇ, ಬೌಲರ್‌ಗಳ ನಡುವೆಯೂ ಬದಲಾವಣೆ ಕಂಡುಬಂದಿದೆ, ಭುವನೇಶ್ವರ್ ಕುಮಾರ್‌ಗೆ ವಿಶ್ರಾಂತಿ ನೀಡಲಾಗಿದೆ. ಮೂರನೇ ವೇಗದ ಬೌಲರ್ ಸ್ಥಾನಕ್ಕೆ ಅರ್ಶ್‌ದೀಪ್ ಸಿಂಗ್ ಮತ್ತು ದೀಪಕ್ ಚಹಾರ್ ನಡುವೆ ಪೈಪೋಟಿ ಇದೆ.

ದಕ್ಷಿಣ ಆಫ್ರಿಕಾ ಹೊಂದಿರುವ ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಪರಿಗಣಿಸಿ ಆರ್ ಅಶ್ವಿನ್ ಕೂಡ ಆಡುವ ಬಳಗದಲ್ಲಿ ಸ್ಥಾನ ಪಡೆಯಬಹುದಾಗಿದೆ. ಆದರೆ ಆಕಾಶ್ ಚೋಪ್ರಾ ಭಾರತ ತಂಡ ಪ್ರಯೋಗ ಮಾಡದೆ, ಅಕ್ಷರ್ ಪಟೇಲ್ ಮತ್ತು ಯುಜ್ವೇಂದ್ರ ಚಹಾಲ್ ಅವರೊಂದಿಗೆ ಆಡಲಿ ಎಂದರು.

ಟಾಸ್ ಗೆದ್ದವರೇ ಪಂದ್ಯ ಗೆಲ್ಲುವ ಫೇವರಿಟ್

ಟಾಸ್ ಗೆದ್ದವರೇ ಪಂದ್ಯ ಗೆಲ್ಲುವ ಫೇವರಿಟ್

ತಿರುವನಂತರಪುರಂನ ಗ್ರೀನ್ ಫೀಲ್ಡ್ ಅಂಗಳದಲ್ಲಿ ಟಾಸ್ ಗೆಲ್ಲುವ ತಂಡಕ್ಕೆ ಪಂದ್ಯ ಗೆಲ್ಲುವ ಹೆಚ್ಚಿನ ಅವಕಾಶ ಇರುತ್ತದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಮೊದಲು ಬೌಲಿಂಗ್ ಮಾಡುವ ತಂಡಕ್ಕೆ ವಾತಾವರಣ ಅನುಕೂಲಕರವಾಗಿರುತ್ತದೆ, ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವಾಗ ಇಬ್ಬನಿ ಸಮಸ್ಯೆ ಇರುತ್ತದೆ ಎಂದು ಹೇಳಿದ್ದಾರೆ.

ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಇಬ್ಬರೂ ಈ ಪಂದ್ಯದಲ್ಲಿ ಆಡುವುದರಿಂದ ಭಾರತಕ್ಕೆ ಆರನೇ ಬೌಲಿಂಗ್ ಆಯ್ಕೆಯಿಲ್ಲದೆ ತೊಂದರೆಗೀಡಾಗುತ್ತದೆ, ಬೌಲಿಂಗ್ ತುಂಬಾ ದುರ್ಬಲವಾಗಿದೆ. ನೀವು ಟಾಸ್ ಗೆಲ್ಲದಿದ್ದರೆ, ನಂತರದ ಪಂದ್ಯವನ್ನು ಗೆಲ್ಲುವುದು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ಟಿ20 ಸರಣಿಗೆ ಭಾರತ ತಂಡ : ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಯುಜವೇಂದ್ರ ಚಹಾಲ್, ರಿಷಬ್ ಪಂತ್, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಶ್ರೇಯಸ್ ಅಯ್ಯರ್, ಶಹಬಾಜ್ ಅಹ್ಮದ್.

Story first published: Wednesday, September 28, 2022, 16:27 [IST]
Other articles published on Sep 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X