ಭಾರತದ ಕೋಪಿಷ್ಟ ಕ್ರಿಕೆಟಿಗನನ್ನು ಹೆಸರಿಸಿದ ವಿಂಡೀಸ್ ಕ್ರಿಕೆಟಿಗ ಡ್ವೇಯ್ನ್ ಬ್ರಾವೋ

ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಯಾವಾಗಲೂ ತಮಾಷೆಯ ಮನಸ್ಥಿತಿಯಲ್ಲಿರುತ್ತಾರೆ. ತಮ್ಮ ಸಹ ಆಟಗಾರರ ಕಾಲೆಳೆಯುತ್ತಾ ಸಿಕ್ಕ ಸಮಯವನ್ನು ಹಾಸ್ಯಮಯವಾಗಿಯೇ ಕಳೆಯಲು ಬಯಸುತ್ತಾರೆ. ಹಿರಿ ಕಿರಿಯ ಎಲ್ಲಾ ಆಟಗಾರರೂ ಎಲ್ಲರೊಂದಿಗೂ ಬೆರೆತು ಸಮಯವನ್ನು ಕಳೆಯುತ್ತಾರೆ.

ಅದರಲ್ಲೂ ಯುಜ್ವೇಂದ್ರ ಚಾಹಲ್ ಮತ್ತು ರೋಹಿತ್ ಶರ್ಮಾ ತಮಾಷೆ ಯಾವಾಗಲೂ ಸುದ್ದಿಯಾಗುತ್ತಿರುತ್ತದೆ. ಸಂಪೂರ್ಣ ಹಾಸ್ಯಮಯ ವ್ಯಕ್ತಿತ್ವ ಹೊಂದಿರುವ ಚಾಹಲ್‌ ಕಾಲೆಳೆಯಲು ರೋಹಿತ್ ಶರ್ಮಾ ಸಿಕ್ಕ ಅವಕಾಶವನ್ನು ಒಂಚೂರು ಬಿಡುವುದಿಲ್ಲ. ಒಟ್ಟಾರೆ ತಂಡದಲ್ಲೇ ಈ ರೀತಿಯ ಸನ್ನಿವೇಶವಿದೆ.

ಆದರೆ ಟೀಮ್ ಇಂಡಿಯಾದ ಓರ್ವ ಆಟಗಾರ ಗಂಭೀರ ಮತ್ತು ಕೋಪದ ವ್ಯಕ್ತಿತ್ವ ಹೊಂದಿರುವ ಆಟಗಾರ ಎಂದು ಬ್ರಾವೋ ಹೇಳಿಕೊಂಡಿದ್ದಾರೆ.

ಸಿಎಸ್‌ಕೆ ವಿಚಾರ ಹೇಳಿಕೊಂಡ ಬ್ರಾವೋ

ಸಿಎಸ್‌ಕೆ ವಿಚಾರ ಹೇಳಿಕೊಂಡ ಬ್ರಾವೋ

ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸಂಬಂಧಪಟ್ಟ ಅನೇಕ ಕಥೆಗಳನ್ನು ಬ್ರಾವೋ ಹಂಚಿಕೊಂಡಿದ್ದಾರೆ. ಸಿಎಸ್‌ಕೆ ತಂಡದ ಸದಸ್ಯರಾಗಿರುವ ಬ್ರಾವೋ ಟೀಮ್ ಇಂಡಿಯಾದ ಕೋಪದಗೊಳ್ಳುವ ಆಟಗಾರ ಯಾರು ಎಂಬ ವಿಚಾರವನ್ನು ಹೇಳಿಕೊಂಡಿದ್ದಾರೆ.

ಅಂಬಾಟಿ ರಾಯುಡು ಹೆಸರು ಹೇಳಿದ ಬ್ರಾವೋ

ಅಂಬಾಟಿ ರಾಯುಡು ಹೆಸರು ಹೇಳಿದ ಬ್ರಾವೋ

ಡ್ವೇಯ್ನ್ ಬ್ರಾವೋ ತೆಗೆದುಕೊಂಡ ಹೆಸರು ಚೆನ್ನೈ ತಂಡದ ಸಹ ಆಟಗಾರ ಅಂಬಾಟಿ ರಾಯುಡು ಅವರದ್ದು. ಅಂಬಾಟಿ ರಾಯುಡು ಟೀಮ್ ಇಂಡಿಯಾದ ಕೋಪದ ವ್ಯಕ್ತಿತ್ವ ಹೊಂದಿದ ಆಟಗಾರ ಎಂದು ಹೇಳಿದ್ದಾರೆ. ಜೊತೆಗೆ ಆತ ತನ್ನ ನೆಚ್ಚಿನ ಆಟಗಾರ ಎಂದು ಕೂಡ ಬ್ರಾವೋ ಹೇಳಿಕೊಂಡಿದ್ದಾರೆ.

ಮುಂಬೈಯಿಂದ ಚೆನ್ನೈವರೆಗೆ

ಮುಂಬೈಯಿಂದ ಚೆನ್ನೈವರೆಗೆ

ತಾನು ಮತ್ತು ಅಂಬಾಟಿ ರಾಯುಡು ಮುಂಬೈ ಇಂಡಿಯನ್ಸ್ ತಂಡದಿಂದಲೂ ಜೊತೆಯಾಗಿದ್ದೇವೆ, ಆದರೆ ಅಲ್ಲಿ ಒಟ್ಟಾಗಿ ಆಡಲು ಹೆಚ್ಚಿನ ಅವಕಾಶ ಸಿಗಲಿಲ್ಲ, ಅವರ ಪ್ರತಿಭೆಯನ್ನು ಅರ್ಥ ಮಾಡಿಕೊಳ್ಳು ಅಲ್ಲಿ ನನ್ನಿಂದ ಸಾಧ್ಯವಾಗಲಿಲ್ಲ, ಚೆನ್ನೈ ತಂಡದಲ್ಲಿ ಅವರೊಬ್ಬ ಅದ್ಭುತ ಆಟಗಾರ ಎಂಬು ತಿಳಿಯಿತು, ಭಾರತದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ರಾಯುಡು ಕೂಡ ಒಬ್ಬರು ಎಂದು ಬ್ರಾವೋ ಹೇಳಿದ್ದಾರೆ.

ಒಳ್ಳೆಯ ಮನಸಿನ ವ್ಯಕ್ತಿ

ಒಳ್ಳೆಯ ಮನಸಿನ ವ್ಯಕ್ತಿ

ರಾಯುಡು ತುಂಬಾ ಬೇಗ ಕೋಪಗೊಳ್ಳುತ್ತಾರೆ, ಆದರೆ ನಾನು ಅವರೊಂದಿಗೆ ತಮಾಷೆ ಮತ್ತು ಕೀಟಲೆ ಮಾಡಲು ಬಯಸುತ್ತೇನೆ. ಸಿಎಸ್ಕೆ ನಿಮ್ಮನ್ನು ಏಕೆ ಖರೀದಿಸಿತು ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ನಾನು ಅವರಿಗೆ ತಮಾಷೆಯಾಗಿ ಹೇಳುತ್ತಿದ್ದೆ ಎಂದು ಬ್ರಾವೋ ಹೇಳಿದ್ದಾರೆ. ಅವರನ್ನು ಅರ್ಥ ಮಾಡಿಕೊಂಡವರು ಅವರನ್ನು ಬಹಳಷ್ಟು ಪ್ರೀತಿಸುತ್ತಾರೆ ಎಂದು ಅಂಬಾಟಿ ರಾಯುಡು ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ ಡ್ವೇಯ್ನ್ ಬ್ರಾವೋ

For Quick Alerts
ALLOW NOTIFICATIONS
For Daily Alerts
Story first published: Tuesday, April 21, 2020, 18:31 [IST]
Other articles published on Apr 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X