ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೈಮಂಡ್ಸ್‌ ವಿಧಿವಶ: IPL ಮೊದಲ ಸೀಸನ್‌ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಿದ್ದ ವಿದೇಶಿ ಪ್ಲೇಯರ್

Andrew Symonds

ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಖ್ಯಾತ ಆಲ್‌ರೌಂಡರ್ ಆ್ಯಂಡ್ರ್ಯೂ ಸೈಮಂಡ್ ಅಕಾಲಿಕ ದುರ್ಮರಣವು , ಆಸ್ಟ್ರೀಲಿಯಾ ಕ್ರಿಕೆಟ್‌ ಮತ್ತು ವಿಶ್ವ ಕ್ರಿಕೆಟ್‌ಗೆ ಭರಿಸಲಾಗದ ನಷ್ಟವನ್ನ ತರಿಸಿದೆ. ಇತ್ತೀಚೆಗಷ್ಟೇ ಸ್ಪಿನ್ ದಿಗ್ಗಜ ಶೇನ್‌ ವಾರ್ನ್‌ರ ದಿಢೀರ್ ಸಾವಿನ ನೋವಿನಿಂದ ಆಚೆ ಬರುತ್ತಿದ್ದ ಅಭಿಮಾನಿಗಳು ಮತ್ತೊಬ್ಬ ಆಸೀಸ್ ಕ್ರಿಕೆಟಿಗನ ಸಾವಿನಿಂದಾಗಿ ಮತ್ತಷ್ಟು ದುಃಖಕ್ಕೀಡಾಗಿದ್ದಾರೆ.

46 ವರ್ಷಕ್ಕೆ ಇಹಲೋಕ ತ್ಯಜಿಸಿರುವ ಆ್ಯಂಡ್ರ್ಯೂ ಸೈಮಂಡ್ಸ್‌ ಐಪಿಎಲ್ ಚೊಚ್ಚಲ ಆವೃತ್ತಿಯಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆದ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2008ರ ಚೊಚ್ಚಲ ಐಪಿಎಲ್ ಸೀಸನ್‌ನ ಹರಾಜಿನಲ್ಲಿ ಸೈಂಡಸ್ಸ್ ಡೆಕ್ಕನ್ ಚಾರ್ಜಸ್‌ (ಈಗಿನ ಸನ್‌ರೈಸರ್ಸ್ ಹೈದ್ರಾಬಾದ್) ತಂಡಕ್ಕೆ 1.35 ಮಿಲಿಯನ್ ಡಾಲರ್‌ಗೆ ಬಿಕರಿಯಾಗಿದ್ದರು.

ಕಾರು ಅಪಘಾತದಲ್ಲಿ ಆಂಡ್ರ್ಯೂ ಸೈಮಂಡ್ಸ್ ನಿಧನ; ಸಂತಾಪ ಸೂಚಿಸಿದ ಕ್ರಿಕೆಟ್ ಜಗತ್ತುಕಾರು ಅಪಘಾತದಲ್ಲಿ ಆಂಡ್ರ್ಯೂ ಸೈಮಂಡ್ಸ್ ನಿಧನ; ಸಂತಾಪ ಸೂಚಿಸಿದ ಕ್ರಿಕೆಟ್ ಜಗತ್ತು

2011ರಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಪರ ಆಡುವುದಕ್ಕೂ ಮೊದಲು ಆ್ಯಂಡ್ರ್ಯೂ ಸೈಮಂಡ್ಸ್‌ ಮೂರು ಸೀಸನ್‌ ಡೆಕ್ಕನ್ ಚಾರ್ಜಸ್‌ ಪರ ಆಡಿದ್ದರು. ಒಟ್ಟಾರೆ ಐಪಿಎಲ್‌ನಲ್ಲಿ ಸೈಮಂಡ್ಸ್‌ 39 ಪಂದ್ಯಗಳಲ್ಲಿ 974 ರನ್ ಜೊತೆಗೆ 20 ವಿಕೆಟ್‌ಗಳ ಸಹ ಕಬಳಿಸಿದ್ದರು.

ಆಂಡ್ರ್ಯೂ ಸೈಮಂಡ್ಸ್ ಅವರ ನಿವ್ವಳ ಮೌಲ್ಯವು ಸುಮಾರು $5 ಮಿಲಿಯನ್ ಆಗಿತ್ತು. ಅಂದ್ರೆ ಅದು ಸರಿಸುಮಾರು ಭಾರತೀಯ ರೂಪಾಯಿಗಳಲ್ಲಿ 38 ಕೋಟಿ ರೂಪಾಯಿ. ಟಿ20 ಸ್ವರೂಪವನ್ನು ಸ್ವಲ್ಪ ಮುಂಚಿತವಾಗಿ ಪರಿಚಯಿಸಿದ್ರೆ, ಸೈಮಂಡ್ಸ್ ಹೆಚ್ಚು ಮೊತ್ತ ಗಳಿಸುತ್ತಿದ್ದರು. ಕ್ರಿಕೆಟ್ ಚೆಂಡಿನ ಭಯಂಕರ ಹಿಟ್ಟರ್‌ಗಳಲ್ಲಿ ಸೈಮಂಡ್ಸ್ ಕೂಡ ಒಬ್ಬರಾಗಿದ್ದರು ಮತ್ತು ಅವರು ಸುಲಭವಾಗಿ ಸಿಕ್ಸರ್ ಸಿಡಿಸುವ ಸಾಮರ್ಥ್ಯವನ್ನು ಹೊಂದಿದ್ದರು.

Thomas Cup: ಕ್ರಿಕೆಟ್ನಲ್ಲಿ ವಿಶ್ವಕಪ್ ನಷ್ಟೇ ಸ್ಪೆಷಲ್ ಈ ಥಾಮಸ್ ಕಪ್:ಯಾಕೆ ಗೊತ್ತಾ? | Oneindia Kannada

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7,000ಕ್ಕೂ ಹೆಚ್ಚು ರನ್‌ಗಳಿಸಿರುವ ಸೈಮಂಡ್ಸ್‌ ಆಸ್ಟ್ರೇಲಿಯಾ ಎರಡು ಬಾರಿ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. 1998ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಈ ಆಲ್‌ರೌಂಡರ್ ಟೆಸ್ಟ್‌ನಲ್ಲಿ ಎರಡು ಶತಕ ಸಹ ದಾಖಲಿಸಿದ್ದಾರೆ.

Story first published: Monday, May 16, 2022, 9:10 [IST]
Other articles published on May 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X