ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಯಿಂದ ಮತ್ತೆ ದಾಖಲೆಗಳ ಧೂಳಿಪಟ

By Mahesh

ರಾಂಚಿ, ನ.17: ನಾಯಕ ಎಂಎಸ್ ಧೋನಿ ಅವರ ತವರೂರಿನಲ್ಲಿ ಶ್ರೀಲಂಕನ್ನರನ್ನು ಬಗ್ಗು ಬಡಿದು ಭಾರತ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಇದೇ ಪಂದ್ಯದಲ್ಲಿ ಶತಕ ಬಾರಿಸಿ ನಾಯಕನ ಆಟವಾಡಿದ ಕೊಹ್ಲಿ ಹಲವು ದಾಖಲೆಗಳನ್ನು ನುಚ್ಚುನೂರು ಮಾಡಿದರು.

ಶ್ರೀಲಂಕಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಆಕರ್ಷಕ ಶತಕದಿಂದ ಗಮನಸೆಳೆದಿದ್ದಲ್ಲದೆ ಪಂದ್ಯದ ಗೆಲುವಿಗೂ ಕಾರಣರಾದರು. 21ನೇ ಶತಕ ದಾಖಲಿಸುವ ಮೂಲಕ ಹಲವು ದಾಖಲೆಗಳನ್ನು ಮೆಟ್ಟಿ ನಿಂತರು.

Another world record for Virat Kohli

* ನಾಲ್ಕು ವರ್ಷಗಳಲ್ಲಿ ಸತತವಾಗಿ ಸಾವಿರ ರನ್ ಗಳನ್ನು ಗಳಿಸಿದ ಸರದಾರರೆನಿಸಿದರು.
* ಸತತ ನಾಲ್ಕು ವರ್ಷ ಏಕದಿನ ಕ್ರಿಕೆಟ್ ಋತುವಿನಲ್ಲಿ ಸಾವಿರ ರನ್ ಗಳಿಸಿದ ಏಕೈಕ ಆಟಗಾರನಾಗಿ ವಿಶ್ವದಾಖಲೆ ಬರೆದರು.
* ಕೊಹ್ಲಿ ಅವರು 2011,2012,2013 ಹಾಗೂ 2014 ರಲ್ಲಿ ಸತತವಾಗಿ ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ.
* ಈ ವರ್ಷ ಶ್ರೀಲಂಕಾದ ಏಂಜೆಲೋ ಮ್ಯಾಥ್ಯೂಸ್ ಬಿಟ್ಟರೆ ಕೊಹ್ಲಿ ಅವರು ಸಾವಿರ ರನ್ ಪೂರೈಸಿದ ಎರಡನೇ ಆಟಗಾರರಾಗಿದ್ದಾರೆ. ಕೊಹ್ಲಿ 21 ಪಂದ್ಯಗಳಲ್ಲಿ 1054ರನ್(58.55 ರನ್ ಸರಾಸರಿ) ಚೆಚ್ಚಿದ್ದಾರೆ.[ಲಂಕಾ ವಿರುದ್ಧ ಗೆದ್ದು ಬೀಗಿದ ಭಾರತː ಚಿತ್ರಗಳಲ್ಲಿ ]
* ರನ್ ಚೇಸಿಂಗ್ ನಲ್ಲಿ 13ನೇ ಶತಕ ಹಾಗೂ ವೃತ್ತಿ ಬದುಕಿನ 21ನೆ ಶತಕ ಬಾರಿಸಿದರು.
* ಧೋನಿ ಇಲ್ಲದ ಕಾರಣ ನಾಲ್ಕನೇ ಕ್ರಮಾಂಕದಲ್ಲಿ ಆಡಿದ ಕೊಹ್ಲಿ ಅವರು ಈ ಕ್ರಮಾಂಕದಲ್ಲಿ ವೈಯಕ್ತಿಕ ಹೆಚ್ಚಿನ ಗಳಿಕೆ ಸಾಧಿಸಿದರು. ಈ ಪಂದ್ಯದಲ್ಲಿ 139ರನ್ ಹೊಡೆದು ಈ ಮುಂಚಿನ 133 ರನ್(ಫೆ.28, 2012) ದಾಖಲೆ ಮುರಿದರು.
* ಕೊಹ್ಲಿ ನಾಲ್ಕನೇ ಬಾರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧ ಎರಡು ಹಾಗೂ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ತಲಾ ಒಮ್ಮೆ ಪ್ರಶಸ್ತಿ ಗೆದ್ದಿದ್ದಾರೆ.
* ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಇಬ್ಬರು ನಾಯಕರು ಮಾತ್ರ 5-0 ಕ್ಲೀನ್ ಸ್ವೀಪ್ ದಾಖಲಿಸಿದ್ದಾರೆ.
* * ಸಚಿನ್ ತೆಂಡೂಲ್ಕರ್ ಅವರು 21 ಶತಕ ಬಾರಿಸಲು 200 ಇನ್ನಿಂಗ್ಸ್ ತೆಗೆದುಕೊಂಡರೆ, ಕೊಹ್ಲಿ ಅವರು 138 ಇನ್ನಿಂಗ್ಸ್ ನಲ್ಲೇ 21ನೇ ಶತಕ ಚೆಚ್ಚಿದ್ದಾರೆ.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X