For Quick Alerts
ALLOW NOTIFICATIONS  
For Daily Alerts
 

ಕೊರೊನಾ ಪರಿಹಾರಕ್ಕೆ 11 ಕೋ.ರೂ. ಸಂಗ್ರಹಿಸಿದ ಅನುಷ್ಕಾ-ವಿರಾಟ್

Anushka Sharma, Virat Kohli raise target for Covid-19 relief to ₹11 crore
Virat Kohli ಕೊರೊನಾ ಪರಿಹಾರಕ್ಕೆ 11 ಕೋ.ರೂ. ಸಂಗ್ರಹಿಸಿದರು |

ನವದೆಹಲಿ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಅವರ ಪತಿ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊರೊನಾ ಪರಿಹಾರಕ್ಕಾಗಿ ಬುಧವಾರ (ಮೇ 12) 11 ಕೋಟಿ ರೂ. ದೇಣಿಗೆ ಸಂಗ್ರಹಿಸಿದ್ದಾರೆ. ಕೋವಿಡ್ ವಿರುದ್ಧದ ಹೋರಾಟಕ್ಕೆ 2 ಕೋಟಿ ರೂ. ದೇಣಿಗೆ ಘೋಷಿಸಿದ ಬಳಿಕ ಕೊಹ್ಲಿ-ಅನುಷ್ಕಾ ದಂಪತಿ ಮತ್ತೆ ವಿಶೇಷ ನೆರವಿನ ಹಸ್ತ ಚಾಚಿದ್ದಾರೆ.

ಅಸಲಿಗೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 7 ಕೋಟಿ ರೂ. ಸಂಗ್ರಹಿಸಿದ್ದರು. ಆದರೆ ಈಗ ಒಟ್ಟು 11 ಕೋಟಿ ರೂ. ಸಂಗ್ರಹಣೆಯಾಗಿದೆ. ಈ ಹಣ ಕೊರೊನಾ ಪರಿಹಾರಾರ್ಥವಾಗಿ ಬಳಕೆಯಾಗಲಿದೆ. ದೇಣಿಗೆ ಸಂಗ್ರಹಕ್ಕೆ ನೆರವಾದ ಎಂಪಿಎಲ್‌ ಗೇಮಿಂಗ್ ಸಂಸ್ಥೆಗೂ ಅನುಷ್ಕಾ ಧನ್ಯವಾದ ಸಲ್ಲಿಸಿದ್ದಾರೆ.

ಟ್ವೀಟ್‌ ಮಾಡಿರುವ ಅನುಷ್ಕಾ, 'ಕೊರೊನಾ ಪಿಡುಗಿನ ವಿರುದ್ಧ ಸಹಾಯ ನೀಡಲು ನಮ್ಮ ಹೋರಾಟಕ್ಕೆ ಬೆಂಬಲಿಸಿದ ಎಂಪಿಎಲ್ ಫೌಂಡೇಶನ್‌ಗೆ ನಾನು ಮತ್ತು ವಿರಾಟ್ ಅಭಾರಿಯಾಗಿದ್ದೇವೆ. ನಿಮ್ಮ 5 ಕೋಟಿ ರೂ. ದೇಣಿಗೆ ನಮ್ಮ ಪ್ರಯತ್ನಕ್ಕೆ ಶಕ್ತಿ ತುಂಬಿತು. ಒಟ್ಟಾರೆ ನಮ್ಮ ದೇಣಿಗೆ ಮೊತ್ತ 11 ಕೋಟಿ ರೂ.ಗೆ ಏರಿಕೆಯಾಗಿದೆ, ಗುರಿ ತಲುಪಿದೆ' ಎಂದು ಬರೆದುಕೊಂಡಿದ್ದಾರೆ.

ಕೋವಿಡ್-19 ದ್ವಿತೀಯ ಅಲೆಯಿಂದಾಗಿ ಭಾರತ ತತ್ತರಿಸಿದೆ. ಹೀಗಾಗಿ ಭಾರತಕ್ಕೆ ಸಹಾಯ ನೀಡಲು ಅನೇಕ ವಿದೇಶಿ ಕ್ರಿಕೆಟಿಗರು, ಕ್ರೀಡಾಪಟುಗಳೂ ಮುಂದಾಗಿದ್ದರು. ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದರಿಂದಲೇ ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್ 2021ರ ಆವೃತ್ತಿ ಅರ್ಧಕ್ಕೆ ನಿಲ್ಲಿಸಲ್ಪಟ್ಟಿತ್ತು.

Story first published: Wednesday, May 12, 2021, 23:07 [IST]
Other articles published on May 12, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+