ಆಷಸ್ ಆರಂಭ: ಇಂಗ್ಲೆಂಡ್ ರನ್ ಗತಿಗೆ ಬ್ರೇಕ್ ಹಾಕಿದ ಆಸೀಸ್

Posted By:

ಬ್ರಿಸ್ಬೇನ್, ನವೆಂಬರ್ 23: ಸಾಂಪ್ರದಾಯಿಕ ಎದುರಾಳಿಗಳಾದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಆಷಸ್ ಸರಣಿ ಇಂದಿನಿಂದ ಆರಂಭವಾಗಿದೆ.

ಸ್ಕೋರ್ ಕಾರ್ಡ್

ಇಲ್ಲಿನ ಗಬ್ಬಾ ಮೈದಾನದಲ್ಲಿ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು, ಆರಂಭಿಕ ಆಟಗಾರ ಕುಕ್ ಅವರನ್ನು ಕಳೆದುಕೊಂಡರೂ ಉತ್ತಮ ಮೊತ್ತ ಕಲೆಹಾಕುವ ಕುರುಹು ತೋರಿತು.

Ashes, 1st Test: Australia fight back on tight first day in Brisbane

ಆದರೆ, ಸ್ಟಾರ್ಕ್ ಹಾಗೂ ಕುಮಿನ್ಸ್ ಕರಾರುವಾಕ್ ಬೌಲಿಂಗ್ ಮಾಡಿ, ರನ್ ಗತಿಯನ್ನು ನಿಯಂತ್ರಿಸಿದರು.

ಮಾರ್ಕ್ ಸ್ಟೊನ್ಮನ್ ಅವರು 53ರನ್ ಹಾಗೂ ಜೇಮ್ಸ್ ವಿನ್ಸ್ 83ರನ್ ಗಳಿಸಿ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ವೇಗಿ ಸ್ಟಾರ್ಕ್ ಗೆ ಕುಕ್ ಬಲಿಯಾದರು.

ನಾಯಕ ಜೋ ರೂಟ್ ಅವರು 15 ರನ್ ಗಳಿಸಿ ಔಟಾದರೆ, ಮಲಾನ್ ಅವರು 28ರನ್ ಗಳಿಸಿ ಆಡುತ್ತಿದ್ದರೆ, ಮೋಯಿನ್ ಅಲಿ 13ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ದಿನದ ಅಂತ್ಯಕ್ಕೆ 80.3 ಓವರ್ ಗಳ ನಂತರ ಇಂಗ್ಲೆಂಡ್ ತಂಡ 196/4 ಸ್ಕೋರ್ ಮಾಡಿದೆ.

ಇದಕ್ಕೂ ಮುನ್ನ ಇಂಗ್ಲೆಂಡಿನ ನಾಯಕ ಜೋ ರೂಟ್ ಅವರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

Story first published: Thursday, November 23, 2017, 12:34 [IST]
Other articles published on Nov 23, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ