ಆ್ಯಶಸ್ ಟೆಸ್ಟ್: ಹೆಡ್ ಶತಕ, ಗಾಬಾ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಹಿಡಿತ ಮತ್ತಷ್ಟು ಬಿಗಿ

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ದಿನದಾಟ ಅಂತ್ಯವಾಗಿದೆ. ಎರಡನೇ ದಿನವೂ ಪಂದ್ಯದಲ್ಲಿ ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ನೀಡುವ ಮೂಲಕ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆಸ್ಟ್ರೇಲಿಯಾ ಪರವಾಗಿ ಡೇವಿಡ್ ವಾರ್ನರ್ 94 ರನ್‌ಗಳಿಸಿ ಶತಕದಂಚಿನಲ್ಲಿ ಎಡವಿದರೆ ಟ್ರೇವಿಸ್ ಹೆಡ್ ಭರ್ಜರಿ ಶತಕ ಸಿಡಿಸಿ ಅಜೇಯವಾಗುಳಿದಿದ್ದಾರೆ. 196 ರನ್‌ಗಳ ಮುನ್ನಡೆಯೊಂದಿಗೆ ಆಸ್ಟ್ರೇಲಿಯಾ ಮೂರನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದೆ.

ಇಂಗ್ಲೆಂಡ್ ತಂಡವನ್ನು 147 ರನ್‌ಗಳಿಗೆ ಆಲೌಟ್ ಮಾಡಿದ ಆಸ್ಟ್ರೇಲಿಯಾ ಇಂದು ಬ್ಯಾಟಿಂಗ್‌ಗೆ ಇಳಿಯಿತು. ಆದರೆ ಮೊದಲ ವಿಕೆಟ್‌ಅನ್ನು ಆಸ್ಟ್ರೇಲಿಯಾ 10 ರನ್ ಆಗುವಷ್ಟರಲ್ಲಿ ಕಳೆದುಕೊಂಡಿತ್ತು. ಈ ಮೂಲಕ ಇಂಗ್ಲೆಂಡ್ ಬೌಲರ್‌ಗಳು ಆಸಿಸ್ ದಾಂಡಿಗರಿಗೆ ಕಂಠಕವಾಗುವ ಲಕ್ಷಣ ತೋರಿಸಿದರು. ಆದರೆ ಡೇವಿಡ್ ವಾರ್ನರ್ ಹಾಗೂ ಮರ್ನಾಸ್ ಲ್ಯಾಬುಶೈನ್ ಇಂಗ್ಲೆಂಡ್ ಬೌಲರ್‌ಗಳ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದರು. ಈ ಇಬ್ಬರು ಆಟಗಾರರು 156 ರನ್‌ಗಳ ಜೊತೆಯಾಟವನ್ನಾಡುವ ಮೂಲಕ ಆಸಿಸ್‌ಗೆ ಮೇಲುಗೈ ಒದಗಿಸಿದರು.

ವಿರಾಟ್ ಕೊಹ್ಲಿ ODI ನಾಯಕತ್ವ ಕಳೆದುಕೊಳ್ಳಲು ಪ್ರಮುಖ ಕಾರಣಗಳೇನು?ವಿರಾಟ್ ಕೊಹ್ಲಿ ODI ನಾಯಕತ್ವ ಕಳೆದುಕೊಳ್ಳಲು ಪ್ರಮುಖ ಕಾರಣಗಳೇನು?

ನಂತರ ಯುವ ಆಟಗಾರ ಮಾರ್ನಾಸ್ ಲ್ಯಾಬುಶೈನ್ 74 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ಸ್ಟೀವ್ ಸ್ಮಿತ್ ಕೂಡ 12 ರನ್‌ಗಳಿಗೆ ಔಟಾದರು. ಈ ಹಂತದಲ್ಲಿ ಆಸ್ಟ್ರೇಲಿಯಾ ಸಣ್ಣ ಕುಸಿತವೊಂದನ್ನು ಕಂಡಿತು. 94 ರನ್‌ಗಳಿಸಿ ಶತಕದತ್ತ ತೆರಳುತ್ತಿದ್ದ ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ರಾಬಿನ್ಸನ್‌ಗೆ ಬಲಿಯಾಗುವ ಮೂಲಕ ನಿರಾಸೆ ಅನುಭವಿಸಿದರು. ನಂತರ ಕ್ಯಾಮರೂನ್ ಗ್ರೀನ್ ಮೊಸಲ ಎಸೆತಕ್ಕೆ ಔಟಾಗುವ ಮೂಲಕ ಶೂನ್ಯ ಸುತ್ತಿ ನಿರ್ಗಮಿಸಿದರು.

ಟ್ರೇವಿಸ್ ಹೆಡ್ ಭರ್ಗರಿ ಪ್ರದರ್ಶನ: ಆದರೆ ಈ ಸಂದರ್ಭದಲ್ಲಿ ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ಟ್ರೇವಿಸ್ ಹೆಡ್ ಭರ್ಜರಿ ಪ್ರದರ್ಶನ ನೀಡಿದರು. ಸ್ಪೋಟಕವಾಗಿ ಆಡುತ್ತಾ ಸಾಗಿದ ಹೆಡ್ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಮ್ಮೆ ಚೇತರಿಕೆ ನೀಡಿದರು. ಕೇವಲ 85 ಎಸೆತಗಳನ್ನು ಎದುರಿಸಿ ಭರ್ಜರಿ ಶತಕ ಸಿಡಿಸಿ ಮಿಂಚಿದರು. ದಿನದಾಟದ ಅಂತ್ಯಕ್ಕೆ 112 ರನ್‌ಗಳಿಸಿ ಅಜೇಯವಾಗಿ ಉಳಿದಿದ್ದಾರೆ. ಅವರಿಗೆ ಮಿಚೆಲ್ ಸ್ಟಾರ್ಕ್ 10 ರನ್‌ಗಳಿಸಿ ಸಾಥ್ ನೀಡುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ಟಿಕೆಟ್ ಮಿಸ್‌ ಮಾಡಿಕೊಂಡ ಜಡೇಜಾ, ಶುಭ್ಮನ್, ಅಕ್ಷರ್ ಪಟೇಲ್!ದಕ್ಷಿಣ ಆಫ್ರಿಕಾ ಟಿಕೆಟ್ ಮಿಸ್‌ ಮಾಡಿಕೊಂಡ ಜಡೇಜಾ, ಶುಭ್ಮನ್, ಅಕ್ಷರ್ ಪಟೇಲ್!

ಎರಡನೇ ದಿನದಾಟ ಅಂತ್ಯವಾಗುವ ವೇಳೆಗೆ ಆಸ್ಟ್ರೇಲಿಯಾ ತಂಡ ತನ್ನ 7 ವಿಕೆಟ್ ಕಳೆದುಕೊಂಡಿದ್ದು 343 ರನ್‌ಗಳಿಸಿದೆ. ಇದರೊಂದಿಗೆ 196 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ ಆಸ್ಟ್ರೇಲಿಯಾ. ಬೌಲಿಂಗ್‌ನ್ಲಲಿ ಇಂಗ್ಲೆಂಡ್ ಪರವಾಗಿ ಒಲ್ಲೀ ರಾಬಿನ್ಸನ್ 3 ವಿಕೆಟ್ ಪಡೆದು ಮಿಂಚಿದರೆ ಕ್ರಿಸ್ ವೋಕ್ಸ್, ಮಾರ್ಕ್‌ವುಡ್, ಜಾಕ್ ಲೀಚ್ ಹಗೂ ಜೋ ರೂಟ್ ತಲಾ ಒಂದು ವಿಕೆಟ್ ಪಡೆದು ಮಿಂಚಿದ್ದಾರೆ.

ವಿರಾಟ್ ಕೊಹ್ಲಿ ಅಂದು ಗಂಗೂಲಿ ಹೇಳಿದ ಮಾತನ್ನು ಕೇಳಿರಲಿಲ್ಲವಂತೆ | Oneindia Kannada

ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಜಲ್‌ವುಡ್
ಬೆಂಚ್: ಉಸ್ಮಾನ್ ಖವಾಜಾ, ಮೈಕೆಲ್ ನೆಸರ್, ಝೈ ರಿಚರ್ಡ್ಸನ್, ಮಿಚೆಲ್ ಸ್ವೆಪ್ಸನ್
ಇಂಗ್ಲೆಂಡ್ ಆಡುವ ಬಳಗ: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಆಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಆಲಿ ರಾಬಿನ್ಸನ್, ಮಾರ್ಕ್ ವುಡ್, ಜ್ಯಾಕ್ ಲೀಚ್
ಬೆಂಚ್: ಜಾನಿ ಬೈರ್ಸ್ಟೋವ್, ಕ್ರೇಗ್ ಓವರ್ಟನ್, ಡೇನಿಯಲ್ ಲಾರೆನ್ಸ್, ಡೊಮಿನಿಕ್ ಬೆಸ್, ಝಾಕ್ ಕ್ರಾಲಿ, ಸ್ಟುವರ್ಟ್ ಬ್ರಾಡ್

For Quick Alerts
ALLOW NOTIFICATIONS
For Daily Alerts
Story first published: Thursday, December 9, 2021, 17:23 [IST]
Other articles published on Dec 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X