ಏಷ್ಯಾ ಕಪ್: ಧವನ್-ರೋ'ಹಿಟ್' ಶತಕ, ಪಾಕ್ ವಿರುದ್ಧ ಭಾರತಕ್ಕೆ ಗೆಲುವು

ದುಬೈ, ಸೆಪ್ಟೆಂಬರ್ 23: ಏಷ್ಯಾ ಕಪ್ 2018ರ ಸೂಪರ್ ಫೋರ್ ಮೂರನೇ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 9 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರ ಆಕರ್ಷಕ ಶತಕದಾಟ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಸುಲಭ ಜಯ ದಾಖಲಿಸಲು ನೆರವು ನೀಡಿತು.
ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ಶೋಯೆಬ್ ಮಲ್ಲಿಕ್ 78, ನಾಯಕ ಸರ್ಫರಾಜ್ ಅಹಮ್ಮದ್ 44 ರನ್ ನೆರವಿನಿಂದ 50 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದು 237 ರನ್ ಪೇರಿಸಿ ಭಾರತಕ್ಕೆ 238 ಗರಿಷ್ಟ ರನ್ ಗುರಿ ನೀಡಿತ್ತು.
ಗುರಿ ಬೆನ್ನಟ್ಟಿದ ಭಾರತಕ್ಕೆ ರೋಹಿತ್-ಧವನ್ ಭರ್ಜರಿ ಜೊತೆಯಾಟದ ಬೆಂಬಲ ದೊರೆಯಿತು. ನಾಯಕ ರೋಹಿತ್ 111 ರನ್, ಶಿಖರ್ ಧವನ್ 114 ರನ್ ಚಚ್ಚಿ ತಂಡವನ್ನು ಗೆಲುವಿನ ದಡ ಸೇರಿಸಿದರು. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಶಿಖರ್ ಧವನ್ ಪಾಲಾಯಿತು.
ಈ ಏಷ್ಯಾ ಕಪ್ ಟೂರ್ನಿಯ ಮೊದಲ ಮುಖಾಮುಖಿಯಲ್ಲಿ ಭಾರತ, ಪಾಕಿಸ್ತಾನ ವಿರುದ್ಧ 8 ವಿಕೆಟ್ ಭರ್ಜರಿ ಜಯ ಸಾಧಿಸಿತ್ತು. ಭಾರತ ವಿರುದ್ಧ ಹೀನಾಯ ಸೋಲು ಕಂಡಿದ್ದ ಪಾಕ್ ತಂಡ ಅಫ್ಘಾನಿಸ್ತಾನ ವಿರುದ್ಧ 3 ವಿಕೆಟ್ ರೋಚಕ ಜಯ ಸಾಧಿಸುವುದರೊಂದಿಗೆ ತಮ್ಮದೂ ಬಲಿಷ್ಟ ತಂಡವೇ ಎಂದು ಸಾರಿತ್ತು. ಹೀಗಾಗಿ ಇಂದಿನ (ಸೆ.23) ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿತ್ತು.
ಭಾರತ ತಂಡ: ರೋಹಿತ್ ಶರ್ಮಾ (ಸಿ), ಶಿಖರ್ ಧವನ್, ಅಂಬಾಟಿ ರಾಯುಡು, ದಿನೇಶ್ ಕಾರ್ತಿಕ್, ಎಂಎಸ್ ಧೋನಿ (ವಿಕೆ), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಜಸ್ ಪ್ರೀತ್ ಬೂಮ್ರ.
ಪಾಕಿಸ್ತಾನ ತಂಡ: ಫಖರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಝಾಮ್, ಶೋಯೆಬ್ ಮಲಿಕ್, ಸರ್ಫ್ರಜ್ ಅಹ್ಮದ್ (ಸಿ / ಸಿ), ಆಸಿಫ್ ಅಲಿ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಮೊಹಮ್ಮದ್ ಅಮೀರ್, ಶಾಹೈನ್ ಅಫ್ರಿದಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications