ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್: ಸೂಪರ್ ಫೋರ್ ತಂಡಗಳು, ವೇಳಾಪಟ್ಟಿ, ಪ್ರಸಾರ ಮಾಹಿತಿ

Asia Cup 2018, Super Four Teams, Schedule, Date and Time

ದುಬೈ, ಸೆಪ್ಟೆಂಬರ್ 20: ಹಾಂಕಾಂಗ್ ಎದುರು ಪರದಾಡಿ ಗೆಲ್ಲುವ ಮೂಲಕ ಏಷ್ಯಾ ಕಪ್ 2018ರ ಗೆಲುವು ಆರಂಭಿಸಿದ ಭಾರತ ಆ ಬಳಿಕ ಪಾಕಿಸ್ತಾನದ ಎದುರು 8 ವಿಕೆಟ್ ಸುಲಭ ಗೆಲುವು ದಾಖಲಿಸಿತ್ತು. ಎರಡನೇ ಗೆಲುವಿನ ಬಳಿಕ ಗ್ರೂಪ್ ಎಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ.

ಹಾಲಿ ಚಾಂಪಿಯನ್ ಆಗಿರುವ ಭಾರತ ಸೇರಿ ಪಾಕಿಸ್ತಾನ, ಅಪ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಸೂಪರ್ ಫೋರ್ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಂಡಿವೆ. ಹಾಂಕಾಂಗ್ ಮತ್ತು ಶ್ರೀಲಂಕಾ ತಂಡಗಳು ಸ್ಪರ್ಧೆ ಮುಗಿಸಿದ್ದಾಗಿದೆ. ಹಾಗಾದರೆ ಸೂಪರ್ ಫೋರ್ ತಂಡಗಳಿಗೆ ಸಂಬಂಧಿಸಿ ಪ್ರಮುಖ ಮಾಹಿತಿಗಳತ್ತ ಕಣ್ಣಾಯಿಸೋಣ.

ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯುತ್ತಿರುವ ಈ ಟೂರ್ನಮೆಂಟ್ ನಲ್ಲಿ ದುಬೈಯ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ, ಅಬುಧಾಬಿಯ ಶೈಕ್ ಸೈಯ್ಯದ್ ಸ್ಟೇಡಿಯಂಗಳಲ್ಲಿ ಪಂದ್ಯಗಳು ನಡೆಯಲಿವೆ. ಭಾರತೀಯ ಕಾಲಮಾನ 5 pm ಗೆ ಪಂದ್ಯಗಳು ಆರಂಭಗೊಳ್ಳಲಿವೆ.

ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ಚಾನೆಲ್ ನಲ್ಲಿ ಪಂದ್ಯಗಳು ನೇರಪ್ರಸಾರಗೊಳ್ಳಲಿವೆ. ಭಾರತ ತಂಡದ ಪಂದ್ಯಗಳನ್ನು ಡಿಡಿ ನ್ಯಾಷನಲ್ ಚಾನೆಲ್ ಪ್ರಸಾರಗೊಳಿಸಲಿದೆ. ಹಾಟ್ಸ್ ಸ್ಟಾರ್ ಡಾಟ್ ಕಾಮ್ ನಲ್ಲೂ ಪಂದ್ಯಗಳ ಲೈವ್ ಅಪ್ ಡೇಟ್ಸ್ ಸಿಗಲಿವೆ.

ಗ್ರೂಪ್ ಹಂತದ ಪಂದ್ಯಗಳು
ಸೆಪ್ಟೆಂಬರ್ 15 - ಬಾಂಗ್ಲಾದೇಶ 137 ರನ್ ಗಳಿಂದ ಶ್ರೀಲಂಕಾವನ್ನು ಸೋಲಿಸಿತು.
ಸೆಪ್ಟೆಂಬರ್ 16- ಪಾಕಿಸ್ತಾನ ಹಾಂಗ್ ಕಾಂಗ್ ಅನ್ನು 8 ವಿಕೆಟ್ಗಳಿಂದ ಸೋಲಿಸಿತು.
ಸೆಪ್ಟೆಂಬರ್ 17 - ಅಫ್ಘಾನಿಸ್ತಾನ 98 ರನ್ ಗಳಿಂದ ಶ್ರೀಲಂಕಾವನ್ನು ಸೋಲಿಸಿತು.
18 ಸೆಪ್ಟೆಂಬರ್ - ಭಾರತ ತಂಡವು ಹಾಂಗ್ ಕಾಂಗ್ ಅನ್ನು 26 ರನ್ ಗಳಿಂದ ಸೋಲಿಸಿತು
19 ಸೆಪ್ಟೆಂಬರ್ - ಭಾರತ ತಂಡವು ಪಾಕಿಸ್ತಾನವನ್ನು 8 ವಿಕೆಟ್ ಗಳಿಂದ ಸೋಲಿಸಿತು.
ಸೆಪ್ಟೆಂಬರ್ 20 - ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ 136 ರನ್ ಜಯ (ಅಬುಧಾಬಿ).

ಸೂಪರ್ ಫೋರ್ ಪಂದ್ಯಗಳು
21 ಸೆಪ್ಟೆಂಬರ್ - ಭಾರತ Vs ಬಾಂಗ್ಲಾದೇಶ (ದುಬೈ) - 5:00 PM
21 ಸೆಪ್ಟೆಂಬರ್ - ಪಾಕಿಸ್ತಾನ Vs ಅಫ್ಘಾನಿಸ್ತಾನ (ಅಬುಧಾಬಿ) - 5:00 PM
23 ಸೆಪ್ಟೆಂಬರ್ - ಭಾರತ Vs ಪಾಕಿಸ್ತಾನ (ದುಬೈ) - 5:00 PM (IST)
ಸೆಪ್ಟೆಂಬರ್ 23 - ಅಫ್ಘಾನಿಸ್ತಾನ Vs ಬಾಂಗ್ಲಾದೇಶ (ಅಬುಧಾಬಿ) - 5:00 PM
ಸೆಪ್ಟೆಂಬರ್ 25 - ಭಾರತ Vs ಅಫ್ಘಾನಿಸ್ತಾನ (ದುಬೈ) - 5:00 PM
26 ಸೆಪ್ಟೆಂಬರ್ - ಪಾಕಿಸ್ತಾನ Vs ಬಾಂಗ್ಲಾದೇಶ (ಅಬುಧಾಬಿ) - 5:00 PM

28 ಸೆಪ್ಟೆಂಬರ್ - ಫೈನಲ್ (ದುಬೈ) 5:00 PM

Story first published: Friday, September 21, 2018, 17:03 [IST]
Other articles published on Sep 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X