ಭಾರತ-ಪಾಕ್ ಪಂದ್ಯದ ವೇಳೆ ತನ್ನ ಮಗಳು ಭಾರತದ ಧ್ವಜವನ್ನು ಹಿಡಿದಿದ್ದಳು: ಶಾಹಿದ್ ಅಫ್ರಿದಿ

ಪಾಕಿಸ್ತಾನದ ಮಾಜಿ ನಾಯಕ ಮತ್ತು ವಿಶ್ವದ ಅತ್ಯಂತ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಶಾಹಿದ್ ಅಫ್ರಿದಿ ಹಲವು ವಿವಾದಗಳಿಂದಲೇ ಸುದ್ದಿಯಾಗಿದ್ದಾರೆ. ಭಾರತದ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಜೊತೆಗೂ ಹಲವು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ವಾದ-ವಿವಾದ ಮಾಡಿದ್ದಾರೆ. ಆದರೆ ಈ ಬಾರಿ ಅಫ್ರಿದಿ ನೀಡಿರುವ ಹೇಳಿಕೆ ಭಾರತದ ಕ್ರಿಕೆಟ್‌ ಅಭಿಮಾನಿಗಳಲ್ಲಿ ಮಾತ್ರವಲ್ಲಿ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಲ್ಲೂ ಅಚ್ಚರಿ ಮೂಡಿಸಿದೆ.

ಏಷ್ಯಾಕಪ್‌ 2022ರ ಸೂಪರ್ 4 ಹಂತದ ಪಂದ್ಯದಲ್ಲಿ ಕಳೆದ ವಾರ ಪಾಕಿಸ್ತಾನ ಮತ್ತು ಭಾರತ ಮುಖಾಮುಖಿಯಾಗಿದ್ದವು. ಭಾರತ ಪಾಕಿಸ್ತಾನ ನಡುವಿನ ಈ ಪಂದ್ಯವನ್ನು ಶಾಹಿದ್ ಅಫ್ರಿದಿ ಮಗಳು ದುಬೈ ಕ್ರೀಡಾಂಗಣದಲ್ಲಿ ವೀಕ್ಷಿಸಿದ್ದಾರೆ. ಆದರೆ ಪಂದ್ಯದ ವೇಳೆ ಶಾಹಿದ್ ಅಫ್ರಿದಿ ಪುತ್ರಿ ಪಾಕಿಸ್ತಾನದ ಧ್ವಜದ ಬದಲಾಗಿ ಭಾರತದ ಧ್ವಜವನ್ನು ಹಿಡಿದಿದ್ದಳು ಎಂದು ಶಾಹಿದ್ ಅಫ್ರಿದಿ ತಿಳಿಸಿದ್ದಾರೆ.

Breaking: ICC T20 World Cup 2022: ಟಿ20 ವಿಶ್ವಕಪ್‌ಗಾಗಿ ಭಾರತ ತಂಡ ಪ್ರಕಟBreaking: ICC T20 World Cup 2022: ಟಿ20 ವಿಶ್ವಕಪ್‌ಗಾಗಿ ಭಾರತ ತಂಡ ಪ್ರಕಟ

ಪಾಕಿಸ್ತಾನದ ಟೆಲಿವಿಷನ್ ಚಾನೆಲ್‌ನಲ್ಲಿ ಮಾತನಾಡುವ ವೇಳೆ ಶಾಹಿದ್ ಅಫ್ರಿದಿ ಈ ವಿಚಾರ ಬಹಿರಂಗಪಡಿಸಿದ್ದಾರೆ. ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕೇವಲ 10 ಪ್ರತಿಶತದಷ್ಟು ಪಾಕಿಸ್ತಾನಿ ಅಭಿಮಾನಿಗಳಿದ್ದರೆ, ಶೇಕಡಾ 90 ರಷ್ಟು ಅಭಿಮಾನಿಗಳು ಭಾರತದವರು ಎಂದು ಹೇಳಿದರು. ಅಲ್ಲಿ ಹೆಚ್ಚು ಭಾರತೀಯ ಅಭಿಮಾನಿಗಳಿದ್ದರು ಎಂದು ತಿಳಿದು ಬಂದಿದೆ ಎಂದು ಸಾಮಾ ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಪಾಕಿಸ್ತಾನದ ಧ್ವಜ ಸಿಗಲಿಲ್ಲ

ಪಾಕಿಸ್ತಾನದ ಧ್ವಜ ಸಿಗಲಿಲ್ಲ

"ಸ್ಟೇಡಿಯಂನಲ್ಲಿ ಕೇವಲ ಶೇಕಡ 10ರಷ್ಟು ಪಾಕಿಸ್ತಾನಿ ಅಭಿಮಾನಿಗಳು ಮತ್ತು ಉಳಿದವರು ಭಾರತೀಯ ಅಭಿಮಾನಿಗಳು ಎಂದು ನನ್ನ ಹೆಂಡತಿ ನನಗೆ ಹೇಳಿದರು. ಪಾಕಿಸ್ತಾನದ ಧ್ವಜಗಳು ಅಲ್ಲಿ ಲಭ್ಯವಿಲ್ಲ, ಆದ್ದರಿಂದ ನನ್ನ ಕಿರಿಯ ಮಗಳು ಭಾರತದ ಧ್ವಜವನ್ನು ಹಿಡಿದುಕೊಂಡಿದ್ದಳು. ಮಗಳು ಭಾರತೀಯ ಧ್ವಜವನ್ನು ಹಿಡಿದುಕೊಂಡಿರುವ ವಿಡಿಯೋವನ್ನು ನಾನು ಸ್ವೀಕರಿಸಿದ್ದೇನೆ, ಆದರೆ ಅದನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಬೇಕೇ ಅಥವಾ ಬೇಡವೇ ಎಂದು ನನಗೆ ಖಚಿತವಾಗಿರಲಿಲ್ಲ," ಎಂದು ಶಾಹಿದ್ ಅಫ್ರಿದಿ ಹೇಳಿದರು.

Asia Cup 2022: ಪಾಕಿಸ್ತಾನ ಸೋಲಿಸಿ ಪ್ರಶಸ್ತಿ ಗೆದ್ದ ಶ್ರೀಲಂಕಾಗೆ ಗೌತಮ್ ಗಂಭೀರ್ ಶ್ಲಾಘನೆ

ಭಾರತ ವಿರುದ್ಧ ಪಾಕಿಸ್ತಾನಕ್ಕೆ ಗೆಲುವು

ಭಾರತ ವಿರುದ್ಧ ಪಾಕಿಸ್ತಾನಕ್ಕೆ ಗೆಲುವು

ಸೂಪರ್-4 ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಜಯಗಳಿಸಿತ್ತು. ಮೊಹಮ್ಮದ್ ರಿಜ್ವಾನ್ 51 ಎಸೆತಗಳಲ್ಲಿ 71 ರನ್ ಗಳಿಸಿ 182 ರನ್ ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ 19.5 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 182 ರನ್ ಗಳಿಸಲು ನೆರವಾದರು.

"ಅತ್ಯುತ್ತಮ ಗೆಲುವು, ರಿಜ್ವಾನ್, ನವಾಜ್ ಮತ್ತು ಆಸಿಫ್ ಅವರ ಉತ್ತಮ ಕೊಡುಗೆಗಳು. ಭಾರತ-ಪಾಕಿಸ್ತಾನ ಕ್ರಿಕೆಟ್ ಮತ್ತೊಮ್ಮೆ ಸಂಪೂರ್ಣ ಅತ್ಯುತ್ತಮವಾಗಿದೆ. ವಿಶ್ವದ ಶ್ರೇಷ್ಠ ಕ್ರೀಡಾಕೂಟ" ಎಂದು ಅವರು ಟ್ವಿಟರ್ ನಲ್ಲಿ ಹೇಳಿದ್ದಾರೆ.

ಶ್ರೀಲಂಕಾ ಗೆಲುವಿಗೆ ಶಾಹಿದ್ ಅಫ್ರಿದಿ ಅಭಿನಂದನೆ

ಶ್ರೀಲಂಕಾ ಗೆಲುವಿಗೆ ಶಾಹಿದ್ ಅಫ್ರಿದಿ ಅಭಿನಂದನೆ

ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಶ್ರೀಲಂಕಾ ತಂಡವನ್ನು ಶಾಹಿದ್ ಅಫ್ರಿದಿ ಅಭಿನಂದಿಸಿದ್ದಾರೆ. ಫೈನಲ್ ಪಂದ್ಯದ ಆರಂಭದಲ್ಲಿ ಪಾಕಿಸ್ತಾನ ಏಕಪಕ್ಷೀಯವಾಗಿ ಗೆಲ್ಲುತ್ತದೆ ಎಂದು ಭಾವಿಸಿದ್ದೆ, ಆದರೆ ನಂತರ ಶ್ರೀಲಂಕಾ ಅದ್ಭುತ ಪ್ರದರ್ಶನ ನೀಡಿತು ಎಂದು ಹೇಳಿದ್ದಾರೆ.

ಏಷ್ಯಾಕಪ್ ಪಂದ್ಯಾವಳಿಯಲ್ಲಿ ಶ್ರೀಲಂಕಾ ತಂಡ ಅದ್ಭುತವಾಗಿ ಆಡಿದೆ, ಏಷ್ಯಾಕಪ್‌ ಗೆಲ್ಲಲು ನಿವು ಅರ್ಹರಾಗಿದ್ದೀರಿ, ಚೆನ್ನಾಗಿ ಆಡಿದಿರಿ, ನಿಮಗೆ ಅಭಿನಂದನೆಗಳು ಎಂದು ಶ್ರೀಲಂಕಾ ತಂಡದ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಅಫ್ರಿದಿ ಹೇಳಿಕೆಗೆ ಹಲವರ ಮೆಚ್ಚುಗೆ

ಅಫ್ರಿದಿ ಹೇಳಿಕೆಗೆ ಹಲವರ ಮೆಚ್ಚುಗೆ

ಶಾಹಿದ್ ಅಫ್ರಿದಿ ನೀಡಿರುವ ಹೇಳಿಕೆ ಈಗ ವೈರಲ್ ಆಗಿದ್ದು ಹಲವು ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಮಗಳು ಭಾರತ ತ್ರಿವರ್ಣ ಧ್ವಜವನ್ನು ಹಿಡಿದಿದ್ದಕ್ಕಾಗಿ ಅದಕ್ಕೆ ಗೌರವ ನೀಡಿದ್ದಕ್ಕಾಗಿ ನಾವು ನಿಮಗೆ ಅಭಿನಂದನೆ ಸಲ್ಲಿಸುತ್ತೇವೆ, ಭಾರತದ ಕಡೆಯಿಂದ ವಂದನೆಗಳು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಮತ್ತೊಬ್ಬ ಪಾಕಿಸ್ತಾನಿ ಪ್ರಜೆ ಕಮೆಂಟ್ ಮಾಡಿದ್ದು, ನಮ್ಮ ಕಡೆಯಿಂದ ಭಾರತಕ್ಕೆ ಗೌರವ ಸಮರ್ಪಣೆ, ಭಾರತ ಪಾಕಿಸ್ತಾನದ ಶತ್ರುವಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬ ಅಫ್ರಿದಿ ಅಭಿಮಾನಿ ಕಮೆಂಟ್ ಮಾಡಿದ್ದು, ನೀವು ಯಾವಾಗಲೂ ನಿರೀಕ್ಷೆಗಳನ್ನೂ ಮೀರುತ್ತೀರಿ ಎಂದು ಹೇಳಿದ್ದಾನೆ.

For Quick Alerts
ALLOW NOTIFICATIONS
For Daily Alerts
Story first published: Monday, September 12, 2022, 18:46 [IST]
Other articles published on Sep 12, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X