ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಕೊಹ್ಲಿಯ ಸಿಕ್ಸರ್ ಸುರಿಮಳೆ ಕಂಡು ಬೆರಗಾದ ಜಡೇಜಾ, ಚಾಹಲ್; ವಿಡಿಯೋ

Asia Cup 2022: Virat Kohli smashed huge sixes to Ravindra Jadeja and Yuzvendra Chahal in net practice

ಬಹು ನಿರೀಕ್ಷಿತ ಏಷ್ಯಾಕಪ್ ಟೂರ್ನಿಗೆ ದಿನಗಣನೆ ಆರಂಭಗೊಂಡಿದೆ. ವಾರಾಂತ್ಯದ ಶನಿವಾರದಂದು ( ಆಗಸ್ಟ್ 27 ) ಟೂರ್ನಿಯ ಮೊದಲ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಮೂಲಕ ಟೂರ್ನಿ ಚಾಲನೆ ಪಡೆದುಕೊಳ್ಳಲಿದ್ದು ಟೂರ್ನಿಯ ಎರಡನೇ ದಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಆಗಸ್ಟ್ 28ರ ಭಾನುವಾರದಂದು ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕಾಗಿ ಉಭಯ ತಂಡಗಳು ಸೆಣಸಾಡಲು ಸಿದ್ಧಗೊಳ್ಳುತ್ತಿವೆ.

ಏಷ್ಯಾಕಪ್‌ಗೆ ಆರನೇ ತಂಡವಾಗಿ ಹಾಂಗ್‌ಕಾಂಗ್ ಆಯ್ಕೆಯಾದ ನಂತರ ಟೂರ್ನಿಯ ವೇಳಾಪಟ್ಟಿ ಹೇಗಿದೆ?ಏಷ್ಯಾಕಪ್‌ಗೆ ಆರನೇ ತಂಡವಾಗಿ ಹಾಂಗ್‌ಕಾಂಗ್ ಆಯ್ಕೆಯಾದ ನಂತರ ಟೂರ್ನಿಯ ವೇಳಾಪಟ್ಟಿ ಹೇಗಿದೆ?

ಇನ್ನು ಇತ್ತೀಚಿಗಷ್ಟೆ ನಡೆದ ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ವಿರುದ್ಧದ ಸರಣಿಗಳಿಗೆ ಅಲಭ್ಯರಾಗಿ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ಈಗಾಗಲೇ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಗಾಗಿ ಅಗತ್ಯವಾದ ಸಿದ್ಧತೆಗಳನ್ನು ನಡೆಸಿಕೊಂಡಂತಿದೆ. ಹೌದು, ಕೊನೆಯದಾಗಿ ಜುಲೈ 10ರಂದು ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದು ಕೊನೆಯ ಬಾರಿಗೆ ಟಿ ಟ್ವೆಂಟಿ ಪಂದ್ಯವನ್ನಾಡಿದ್ದ ವಿರಾಟ್ ಕೊಹ್ಲಿ ಇದೀಗ ಇದೀಗ ಒಂದೂವರೆ ತಿಂಗಳ ಬಳಿಕ ಮೈದಾನದಲ್ಲಿ ಬ್ಯಾಟ್ ಹಿಡಿದು ಟಿ ಟ್ವೆಂಟಿ ಪಂದ್ಯಕ್ಕಾಗಿ ತಾಲೀಮು ಆರಂಭಿಸಿದ್ದಾರೆ.

ಏಷ್ಯಾಕಪ್‌ಗೆ ಆಯ್ಕೆಯಾದ ಭಾರತದ 15 ಆಟಗಾರರ ವಯಸ್ಸು: ಯಾರು ಕಿರಿಯ, ಯಾರಿಗೆ ಹೆಚ್ಚು ವಯಸ್ಸು?ಏಷ್ಯಾಕಪ್‌ಗೆ ಆಯ್ಕೆಯಾದ ಭಾರತದ 15 ಆಟಗಾರರ ವಯಸ್ಸು: ಯಾರು ಕಿರಿಯ, ಯಾರಿಗೆ ಹೆಚ್ಚು ವಯಸ್ಸು?

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಆಯೋಜನೆಯಾಗಿದ್ದು, ಇದೇ ಕ್ರೀಡಾಂಗಣದಲ್ಲಿ ಕೊನೆಯ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿ ಟೀಮ್ ಇಂಡಿಯಾ ವಿರುದ್ಧ ಪಾಕ್ ಗೆದ್ದಿತ್ತು. ಇದೀಗ ಇದೇ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಪಂದ್ಯಕ್ಕಾಗಿ ನೆಟ್ ಅಭ್ಯಾಸ ಆರಂಭಿಸಿದ್ದು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹೀಗೆ ವೈರಲ್ ಆಗಿರುವ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಸಿಕ್ಸರ್ ಮೇಲೆ ಸಿಕ್ಸರ್ ಸಿಡಿಸಿದ್ದು, ಈ ವಿಡಿಯೋ ವೀಕ್ಷಿಸಿದ ನೆಟ್ಟಿಗರು ಈ ಬಾರಿ ಕೊಹ್ಲಿ ಅಬ್ಬರಿಸುವುದು ಖಚಿತ ಎನ್ನುತ್ತಿದ್ದಾರೆ.

ಸ್ಪಿನ್ನರ್‌ಗಳಿಗೆ ಸಿಕ್ಸರ್ ಮೇಲೆ ಸಿಕ್ಸರ್

ಪಾಕ್ ವಿರುದ್ಧದ ಪಂದ್ಯಕ್ಕಾಗಿ ನೆಟ್ ಅಭ್ಯಾಸ ಆರಂಭಿಸಿರುವ ಟೀಮ್ ಇಂಡಿಯಾ ಕ್ಯಾಂಪ್‌ನಲ್ಲಿ ವಿರಾಟ್ ಕೊಹ್ಲಿ ಸಿಕ್ಸರ್ ಮೇಲೆ ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದಾರೆ. ಟೀಮ್ ಇಂಡಿಯಾದ ಸ್ಪಿನ್ನರ್‌ಗಳಾದ ಯುಜುವೇಂದ್ರ ಚಾಹಲ್ ಹಾಗೂ ರವೀಂದ್ರ ಜಡೇಜಾ ಎಸೆತಗಳಿಗೆ ವಿರಾಟ್ ಕೊಹ್ಲಿ ಸಿಕ್ಸರ್ ಬಾರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಕೊಹ್ಲಿ ಟೀಮ್ ಇಂಡಿಯಾದ ಇತರೆ ಬೌಲರ್‌ಗಳಿಗೂ ಸಹ ಉತ್ತಮ ಹೊಡೆತಗಳನ್ನು ಬಾರಿಸಿದ್ದಾರೆ. ಸದ್ಯ ಈ ವಿಡಿಯೋ ವೀಕ್ಷಿಸಿರುವ ನೆಟ್ಟಿಗರು ಹಳೇ ಕೊಹ್ಲಿ ಮರಳಿ ಬಂದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಶತಕವಿಲ್ಲದೇ 1000 ದಿನ

ಶತಕವಿಲ್ಲದೇ 1000 ದಿನ

ಇನ್ನು ವಿರಾಟ್ ಕೊಹ್ಲಿ 2019ರ ನವೆಂಬರ್ 23ರಂದು ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬಾರಿಸಿದ್ದ ಶತಕವೇ ಅಂತಿಮ ಶತಕವಾಗಿದೆ. ಇದಾದ ನಂತರ ಯಾವುದೇ ಶತಕವನ್ನೂ ಬಾರಿಸದ ವಿರಾಟ್ ಕೊಹ್ಲಿ ಇದೇ ಆಗಸ್ಟ್ 19ಕ್ಕೆ ಶತಕ ರಹಿತ 1000 ದಿನಗಳನ್ನು ಪೂರೈಸಿದ್ದಾರೆ. ಹೀಗೆ ಮೂರು ವರ್ಷಗಳಿಂದ ಶತಕದ ಬರವನ್ನು ಎದುರಿಸುತ್ತಿರುವ ವಿರಾಟ್ ಕೊಹ್ಲಿ ಈ ಬಾರಿಯ ಏಷ್ಯಾಕಪ್‌ನಲ್ಲಿ ಶತಕ ಬಾರಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಏಷ್ಯಾಕಪ್‌ನಲ್ಲಿ ಕೊಹ್ಲಿ ಅಂಕಿಅಂಶ

ಏಷ್ಯಾಕಪ್‌ನಲ್ಲಿ ಕೊಹ್ಲಿ ಅಂಕಿಅಂಶ

2010ರಿಂದ 2016ರವರೆಗೆ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸಿರುವ ವಿರಾಟ್ ಕೊಹ್ಲಿ ಒಟ್ಟಾರೆ 16 ಏಷ್ಯಾಕಪ್ ಪಂದ್ಯಗಳ ಪೈಕಿ 14 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಏಷ್ಯಾಕಪ್‌ನಲ್ಲಿ ಒಟ್ಟಾರೆ 766 ರನ್ ಕಲೆಹಾಕಿರುವ ವಿರಾಟ್ ಕೊಹ್ಲಿ ಏಷ್ಯಾಕಪ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಬಾರಿಸಿರುವ ಆಟಗಾರರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಏಷ್ಯಾಕಪ್‌ನಲ್ಲಿ ಒಟ್ಟಾರೆ 3 ಶತಕ ಹಾಗೂ 2 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

Story first published: Thursday, August 25, 2022, 12:18 [IST]
Other articles published on Aug 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X