ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup: ಇದೇ ಭಾರತ ತಂಡದ ದೊಡ್ಡ ಸಮಸ್ಯೆ; ಏಷ್ಯಾ ಕಪ್ ಸೋಲಿನ ಹಿನ್ನೆಲೆ ವಿಮರ್ಶಿಸಿದ ಬಿಸಿಸಿಐ

Asia Cup: Slow Batting In The Middle Overs Is The Biggest Problem For Team India Says Report

7ರಿಂದ 15 ಓವರ್‌ಗಳ ನಡುವಿನ ಮಧ್ಯದ ಓವರ್‌ಗಳಲ್ಲಿ ಭಾರತದ ಬ್ಯಾಟಿಂಗ್ ಕಾಳಜಿಯ ಪ್ರಮುಖ ಕ್ಷೇತ್ರವಾಗಿದೆ, ಅಕ್ಟೋಬರ್ 16ರಿಂದ ಪ್ರಾರಂಭವಾಗುವ ಪ್ರಮುಖ ಐಸಿಸಿ ಟಿ20 ವಿಶ್ವಕಪ್‌ಗೆ ಮುನ್ನ ಬಿಸಿಸಿಐನ ಏಷ್ಯಾ ಕಪ್ ವಿಮರ್ಶೆ ಸಭೆಯಲ್ಲಿ ಆಘಾತಕಾರಿ ವಿಷಯ ಹೊರಹೊಮ್ಮಿದೆ.

ಟಿ20 ವಿಶ್ವಕಪ್‌ನಲ್ಲಿ ಅಕ್ಟೋಬರ್ 23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮೆಲ್ಬೋರ್ನ್‌ನಲ್ಲಿ ಭಾರತದ ಮೊದಲ ಪಂದ್ಯ ನಡೆಯಲಿದೆ. ಸೋಮವಾರದಂದು ಸೆಪ್ಟೆಂಬರ್ 20ರಿಂದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಆರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳೊಂದಿಗೆ ವಿಶ್ವಕಪ್ ಟೂರ್ನಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿತು.

IND vs ENG T20: ಸ್ಮೃತಿ ಮಂಧಾನ ಅಬ್ಬರದ ಬ್ಯಾಟಿಂಗ್; ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಗೆಲುವುIND vs ENG T20: ಸ್ಮೃತಿ ಮಂಧಾನ ಅಬ್ಬರದ ಬ್ಯಾಟಿಂಗ್; ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಗೆಲುವು

ಆದಾಗ್ಯೂ, ಭಾರತ ತಂಡದ ಆಯ್ಕೆಯ ಹೊರತಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ರಾಷ್ಟ್ರೀಯ ಆಯ್ಕೆ ಸಮಿತಿಯೊಂದಿಗೆ ಏಷ್ಯಾ ಕಪ್ ಚಾಂಪಿಯನ್‌ಶಿಪ್‌ನಲ್ಲಿ ರಾಷ್ಟ್ರೀಯ ತಂಡದ ಕಳಪೆ ಪ್ರದರ್ಶನದ ಬಗ್ಗೆ ಚರ್ಚಿಸಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಸುಧಾರಿಸಬೇಕಾದ ವಿಷಯಗಳು

ಟಿ20 ವಿಶ್ವಕಪ್‌ನಲ್ಲಿ ಸುಧಾರಿಸಬೇಕಾದ ವಿಷಯಗಳು

"ಹೌದು, ಏಷ್ಯಾ ಕಪ್ ಪ್ರದರ್ಶನವನ್ನು ಚರ್ಚಿಸಲಾಗಿದೆ. ಆದರೆ ನಿಸ್ಸಂಶಯವಾಗಿ, ಸಮಸ್ಯೆಗಳಿಗಿಂತ ಹೆಚ್ಚಾಗಿ ಪರಿಹಾರಗಳ ಮೇಲೆ ಕೇಂದ್ರೀಕರಿಸಲಾಗಿದೆ ಮತ್ತು ಟಿ20 ವಿಶ್ವಕಪ್‌ನಲ್ಲಿ ಸುಧಾರಿಸಬೇಕಾದ ವಿಷಯಗಳು ಯಾವುವು ಎಂಬುದರ ಬಗ್ಗೆ ಚರ್ಚಿಸಲಾಗಿದೆ," ಎಂದು ಬೆಳವಣಿಗೆಗಳ ಬಗ್ಗೆ ಹಿರಿಯ ಬಿಸಿಸಿಐನ ಅನಾಮಧೇಯ ಅಧಿಕಾರಿಯೊಬ್ಬರು ಪರಿಸ್ಥಿತಿಗಳ ಕುರಿತು ಪಿಟಿಐಗೆ ತಿಳಿಸಿದ್ದಾರೆ.

ಕೆಲವು ಸಮಸ್ಯೆಗಳಿದ್ದರೂ, ಮಧ್ಯಮ ಓವರ್‌ಗಳಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವಿಧಾನವು ಉತ್ತಮ ತಂಡಗಳ ವಿರುದ್ಧ ಸಮಸ್ಯೆಯಾಗುತ್ತಿದೆ ಮತ್ತು ಏಷ್ಯಾ ಕಪ್‌ನಲ್ಲಿ ಸಮಸ್ಯೆಯಾಗಿದೆ ಎಂದು ಎಲ್ಲರೂ ಒಗ್ಗಟ್ಟಿನಿಂದ ಒಪ್ಪಿಕೊಂಡರು.

ವಿಶ್ವ ದರ್ಜೆಯ ಆಟಗಾರರನ್ನು ಹೊಂದಿದ್ದೇವೆ

ವಿಶ್ವ ದರ್ಜೆಯ ಆಟಗಾರರನ್ನು ಹೊಂದಿದ್ದೇವೆ

"ಮಧ್ಯಮ ಓವರ್‌ಗಳ ಸಮಯದಲ್ಲಿ ಬ್ಯಾಟಿಂಗ್‌ನಲ್ಲಿ ಸ್ಪಷ್ಟ ಸಮಸ್ಯೆ ಇದೆ, ವಿಶೇಷವಾಗಿ 7 ರಿಂದ 15ನೇ ಓವರ್ ನಡುವೆ ನಾವು ಏಷ್ಯಾ ಕಪ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ. ನಿಸ್ಸಂಶಯವಾಗಿ ತಂಡದ ಥಿಂಕ್-ಟ್ಯಾಂಕ್ ತಿಳಿದಿರುತ್ತದೆ ಮತ್ತು ನಾವು ಕೆಲವು ವಿಶ್ವ ದರ್ಜೆಯ ಆಟಗಾರರನ್ನು ಹೊಂದಿದ್ದೇವೆ, ತಂಡದ ಅಗತ್ಯಗಳಿಗೆ ಅನುಗುಣವಾಗಿ ಅವರ ಆಟವನ್ನು ಬದಲಾಯಿಸಿಕೊಳ್ಳಬೇಕು," ಎಂದು ಅಧಿಕಾರಿ ಹೇಳಿದರು.

ಭಾರತದ ಬ್ಯಾಟಿಂಗ್ ನೋಡಿದರೆ, ಗುರಿ ನಿಗದಿಪಡಿಸುವಾಗ ಅಥವಾ ಚೇಸಿಂಗ್ ಮಾಡುವಾಗ 7 ರಿಂದ 15ನೇ ಓವರ್‌ಗಳ ನಡುವೆ ಎಡವಿದ್ದಾರೆ. ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆ ಒಂಬತ್ತು ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು 59 ರನ್ ಗಳಿಸಲಾಯಿತು. ಹಾಂಕಾಂಗ್ ವಿರುದ್ಧ 62 ರನ್ ಗಳಿಸಿದ್ದರೆ, ಪಾಕಿಸ್ತಾನ ವಿರುದ್ಧ ಸೂಪರ್ 4ರಲ್ಲಿ 1 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿತ್ತು. ಆ ಒಂಬತ್ತು ಓವರ್‌ಗಳಲ್ಲಿ 78 ರನ್‌ಗಳು ಬಂದಾಗ ಶ್ರೀಲಂಕಾ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿತ್ತು

ಟಿ20 ವಿಶ್ವಕಪ್‌ಗಾಗಿ ಸ್ಯಾಮ್ಸನ್ ಹೆಸರನ್ನು ಚರ್ಚಿಸಲಾಗಿಲ್ಲ

ಟಿ20 ವಿಶ್ವಕಪ್‌ಗಾಗಿ ಸ್ಯಾಮ್ಸನ್ ಹೆಸರನ್ನು ಚರ್ಚಿಸಲಾಗಿಲ್ಲ

ಭಾರತೀಯ ತಂಡದ ಆಯ್ಕೆಗೆ ಮುನ್ನ, ರಿಷಭ್ ಪಂತ್ ಬದಲಿಗೆ ಸಂಜು ಸ್ಯಾಮ್ಸನ್ ಅವರನ್ನು 15 ಸದಸ್ಯರ ತಂಡದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಸಾಕಷ್ಟು ಬ್ಯೂಸ್ ಇತ್ತು, ಆದರೆ ರಾಜಸ್ಥಾನ ರಾಯಲ್ಸ್ ನಾಯಕ ಕೂಡ ಸ್ಪರ್ಧೆಯಲ್ಲಿರಲಿಲ್ಲ ಎಂದು ತಿಳಿದು ಬಂದಿದೆ.

"ಜಿಂಬಾಬ್ವೆ ಪ್ರವಾಸದಿಂದ ಆಯ್ಕೆದಾರರು ನಿರಂತರತೆಯನ್ನು ಕಾಯ್ದುಕೊಳ್ಳುವ ಕಾರಣ ಸಂಜು ಸ್ಯಾಮ್ಸನ್ ಯಾವುದೇ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯಗಳನ್ನು ಆಡುತ್ತಾರೆ. ಅಲ್ಲದೆ ಪಂತ್ ಅವರನ್ನು ಕೈಬಿಡುವ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಅವರು ಮಾತ್ರ ನಮ್ಮ ಅಗ್ರಸ್ಥಾನದಲ್ಲಿರುವ ಎಡಗೈ ಆಟಗಾರ ಮತ್ತು ಅವರ ದಿನದ ಪಂದ್ಯದಲ್ಲಿ ನಾವು ಗೆಲ್ಲಬಹುದು," ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡ:

ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್.

ಸ್ಟ್ಯಾಂಡ್‌ಬೈ ಆಟಗಾರರು - ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.

Story first published: Wednesday, September 14, 2022, 10:17 [IST]
Other articles published on Sep 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X