ಯುವರಾಜ್ ಸಿಂಗ್ ದಾಖಲೆ ಸಮಕ್ಕೆ ನಿಂತ ವಿರಾಟ್ ಕೊಹ್ಲಿ

Posted By:

ಮೀರ್ ಪುರ್ (ಬಾಂಗ್ಲಾದೇಶ), ಮಾರ್ಚ್ 02: ಪಿಚ್ ಯಾವುದೇ ಇರಲಿ, ಬೌಲರ್ ಯಾರೇ ಇರಲಿ, ಎಲ್ಲಾ ಬಗೆಯ ಒತ್ತಡಗಳಲ್ಲೂ ಎಲ್ಲಾ ಮಾದರಿ ಕ್ರಿಕೆಟ್ ನಲ್ಲೂ ರನ್ ಹೊಳೆ ಹರಿಸುವ ಕ್ರಿಕೆಟರ್ ಆಗಿ ವಿರಾಟ್ ಕೊಹ್ಲಿ ಸದ್ಯಕ್ಕೆ ಸ್ಟಾರ್ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ.

ಮಂಗಳವಾರ (ಮಾರ್ಚ್ 01) ದಂದು ಷೇರ್ ಎ ಬಾಂಗ್ಲಾ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ಭಾರತ 5 ವಿಕೆಟ್ ಗಳ ಅಂತರದಿಂದ ಗೆದ್ದು ಏಷ್ಯಾಕಪ್ ಟ್ವೆಂಟಿ 20 ಫೈನಲ್ ತಲುಪಲು ವಿರಾಟ್ ಕೊಹ್ಲಿ ಕಾರಣರಾದರು. ಭಾನುವಾರ (ಮಾರ್ಚ್ 06) ದಂದು ಫೈನಲ್ ನಡೆಯಲಿದೆ.

ಏಷ್ಯಾಕಪ್ 2016 : ತಂಡಗಳು | ವೇಳಾಪಟ್ಟಿ | ಫೋಟೋ ಗ್ಯಾಲರಿ

ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಕೊಹ್ಲಿ ಟಿ20 ಮಾದರಿಯಲ್ಲಿ 13ನೇ ಅರ್ಧಶತಕ ದಾಖಲಿಸಿದರು. 36 ಪಂದ್ಯಗಳಲ್ಲಿ 34 ಇನ್ನಿಂಗ್ಸ್ ನಲ್ಲಿ ಎಷ್ಟು ಅರ್ಧಶತಕ ಯಾರು ಬಾರಿಸಿಲ್ಲ. ಕನಿಷ್ಠ 500ಕ್ಕೂ ಅಧಿಕ ರನ್ ಗಳಿಸಿದವರ ಪೈಕಿ ಕೊಹ್ಲಿಯೇ ಮುಂದಿದ್ದಾರೆ.

Asia Cup T20: Virat Kohli equals Yuvraj Singh's record

ಪ್ರಸಕ್ತ ವರ್ಷದಲ್ಲಿ 6 ಇನ್ನಿಂಗ್ಸ್ ಗಳಲ್ಲಿ 4ನೇ ಅರ್ಧಶತಕ ಗಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅಜೇಯ 90ರನ್, ಅಜೇಯ 59ರನ್ ಹಾಗೂ 50 ರನ್ ಗಳಿಸಿದ್ದರಿಂದ ಎಂಎಸ್ ಧೋನಿ ಪಡೆ ಐತಿಹಾಸಿಕ 3-0 ಸರಣಿ ವಶಪಡಿಸಿಕೊಂಡಿತು.

ಏಷ್ಯಾಕಪ್ 2016ರಲ್ಲಿ ಕೊಹ್ಲಿ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 7 ರನ್ ಗಳಿಸಿದರೆ, ಪಾಕಿಸ್ತಾನ ವಿರುದ್ಧ 49 ಹಾಗೂ ಶ್ರೀಲಂಕಾ ವಿರುದ್ಧ ಅಜೇಯ 56ರನ್ ಗಳಿಸಿದ್ದಾರೆ. ಸತತ ಎರಡು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ 27 ವರ್ಷ ವಯಸ್ಸಿನ ಕೊಹ್ಲಿ ಅವರು ಈಗ ಯುವರಾಜ್ ಸಿಂಗ್ ಅವರ ದಾಖಲೆ ಸಮ ಮಾಡಿದ್ದಾರೆ. ಇಬ್ಬರು 7 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಯುವರಾಜ್ ಸಿಂಗ್ 49 ಪಂದ್ಯಗಳಲ್ಲಿ 7 ಪ್ರಶಸ್ತಿ ಗೆದ್ದಿದ್ದರೆ, ಕೊಹ್ಲಿ ಈ ಸಾಧನೆಯನ್ನು 36 ಪಂದ್ಯಗಳಲ್ಲೇ ಮಾಡಿದ್ದಾರೆ. ಹತ್ತು ಹಲವು ದಾಖಲೆಗಳನ್ನು ಮುರಿದಿರುವ ಕೊಹ್ಲಿ ಅವರು ಟಿ20ಯಲ್ಲಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿರುವ ದಾಖಲೆಯನ್ನು ಸ್ಥಾಪಿಸುವ ನಿರೀಕ್ಷೆ ಸುಳ್ಳಾಗುವುದಿಲ್ಲ.

ಟಿ20: ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿರುವ ಭಾರತೀಯರು:
* ವಿರಾಟ್ ಕೊಹ್ಲಿ (36 ಪಂದ್ಯಗಳು), ಯುವರಾಜ್ ಸಿಂಗ್ (49)
* ಆರ್ ಅಶ್ವಿನ್ (37), ರೋಹಿತ್ ಶರ್ಮ (53)
* ಅಮಿತ್ ಮಿಶ್ರಾ (7), ಇರ್ಫಾನ್ ಪಠಾಣ್ (24), ಯೂಸುಫ್ ಪಠಾಣ್ (22), ಸುರೇಶ್ ರೈನಾ (55)

(ಒನ್ಇಂಡಿಯಾ ಸುದ್ದಿ)

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, March 2, 2016, 16:51 [IST]
Other articles published on Mar 2, 2016

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ