ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: ಇಶಾಂತ್ ಶರ್ಮಾರನ್ನೂ ಹಿಂದಿಕ್ಕಿ ಅವಕಾಶ ಬಾಚಿಕೊಂಡ್ರಾ ಮೊಹಮ್ಮದ್ ಸಿರಾಜ್?

At the moment Mohammed Siraj is certain to play WTC Final says Reetinder Sodhi
Ishant Sharma ಹಿಂದಿಕ್ಕಿ ಅವಕಾಶ ಪಡೆದುಕೊಳ್ಳಲಿದ್ದಾರೆ Siraj | Oneindia Kannada

ಜೂನ್ 18ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಹಾಗೂ ಆಗಸ್ಟ್ 4ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಟೀಮ್ ಇಂಡಿಯಾ ಈಗಾಗಲೇ ಸೌತಂಪ್ಟನ್ ತಲುಪಿದೆ.

ಐಪಿಎಲ್ 2022ರ ಹರಾಜಿನಲ್ಲಿ ಆರ್‌ಸಿಬಿ ಉಳಿಸಿಕೊಳ್ಳಬಹುದಾದ ಆಟಗಾರರು

ನ್ಯೂಜಿಲೆಂಡ್ ತಂಡದ ವಿರುದ್ಧ ಜೂನ್ 18-22ರವರೆಗೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ಕೆಲ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪಂಡಿತರು ಹಾಗೂ ಕ್ರೀಡಾಭಿಮಾನಿಗಳು ಸಾಕಷ್ಟು ಚರ್ಚೆಗಳನ್ನು ನಡೆಸುತ್ತಿದ್ದು ಯಾವ ಆಟಗಾರರಿಗೆ ಆಡುವ ಬಳಗದಲ್ಲಿ ಅವಕಾಶ ಸಿಗಲಿದೆ, ಯಾವ ಆಟಗಾರನನ್ನು ಕಣಕ್ಕಿಳಿಸಿದರೆ ಉತ್ತಮ ಎಂಬ ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ.

ಧೋನಿ ಯಶಸ್ವಿ ನಾಯಕತ್ವದ ಹಿಂದೆ ಇದೆ ಆ ಆಟಗಾರನ ನಿರಂತರ ಸಲಹೆ; ಸತ್ಯಾಂಶ ಬಿಚ್ಚಿಟ್ಟ ರುತುರಾಜ್ ಗಾಯಕ್ವಾಡ್

ಈ ಚರ್ಚೆಗೆ ಇದೀಗ ಮಾಜಿ ಆಟಗಾರ ರೀತಿಂದರ್ ಸಿಂಗ್ ಸೋಧಿ ಕೂಡ ದನಿಗೂಡಿಸಿದ್ದು ಮೊಹಮ್ಮದ್ ಸಿರಾಜ್ ಖಚಿತವಾಗಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗಷ್ಟೆ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಮೊಹಮ್ಮದ್ ಸಿರಾಜ್ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯವನ್ನಾಡಲಿದ್ದಾರೆ ಎಂದು ಮಾತನಾಡಿದ ಆಡಿಯೋ ಲೀಕ್ ಆಗಿತ್ತು.

ಈ ಕುರಿತು ಮಾತನಾಡಿರುವ ರಿತೀಂದರ್ 'ಫೈನಲ್ ಪಂದ್ಯದ ಆಡುವ ಬಳಗದಲ್ಲಿ ಮೊಹಮ್ಮದ್ ಸಿರಾಜ್ ಹೆಸರು ಕೇಳಿ ಬಂದಿರುವುದಕ್ಕೆ ಆತನ ಅತ್ಯದ್ಭುತ ಪ್ರದರ್ಶನವೇ ಕಾರಣ. ಆಸ್ಟ್ರೇಲಿಯಾ ವಿರುದ್ಧ ತಾನು ನೀಡಿದ ಅಮೋಘ ಪ್ರದರ್ಶನದಿಂದ ಸಿರಾಜ್ ಎಲ್ಲರ ಗಮನವನ್ನು ಸೆಳೆದಿದ್ದು ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ಇಶಾಂತ್ ಶರ್ಮಾ ಹೆಸರಿಗೂ ಮುನ್ನ ಮೊಹಮ್ಮದ್ ಸಿರಾಜ್ ಹೆಸರು ಕೇಳಿಬಂದಿದೆ. ಆತ ಖಂಡಿತವಾಗಿಯೂ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಅವಕಾಶ ಪಡೆದುಕೊಳ್ಳಲಿದ್ದಾನೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Story first published: Friday, June 4, 2021, 15:47 [IST]
Other articles published on Jun 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X