ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಸ್ಮಿತ್, ವಾರ್ನರ್ ಚೆಂಡು ವಿರೂಪದ ತಪ್ಪಿಗೆ ಕ್ರಿಕೆಟ್ ಮಂಡಳಿಯ ಒತ್ತಡ ಕಾರಣ'

Aussie cricket union urges cut to Smith, Warner bans

ಕ್ಯಾನ್ಬೆರಾ, ಅಕ್ಟೋಬರ್ 29: ಚೆಂಡು ವಿರೂಪ ಪ್ರಕರಣದಡಿಯಲ್ಲಿ ನಿಷೇಧಕ್ಕೀಡಾಗಿರುವ ಆಸ್ಟ್ರೇಲಿಯಾ ಆಟಗಾರರಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಮೇಲಿನ ನಿಷೇಧವನ್ನು ಕಡಿತಗೊಳಸಬೇಕು. ಯಾಕೆಂದರೆ ಅವರ ತಪ್ಪಿಗೆ ಆಡಳಿತ ಮಂಡಳಿಯ ಒತ್ತಡವೂ ಒಂದು ರೀತಿಯಲ್ಲಿ ಕಾರಣವಾಗಿತ್ತು ಎಂದು ಆಸೀಸ್ ಕ್ರಿಕೆಟ್ ಒಕ್ಕೂಟ ಸೋಮವಾರ (ಅ.29) ತಿಳಿಸಿದೆ.

ಐಪಿಎಲ್ ಕ್ರಿಕೆಟ್: ಆರ್‌ಸಿಬಿ ತಂಡ ಸೇರಿಕೊಂಡ ಆಸ್ಟ್ರೇಲಿಯಾದ ಆಲ್‌ರೌಂಡರ್ಐಪಿಎಲ್ ಕ್ರಿಕೆಟ್: ಆರ್‌ಸಿಬಿ ತಂಡ ಸೇರಿಕೊಂಡ ಆಸ್ಟ್ರೇಲಿಯಾದ ಆಲ್‌ರೌಂಡರ್

ಕಳೆದ ಮಾರ್ಚ್ ನಲ್ಲಿ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ನಡೆದಿದ್ದ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾದ ಸ್ಮಿತ್, ವಾರ್ನರ್ ಮತ್ತು ಕ್ಯಾಮೆರಾನ್ ಬ್ಯಾನ್‌ಕ್ರಾಫ್ಟ್ ಸ್ಯಾಂಡ್ ಪೇಪರ್ ಬಳಸಿ ಬಾಲ್ ಟ್ಯಾಂಪರಿಂಗ್ ನಲ್ಲಿ ಪಾಲ್ಗೊಂಡು ಸಿಕ್ಕಿಬಿದ್ದಿದ್ದರು.

ಭಾರತ-ವಿಂಡೀಸ್: 21ನೇ ಏಕದಿನ ಶತಕ, ಹೊಸ ದಾಖಲೆ ಬರೆದ ರೋ'ಹಿಟ್'!ಭಾರತ-ವಿಂಡೀಸ್: 21ನೇ ಏಕದಿನ ಶತಕ, ಹೊಸ ದಾಖಲೆ ಬರೆದ ರೋ'ಹಿಟ್'!

ಹೀಗಾಗಿ ಆಗ ಆಸೀಸ್ ನಾಯಕನಾಗಿದ್ದ ಸ್ಟೀವ್ ಸ್ಮಿತ್ ಮತ್ತು ವಾರ್ನರ್ ಗೆ ಒಂದು ವರ್ಷ ಮತ್ತು ಬ್ಯಾನ್‌ಕ್ರಾಫ್ಟ್‌ಗೆ 9 ತಿಂಗಳ ನಿಷೇಧ ಹೇರಲಾಗಿತ್ತು. ಕ್ರಿಕೆಟ್ ಇತಿಹಾಸದಲ್ಲೇ ಈ ಪ್ರಕರಣವೊಂದು ಕಪ್ಪುಚುಕ್ಕೆಯಾಗಿ ಪರಿಣಮಿಸಿತ್ತೂ ಕೂಡ.

ಗೆಲ್ಲಬೇಕೆಂಬ ಪ್ರಚೋದನೆ ಕಾರಣ

ಗೆಲ್ಲಬೇಕೆಂಬ ಪ್ರಚೋದನೆ ಕಾರಣ

ಈ ಪ್ರಕರಣವನ್ನು ವೈಯಕ್ತಿಕ ವಿಮರ್ಶೆ ಮಾಡಿರುವ ಆಸೀಸ್ ಕ್ರಿಕೆಟ್ ಒಕ್ಕೂಟ ಪ್ರಮುಖ ವ್ಯಕ್ತಿಯೊಬ್ಬರು, ಪಂದ್ಯವನ್ನು ಗೆಲ್ಲಲೇಬೇಕೆಂಬ ಒತ್ತಡವನ್ನು ಆಸೀಸ್ ಆಡಳಿತ ಸಮಿತಿ ಮಾಡುತ್ತದೆ. ಆಟಗಾರರ ತಪ್ಪಿಗೆ ಈ ಪ್ರಚೋದನೆಯೂ ಒಂದು ರೀತಿಯಲ್ಲಿ ಕಾರಣ ಎಂದಿದ್ದಾರೆ.

ಆಟಗಾರರ ಮೇಲೆ ಒತ್ತಡ

ಆಟಗಾರರ ಮೇಲೆ ಒತ್ತಡ

'ಸೌತ್ ಆಫ್ರಿಕಾದಲ್ಲಿನ ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯಲ್ಲಿನ ಸಂಸ್ಕೃತಿ, ನೀತಿ ಕಾರಣ. ಪಂದ್ಯವೊಂದನ್ನು ಹೇಗಾದರೂ ಗೆಲ್ಲಲೇಬೇಕೆಂಬ ಒತ್ತಡವನ್ನು ಆಡಳಿತ ಸಮಿತಿ ಆಟಗಾರರ ಮೇಲೆ ಹೇರುತ್ತದೆ' ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ (ಎಸಿಎ) ಅಧ್ಯಕ್ಷ ಗ್ರೆಗ್ ಡೈಯರ್ ಹೇಳಿದ್ದಾರೆ.

ನಿಷೇಧ ಕಡಿತಗೊಳಿಸಿ

ನಿಷೇಧ ಕಡಿತಗೊಳಿಸಿ

ಗ್ರೆಗ್ ಮಾತನಾಡಿ, 'ಈ ವಿಚಾರವನ್ನು ಪರಿಗಣನೆಗೆ ತೆಗೆದುಕೊಂಡು ಆಟಗಾರರ ಮೇಲಿನ ನಿಷೇಧವನ್ನು ಕಡಿತಗೊಳಿಸಬೇಕು. ಆಟಗಾರರು (ಅಂತಾರಾಷ್ಟ್ರೀಯ ಪಂದ್ಯಕ್ಕಾಗಿ) ಮೈದಾನಕ್ಕಿಳಿಯಲು ಅವಕಾಶ ಮಾಡಿಕೊಡಬೇಕು' ಎಂದಿದ್ದಾರೆ. ಆಸೀಸ್ ತಂಡದ ಮಾಜಿ ತರಬೇತುದಾರರಾದ ಡ್ಯಾರೆನ್ ಲೆಹ್ಮನ್ ಕೂಡ ಆಟಗಾರರ ಮೇಲಿನ ನಿಷೇಧ ಕಡಿತಕ್ಕೆ ಧ್ವನಿ ಸೇರಿಸಿದ್ದಾರೆ.

ಪ್ರತಿಭೆಗ ಮಾರಕ

ಪ್ರತಿಭೆಗ ಮಾರಕ

ಟೆಸ್ಟ್ ಕ್ರಿಕೆಟ್ ನಲ್ಲಿ ವಿಕೆಟ್ ಕೀಪರ್ ಕೂಡ ಆಗಿದ್ದ ಗ್ರೆಗ್ ಮಾತನಾಡಿ, 'ಆಟಗಾರರ ಕ್ರಿಕೆಟ್ ಪ್ರತಿಭೆಗೆ ಮಾರಕವಾಗಬಲ್ಲ ಈ ನಿಷೇಧವನ್ನು ಖಂಡಿತಾ ಮರುಪರಿಶೀಲಿಸಬೇಕು. ಮರುಪರಿಶೀಲಿಸಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮೆರಾನ್ ಬ್ಯಾನ್‌ಕ್ರಾಫ್ಟ್ ಮೇಲಿನ ನಿಷೇಧದ ಅವಧಿಯನ್ನು ಕಿರಿದುಗೊಳಿಸಬೇಕು' ಎಂದು ತಿಳಿಸಿದ್ದಾರೆ. (ಗ್ರೆಗ್ ಡೈಯರ್ ಆಸೀಸ್ ತಂಡದಲ್ಲಿ ಆಡುತ್ತಿದ್ದಾಗಿನ ಫೋಟೋ ಇದು)

Story first published: Monday, October 29, 2018, 18:41 [IST]
Other articles published on Oct 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X