ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ್ವಿತೀಯ ಟೆಸ್ಟ್‌ಗಾಗಿ ಭಾರತ ತಂಡಕ್ಕೆ ಪ್ರಮುಖ 4 ಆಟಗಾರರು ಸೇರ್ಪಡೆ!

Australia vs India: Shubhman Gill, Ravindra Jadeja, KL Rahul, Rishabh Pant set to play

ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿರುವ ಟೀಮ್ ಇಂಡಿಯಾ ದ್ವಿತೀಯ ಪಂದ್ಯಕ್ಕಾಗಿ ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿದೆ. ಇತ್ತಂಡಗಳ ದ್ವಿತೀಯ ಪಂದ್ಯ ಡಿಸೆಂಬರ್ 26ರಂದು ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ. ದ್ವಿತೀಯ ಪಂದ್ಯವಾಗಿ ನಡೆಯುವ ಈ ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾಕ್ಕೆ ತಿರುಗೇಟು ನೀಡುತ್ತ ಭಾರತ ಯೋಚಿಸಿದೆ.

28ರ ಹರೆಯದಲ್ಲಿ ನಿವೃತ್ತಿ ಹೇಳಲು ಅವರಿಬ್ಬರು ಕಾರಣ: ಪಾಕ್ ದಿಗ್ಗಜರ ಬಗ್ಗೆ ಆಮಿರ್ ಕೆಂಡ28ರ ಹರೆಯದಲ್ಲಿ ನಿವೃತ್ತಿ ಹೇಳಲು ಅವರಿಬ್ಬರು ಕಾರಣ: ಪಾಕ್ ದಿಗ್ಗಜರ ಬಗ್ಗೆ ಆಮಿರ್ ಕೆಂಡ

ಆರಂಭಿಕ ಟೆಸ್ಟ್‌ನಲ್ಲಿ ಭಾರತ ತಂಡ ಆತಿಥೇಯರ ವಿರುದ್ಧ 8 ವಿಕೆಟ್‌ ಸುಲಭ ಸೋಲನುಭವಿಸಿತ್ತು. ಅಂದಿನ ಪಂದ್ಯದಲ್ಲಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಅತ್ಯಂತ ಕಳಪೆ ಬ್ಯಾಟಿಂಗ್‌ ಪ್ರದರ್ಶಿಸಿ ಮುಖಭಂಗಕ್ಕೀಡಾಗಿತ್ತು. ಆರಂಭಿಕ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ ಇನ್ನಿಂಗ್ಸ್‌ನಲ್ಲಿ ಭಾರತ ಗಳಿಸಿದ್ದು ಕೇವಲ 36 ರನ್.

ಹುಟ್ಟುಹಬ್ಬದಂದೇ ಯೋ ಮಹೇಶ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಹುಟ್ಟುಹಬ್ಬದಂದೇ ಯೋ ಮಹೇಶ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ

ಮೊದಲ ಪಂದ್ಯವನ್ನು ಹೀನಾಯವಾಗಿ ಸೋತಿರುವುದರಿಂದ ದ್ವಿತೀಯ ಪಂದ್ಯಕ್ಕಾಗಿ ಭಾರತ 4 ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿದೆ.

1. ಕೆಎಲ್ ರಾಹುಲ್

1. ಕೆಎಲ್ ರಾಹುಲ್

ಮೊದಲ ಟೆಸ್ಟ್‌ನಲ್ಲಿ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ಕೆಎಲ್ ರಾಹುಲ್ ಆಡಿರಲಿಲ್ಲ. ಪಂದ್ಯ ಸೋತಾದ ರಾಹುಲ್‌ನನ್ನು ಆಡಿಸದ ಬಗ್ಗೆ ತಂಡದ ವಿರುದ್ಧ ಟೀಕೆಗಳು ಕೇಳಿ ಬಂದಿತ್ತು. ಹೀಗಾಗಿ ದ್ವಿತೀಯ ಟೆಸ್ಟ್‌ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಆಡಲಿದ್ದಾರೆ. ಪೃಥ್ವಿ ಶಾ ಬದಲಿಗೆ ಆರಂಭಿಕ ಸ್ಥಾನದಲ್ಲಿ ರಾಹುಲ್ ಬರಲಿದ್ದಾರೆ.

2. ಶುಬ್‌ಮನ್ ಗಿಲ್

2. ಶುಬ್‌ಮನ್ ಗಿಲ್

ದ್ವಿತೀಯ ಪಂದ್ಯದಲ್ಲಿ ಭಾರತ ಮಾಡಿಕೊಂಡಿರುವ ಇನ್ನೊಂದು ಪ್ರಮುಖ ಬದಲಾವಣೆಯೆಂದರೆ 4ನೇ ಬ್ಯಾಟಿಂಗ್‌ ಕ್ರಮಾಂಕಕ್ಕೆ ಶುಬ್‌ಮನ್ ಗಿಲ್ ಅವರನ್ನು ತಂದಿರುವುದು. ಹಿಂದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ 4ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಆಡಿದ್ದರು. ಆದರೆ ಮುಂದಿನ ಯಾವುದೇ ಪಂದ್ಯದಲ್ಲಿದಲ್ಲಿ ಕೊಹ್ಲಿ ಆಡುತ್ತಿಲ್ಲವಾದ್ದರಿಂದ ದ್ವಿತೀಯ ಪಂದ್ಯದಲ್ಲಿ ಶುಬ್‌ಮನ್ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.

3. ರವೀಂದ್ರ ಜಡೇಜಾ

3. ರವೀಂದ್ರ ಜಡೇಜಾ

ಮೊದಲ ಪಂದ್ಯದಲ್ಲಿ ಆಡಿದ್ದ ಆಲ್ ರೌಂಡರ್ ಹನುಮ ವಿಹಾರಿ ಅಂಥ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ದ್ವಿತೀಯ ಪಂದ್ಯದಲ್ಲಿ ವಿಹಾರಿ ಆಲ್ ರೌಂಡರ್ ರವೀಂದ್ರ ಜಡೇಜಾಗೆ ದಾರಿ ಮಾಡಿಕೊಟ್ಟಿದ್ದಾರೆ. ಗಾಯಕ್ಕೀಡಾಗಿದ್ದ ಜಡೇಜಾ ಈಗ ಚೇತರಿಸಿಕೊಂಡಿದ್ದು, ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಆಡಲಿದ್ದಾರೆ.

4. ರಿಷಭ್ ಪಂತ್

4. ರಿಷಭ್ ಪಂತ್

ಅನುಭವಿ ಬ್ಯಾಟ್ಸ್‌ಮನ್‌, ವಿಕೆಟ್ ಕೀಪರ್ ಅನ್ನೋ ಕಾರಣಕ್ಕೆ ಆರಂಭಿಕ ಟೆಸ್ಟ್‌ನಲ್ಲಿ ವೃದ್ಧಿಮಾನ್ ಸಹಾಗೆ ಸ್ಥಾನ ನೀಡಲಾಗಿತ್ತು. ಆದರೆ ಸಹಾ ಬ್ಯಾಟಿಂಗ್-ಕೀಪಿಂಗ್‌ ಎರಡರಲ್ಲೂ ಗಮನ ಸೆಳೆದಿರಲಿಲ್ಲ. ಆದ್ದರಿಂದ ಸಹಾ ಬದಲಿಗೆ ಯುವ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಬರಲಿದ್ದಾರೆ.

5. ಶಮಿ ಹೊರಕ್ಕೆ

5. ಶಮಿ ಹೊರಕ್ಕೆ

ಭಾರತದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಕೂಡ ಮೊದಲ ಟೆಸ್ಟ್‌ನಲ್ಲಿ ಅಂಥ ಪ್ರದರ್ಶನ ನೀಡಿರಲಿಲ್ಲ. ಜೊತೆಗೆ ಗಾಯಕ್ಕೂ ಈಡಾಗಿದ್ದರು. ಮುಂದಿನ ಪಂದ್ಯದಲ್ಲಿ ಶಮಿ ಜಾಗಕ್ಕೆ ಒಂದೋ ವೇಗಿ ಮೊಹಮ್ಮದ್ ಸಿರಾಜ್ ಅಥವಾ ನವದೀಪ್ ಸೈನಿ ಬರುವ ಸಾಧ್ಯತೆಯಯಿದೆ.

Story first published: Monday, December 21, 2020, 14:17 [IST]
Other articles published on Dec 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X