ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind Vs Aus T20: ಸರಣಿಯಲ್ಲಿ ಈತನ ಆಟಕ್ಕೆ ಆಸ್ಟ್ರೇಲಿಯಾ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಮೆಚ್ಚುಗೆ

Australian coach Andrew McDonald Hails Indian Allrounder Axar Patel

ಆಸ್ಟ್ರೇಲಿಯಾ ವಿರುದ್ಧದ 3-ಪಂದ್ಯಗಳ ಟಿ20 ಸರಣಿಯುದ್ದಕ್ಕೂ ಅಕ್ಷರ್ ಪಟೇಲ್ ಗಮನ ಸೆಳೆದರು. ಎಡಗೈ ಸ್ಪಿನ್ನರ್ ಎಲ್ಲಾ ಮೂರು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಸರಣಿ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು.

Ind Vs SA T20: ಟೀಂ ಇಂಡಿಯಾ ಬೌಲಿಂಗ್ ಸಮಸ್ಯೆಗೆ ಅಂತ್ಯ ಹಾಡುತ್ತಾರಾ ಅರ್ಶ್‌ದೀಪ್ ಸಿಂಗ್Ind Vs SA T20: ಟೀಂ ಇಂಡಿಯಾ ಬೌಲಿಂಗ್ ಸಮಸ್ಯೆಗೆ ಅಂತ್ಯ ಹಾಡುತ್ತಾರಾ ಅರ್ಶ್‌ದೀಪ್ ಸಿಂಗ್

ಮೂರನೇ ಪಂದ್ಯದಲ್ಲಿ 4 ಓವರ್ ಗಳಲ್ಲಿ 33 ರನ್ ನೀಡಿದ ಅಕ್ಷರ್ ಪಟೇಲ್ ಪ್ರಮುಖ 3 ವಿಕೆಟ್‌ಗಳನ್ನು ಪಡೆದು ಮಿಂಚಿದರು. ಮಾತ್ರವಲ್ಲದೆ, ಅಪಾಯಕಾರಿ ಆಸ್ಟ್ರೇಲಿಯನ್ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನು ನೇರ-ಎಸೆತದೊಂದಿಗೆ ಅದ್ಭುತ ರನ್ ಔಟ್ ಮಾಡಿದರು.

ಅಕ್ಷರ್ ಪಟೇಲ್ ಆಸ್ಟ್ರೇಲಿಯಾ ವಿರುದ್ಧ ಸರಣಿಯ ಮೂರು ಪಂದ್ಯಗಳ್ಲಲಿ ಕೇವಲ 63 ರನ್‌ಗಳನ್ನು ನೀಡುವ ಮೂಲಕ ಎಂಟು ವಿಕೆಟ್‌ಗಳೊಂದಿಗೆ ಸರಣಿಯನ್ನು ಪೂರ್ಣಗೊಳಿಸಿದರು. ಪಟೇಲ್ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಸರಣಿಯ ಆಟಗಾರ ಪ್ರಶಸ್ತಿಯನ್ನು ಪಡೆದರು.

ಜಡೇಜಾ ಸ್ಥಾನವನ್ನು ತುಂಬುವ ಆಟಗಾರ

ಜಡೇಜಾ ಸ್ಥಾನವನ್ನು ತುಂಬುವ ಆಟಗಾರ

"ಅಕ್ಷರ್, ನಿರ್ದಿಷ್ಟವಾಗಿ, ಅತ್ಯುತ್ತಮ ಸರಣಿಯನ್ನು ಹೊಂದಿದ್ದರು. ರವೀಂದ್ರ ಜಡೇಜಾ ಸರಣಿಯಿಂದ ಹೊರಗುಳಿದ ನಂತರ, ಇದು ಭಾರತಕ್ಕೆ ಸ್ವಲ್ಪ ಹಿನ್ನಡೆಯಾಗಬಹುದು ಎಂದು ಎಲ್ಲರೂ ಭಾವಿಸಿದ್ದರು, ಆದರೆ ಟೀಂ ಇಂಡಿಯಾ ಅವರಿಗೆ ಪರ್ಯಾವನ್ನು ಕಂಡುಕೊಂಡಿದ್ದಾರೆ," ಎಂದು ಆಸ್ಟ್ರೇಲಿಯಾದ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಅಭಿಪ್ರಾಯಪಟ್ಟಿದ್ದಾರೆ.

ಗಾಯದಿಂದ ರವೀಂದ್ರ ಜಡೇಜಾ ಹೊರಗುಳಿದ ಬಳಿಕ ಏಷ್ಯಾಕಪ್‌ನಲ್ಲಿ ಬದಲಿ ಆಟಗಾರನಾಗಿ ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನ ಪಡೆದರು. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅಕ್ಷರ್ ಉತ್ತಮ ಪ್ರದರ್ಶನ ನೀಡಿದರು.

Ind vs SA 1st T20: ಮೊಹಮ್ಮದ್ ಶಮಿ ಅಲಭ್ಯ? ಉಮ್ರಾನ್ ಮಲಿಕ್‌ಗೆ ಅವಕಾಶ!

ಮೂರು ಪಂದ್ಯಗಳಲ್ಲಿ ಮಿಂಚಿದ ಪಟೇಲ್

ಮೂರು ಪಂದ್ಯಗಳಲ್ಲಿ ಮಿಂಚಿದ ಪಟೇಲ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತವು 208 ರನ್‌ಗಳನ್ನು ರಕ್ಷಿಸಲು ವಿಫಲವಾದಾಗ ಅಕ್ಷರ್ ಪಟೇಲ್ 4 ಓವರ್ ಗಳಲ್ಲಿ 17 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದದ್ದರು. ಎಡಗೈ ಸ್ಪಿನ್ನರ್ ನಾಗ್ಪುರದಲ್ಲಿ ಮಳೆಯಿಂದ ಮೊಟಕುಗೊಳಿಸಿದ ಎರಡನೇ ಟಿ20 ಪಂದ್ಯದಲ್ಲಿ ಎರಡು ಓವರ್ ಗಳಲ್ಲಿ 13 ರನ್ ನೀಡಿ ಪ್ರಮುಖ 2 ವಿಕೆಟ್ ಪಡೆದರು.

ಹೈದರಾಬಾದ್‌ನ ಸರಣಿ ನಿರ್ಣಾಯಕ ಟಿ20 ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮುಂದುವರೆಸಿದ ಅಕ್ಷರ್ 4 ಓವರ್ ಗಳಲ್ಲಿ 33 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು.

ಉತ್ತಮವಾಗಿ ಬ್ಯಾಟಿಂಗ್ ಮಾಡುವ ಅಕ್ಷರ್

ಉತ್ತಮವಾಗಿ ಬ್ಯಾಟಿಂಗ್ ಮಾಡುವ ಅಕ್ಷರ್

ಭಾರತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅಕ್ಷರ್ ಪಟೇಲ್‌ ಉತ್ತಮ ಬ್ಯಾಟಿಂಗ್ ಕೂಡ ಮಾಡಿದ್ದರು. ವೆಸ್ಟ್ ಇಂಡೀಸ್ ವಿರುದ್ಧ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ 40 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿದ್ದ ಅಕ್ಷರ್ ಪಟೇಲ್ ಭಾರತ ತಂಡವನ್ನು ಎರಡು ವಿಕೆಟ್‌ಗಳಿಂದ ಗೆಲ್ಲಿಸಿದ್ದರು.

ಅಕ್ಷರ್ ಪಟೇಲ್ ಫಸ್ಟ್ ಕ್ಲಾಸ್ ಮತ್ತು ಲಿಸ್ಟ್ ಎ ಕ್ರಿಕೆಟ್ ವೃತ್ತಿಜೀವನದಲ್ಲಿ 24 ಅರ್ಧಶತಕಗಳನ್ನು ಗಳಿಸಿದ್ದಾರೆ. ಐಪಿಎಲ್‌ನಲ್ಲೂ ಕೂಡ ಅಕ್ಷರ್ ಪಟೇಲ್ ಉತ್ತಮ ರನ್ ಗಳಿಸಿದ್ದಾರೆ. ಕೆಳ ಮಧ್ಯಮ ಕ್ರಮಾಂಕದಲ್ಲಿ ಭಾರತದ ಬ್ಯಾಟಿಂಗ್‌ಗೆ ಶಕ್ತಿ ತುಂಬುವ ಸಾಮರ್ಥ್ಯ ಅಕ್ಷರ್ ಪಟೇಲ್‌ಗಿದೆ.

ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆ

ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆ

2022ರಲ್ಲಿ 14 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಅಕ್ಷರ್ ಪಟೇಲ್ 7.8 ಎಕಾನಮಿಯಲ್ಲಿ 16 ವಿಕೆಟ್ ಪಡೆದಿದ್ದಾರೆ. ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಅಕ್ಷರ್ ಪಟೇಲ್ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸುವ ಉತ್ಸಾಹದಲ್ಲಿದ್ದಾರೆ. ಸೆಪ್ಟೆಂಬರ್ 28ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಪಂದ್ಯ ತಿರುವನಂತಪುರದಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಅಕ್ಟೋಬರ್ 2 ರಂದು ಗುವಾಹಟಿ ಮತ್ತು ಮೂರನೇ ಪಂದ್ಯ ಅಕ್ಟೋಬರ್ 4 ರಂದು ಇಂದೋರ್ ನಲ್ಲಿ ನಡೆಯಲಿದೆ.

ಮೊಣಕಾಲಿನ ಗಾಯದಿಂದಾಗಿ ಚಿಕಿತ್ಸೆಗೆ ಒಳಗಾಗಿರುವ ಭಾರತದ ಪ್ರಮುಖ ಆಲ್‌ರೌಂಡರ್ ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ಅಕ್ಷರ್ ಪಟೇಲ್ ಉತ್ತಮ ಪ್ರದರ್ಶನ ನೀಡುತ್ತಿರುವ ಬಗ್ಗೆ ಆಸ್ಟ್ರೇಲಿಯಾದ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಪ್ರಭಾವಿತರಾಗಿದ್ದಾರೆ.

Story first published: Monday, September 26, 2022, 17:17 [IST]
Other articles published on Sep 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X