ಬಾಬರ್ ಹಾಗೂ ಕೊಹ್ಲಿ ನಡುವಿನ ಹೋಲಿಕೆ ಸಲ್ಲದು: ಬಾಬರ್ ಅಜಮ್ ವ್ಯಕ್ತಿತ್ವ ಕೊಹ್ಲಿಗೆ ವಿರುದ್ಧವಾಗಿದೆ!

ಕ್ರಿಕೆಟ್‌ ಜಗತ್ತಿನಲ್ಲಿ ಹಾಟ್ ಟಾಪಿಕ್ ಆಗಿ ಉಳಿದಿರುವ ವಿಷಯ ಏನಂದ್ರೆ ಅದು ವಿರಾಟ್ ಕೊಹ್ಲಿ ವರ್ಸಸ್ ಬಾಬರ್ ಅಜಮ್. ಈಗಾಗಲೇ ಲೆಜೆಂಡ್ ಆಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಒಂದೆಡೆಯಾದ್ರೆ, ಪಾಕಿಸ್ತಾನದ ಸ್ಟಾರ್‌ ಐಕಾನ್ ಆಗಿ ತಂಡದ ನಾಯಕನಾಗಿರುವ ಬಾಬರ್ ಅಜಮ್ ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡುವುದು ಸಾಮಾನ್ಯವಾಗಿದೆ.

ಆದರೆ ಅನುಭವ ಹಾಗೂ ರೆಕಾರ್ಡ್ಸ್‌ಗಳ ನಡುವ ಭಾರತದ ನಾಯಕ ಈಗಾಗಲೇ ಕ್ರಿಕೆಟ್‌ನ ಲೆಜೆಂಡ್‌ಗಳಲ್ಲಿ ಒಬ್ಬರಾಗಿದ್ದಾರೆ. ಹೋಲಿಕೆ ಮಾಡಲು ಹೋದರೆ ಬಾಬರ್ ಅತ್ಯಂತ ಕಿರಿಯ ಮತ್ತು ಕಡಿಮೆ ಅನುಭವ ಹೊಂದಿರುವ ಪಾಕಿಸ್ತಾನ ಕ್ರಿಕೆಟಿಗರಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಂಡ ನ್ಯೂಜಿಲೆಂಡ್: ಸೆಮಿಫೈನಲ್‌ನ 5 ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಂಡ ನ್ಯೂಜಿಲೆಂಡ್: ಸೆಮಿಫೈನಲ್‌ನ 5 ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ

ಇನ್ನು ಇಬ್ಬರ ವೃತ್ತಿಜೀವನವು ಅಸಾಧಾರಣ ಪ್ರದರ್ಶನದಿಂದ ಕೂಡಿದೆ. ಕುತೂಹಲಕಾರಿ ವಿಷಯ ಏನಂದ್ರೆ ಇಬ್ಬರೂ ಒಂದೇ ರೀತಿಯ ಆಟದ ಶೈಲಿಯನ್ನು ಹೊಂದಿದ್ದಾರೆ. ಆದ್ದರಿಂದ,

ಇತ್ತೀಚಿನ ಸಂವಾದದಲ್ಲಿ, 2021 ರ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನದ ಬ್ಯಾಟಿಂಗ್ ಸಲಹೆಗಾರ ಮ್ಯಾಥ್ಯೂ ಹೇಡನ್ ಅವರು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಓಪನರ್ ಹೇಡನ್ ಅವರು ಬಾಬರ್ ಅಜಮ್ ಕೊಹ್ಲಿಗೆ ವಿರುದ್ಧವಾಗಿದ್ದಾರೆಂದು ಭಾವಿಸುತ್ತಾರೆ. ಕೊಹ್ಲಿ ಮೈದಾನದಲ್ಲಿ ತನ್ನನ್ನು ತಾನು ಎಕ್ಸ್‌ಪ್ರೆಸ್‌ ಮಾಡಲು ಅವಕಾಶ ಮಾಡಿಕೊಡುತ್ತಾನೆ ಮತ್ತು ಅಜಮ್ 'ಅತಿಯಾಗಿ ಆಡಂಬರವಿಲ್ಲ' ಎಂಬ ಅಂಶವನ್ನು ಹೇಡನ್ ಹೇಳಿದ್ದಾರೆ.

"ಬಾಬರ್ ಮತ್ತು ಅವರ ವ್ಯಕ್ತಿತ್ವವನ್ನು ನೀವು ನೋಡುವುದಾದ್ರೆ, ಆತ ತುಂಬಾ ಸ್ಥಿರವಾಗಿರುತ್ತಾನೆ. ಅವನದ್ದು ಅತಿಯಾಗಿ ಆಡಂಬರ ಹಾಗೂ ಅಗ್ರೆಸ್ಸಿವ್ ಆಗಿಲ್ಲ. ವಾಸ್ತವವಾಗಿ, ಅವರು ವಿರಾಟ್ ಕೊಹ್ಲಿಯಂತಹ ವ್ಯಕ್ತಿಗೆ ವಿರುದ್ಧವಾದ ವ್ಯಕ್ತಿತ್ವ ಎಂದು ಹೇಳಲು ನಾನು ಬಯಸುತ್ತೇನೆ '' ಎಂದು ಹೇಡಲ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಮೈದಾನದಲ್ಲಿ ತುಂಬಾ ಅಗ್ರೆಸ್ಸಿವ್ ಪ್ಲೇಯರ್ ಆಗಿದ್ದು, ತುಂಬಾ ಅನಿಮೇಟೆಡ್, ತುಂಬಾ ಭಾವೋದ್ರಿತರಾಗಿರುತ್ತಾರೆ ಎಂದು ಹೇಡನ್ ಮಾಧ್ಯಮವನ್ನು ಉದ್ದೇಶಿಸಿ ಹೇಳಿದರು.

ಬಾಬರ್ ವ್ಯಕ್ತಿತ್ವವು ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಿದೆ

ಬಾಬರ್ ಅಜಮ್ ಬ್ಯಾಟಿಂಗ್ ಕುರಿತು ಮಾತನಾಡಿದ ಹೇಡನ್, ಆತ ತುಂಬಾ ಶಾಂತ ರೀತಿಯ ಗುಣಲಕ್ಷಣಗಳನ್ನು ಹೊಂದಿದ್ದಾರೆ. ಪಾಕಿಸ್ತಾನದ ನಾಯಕ ಅದ್ಭುತ ಟೆಂಪರ್‌ಮೆಂಟ್ ಹೊಂದದ್ದು, ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಿದೆ ಎಂದಿದ್ದಾರೆ.

''ಅವರು ಉತ್ತಮ ನಿಯಂತ್ರಣ ಮತ್ತು ಅದ್ಭುತ ಮನೋಧರ್ಮವನ್ನು ಹೊಂದಿದ್ದಾರೆ. ಆತನ ಪ್ರತಿಭೆಯ ಬಗ್ಗೆ ಸುಲಭವಾಗಿ ವರ್ಣಿಸಲು ಸಾಧ್ಯವಿಲ್ಲ. ಚೆಂಡಿಗೆ ಸ್ಥಿರವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗುವ ಅವನ ಸಾಮರ್ಥ್ಯವು ನಾನು ನೋಡಿದಕ್ಕಿಂತ ವಿಭಿನ್ನವಾಗಿದೆ. ಇದು ಒಬ್ಬ ಉತ್ತಮ ಆಟಗಾರನ ಗುರುತಾಗಿದೆ ಎಂದು ಮಾಜಿ ಎಡಗೈ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.

ಏತನ್ಮಧ್ಯೆ, 2021 ರ ಟಿ 20 ವಿಶ್ವಕಪ್ನಲ್ಲಿ ಕೊಹ್ಲಿ ಮತ್ತು ಅಜಮ್‌ ವ್ಯಕ್ತಿತ್ವ ಮತ್ತು ಬ್ಯಾಟಿಂಗ್ ಸಂಪೂರ್ಣವಾಗಿ ವಿಭಿನ್ನವಾಗಿದೆ. ಭಾರತ ಲೀಗ್ ಹಂತದಿಂದ ಹೊರಬಿದ್ದಿದ್ದರೆ, ಪಾಕಿಸ್ತಾನ ಐದು ಗೆಲುವುಗಳೊಂದಿಗೆ ಸೆಮಿಫೈನಲ್‌ಗೆ ಪ್ರವೇಶಿಸಿತು.

ಇಂದು ಪಾಕಿಸ್ತಾನ - ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯ

ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಉಭಯ ತಂಡಗಳು ಮೂರು ವಿಭಾಗದಲ್ಲಿ ಬಲಿಷ್ಠವಾಗಿದ್ದು, ಅಮೋಘ ಫಾರ್ಮ್‌ನಲ್ಲಿ ಕಣಕ್ಕಿಳಿಯಲಿವೆ.

ಗ್ರೂಪ್ 2ರಲ್ಲಿ ಒಂದೂ ಪಂದ್ಯ ಸೋಲದ ಪಾಕಿಸ್ತಾನ 10 ಪಾಯಿಂಟ್ಸ್‌ಗಳೊಂದಿಗೆ ಸೆಮಿಫೈನಲ್ ಪ್ರವೇಶಿಸಿದ ಏಕೈಕ ತಂಡವಾಗಿದೆ. ಅತ್ತ ಆಸ್ಟ್ರೇಲಿಯಾ ಗ್ರೂಪ್ 1ರಲ್ಲಿ ಒಂದು ಪಂದ್ಯ ಸೋಲನ್ನ ಕಂಡಿದ್ದು, ಎಂಟು ಪಾಯಿಂಟ್‌ಗಳೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಪಂದ್ಯವು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ನಡೆಯಲಿದ್ದು, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಪ್ರಸಾರವಾಗಲಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, November 11, 2021, 14:29 [IST]
Other articles published on Nov 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X