ವಿರಾಟ್ ಕೊಹ್ಲಿ, ಹಾಶಿಮ್ ಆಮ್ಲ ದಾಖಲೆ ಸರಿಗಟ್ಟಿದ ಬಾಬರ್ ಅಝಾಮ್

ಸೆಂಚುರಿಯನ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಝಾಮ್ ಅವರ ರನ್ ಪಟ್ಟಿ ಬೆಳೆಯತೊಡಗಿದೆ. ಸೆಂಚುರಿಯನ್ ಸ್ಟೇಡಿಯಂನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವಿನ ಮೊದಲನೇ ಏಕದಿನ ಪಂದ್ಯದಲ್ಲಿ ಅಝಾಮ್ 104 ಎಸೆತಗಳಲ್ಲಿ 103 ರನ್ ಸೇರಿಸಿದ್ದಾರೆ.

ಐಪಿಎಲ್: ಟ್ವಿಟರ್ ವಿರುದ್ಧ ಆರ್‌ಸಿಬಿ ಅಸಮಾಧಾನ, ಏನಿದು ವಿವಾದ!?

ಇದೇ ಪಂದ್ಯದಲ್ಲಿ ಬಾಬರ್ ಅಝಾಮ್ ತನ್ನ ಏಕದಿನ ಕ್ರಿಕೆಟ್ ಬದುಕಿನ 13ನೇ ಶತಕ ಕೂಡ ಪೂರೈಸಿದ್ದಾರೆ. ಅಝಾಮ್ ಶತಕದ ಕೊಡುಗೆಯೊಂದಿಗೆ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ನೀಡಿದ್ದ 274 ರನ್ ಗುರಿ ತಲುಪಿ 3 ವಿಕೆಟ್‌ ಗೆಲುವನ್ನಾಚರಿಸಿತ್ತಲ್ಲದೆ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ.

ಶತಕದ ಸಾಧನೆಯೊಂದಿಗೆ ಬಾಬರ್, ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ ಹಾಶಿಮ್ ಆಮ್ಲಾ ಹೆಸರಿನಲ್ಲಿದ್ದ ಏಕದಿನ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವೇಗ 13 ಶತಕ ದಾಖಲೆಗಾಗಿ ಬಾಬರ್ ಅವರು ಕೊಹ್ಲಿ ಮತ್ತು ಆಮ್ಲಾ ಅವರನ್ನು ಮೀರಿಸಿದ್ದಾರೆ.

ಈ ಬಾರಿಯ ಎಲ್ಲಾ 8 ಫ್ರಾಂಚೈಸಿಗಳ ವಿನಾಶಕಾರಿ ಆರಂಭಿಕ ಬ್ಯಾಟ್ಸ್‌ಮನ್‌ಗಳಿವರು!

ಸೆಂಚುರಿಯನ್ ಪಂದ್ಯದೊಂದಿಗೆ 78ನೇ ಏಕದಿನ ಪಂದ್ಯ ಆಡಿದ್ದ ಬಾಬರ್, 76 ಇನ್ನಿಂಗ್ಸ್‌ಗಳಲ್ಲಿ 13 ಶತಕ ಬಾರಿಸಿದ್ದಾರೆ. ಹಾಶಿಮ್ ಆಮ್ಲಾ ಅವರು ಏಕದಿನ 13 ಶತಕ ಬಾರಿಸಲು 83 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದರು. ಇನ್ನು ಕೊಹ್ಲಿ 86 ಇನ್ನಿಂಗ್ಸ್‌ಗಳಲ್ಲಿ 13 ಶತಕ ಬಾರಿಸಿದ್ದರು. ಬಾಬರ್ ಏಕದಿನದಲ್ಲಿ 3683 ರನ್ ದಾಖಲೆ ಹೊಂದಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, April 3, 2021, 21:26 [IST]
Other articles published on Apr 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X