ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ವೈರಸ್‌: 2020ರ ಫುಟ್ಬಾಲ್‌ನ ಪ್ರತಿಷ್ಠಿತ ಬ್ಯಾಲನ್ ಡಿ'ಓರ್ ಪ್ರಶಸ್ತಿ ರದ್ದು

Ballon DOr will not be awarded for 2020

ಕರೊನಾ ವೈರಸ್ ಹಾವಳಿಯಿಂದ ಫುಟ್‌ಬಾಲ್ ಜಗತ್ತು ಭಾರೀ ಹಿನ್ನೆಡೆಗೆ ಒಳಗಾಗಿದೆ. ಹಿನ್ನೆಲೆಯಲ್ಲಿ ಈ ವರ್ಷದ ಪ್ರತಿಷ್ಠಿತ ಬ್ಯಾಲನ್ ಡಿಓರ್ (ಚಿನ್ನದ ಚೆಂಡು) ಪ್ರಶಸ್ತಿ ಸಮಾರಂಭವನ್ನು ರದ್ದುಗೊಳಿಸಿರುವ ನಿರ್ಧಾರವನ್ನು ಬ್ಯಾಲನ್ ಡಿಓರ್ ಸಂಘಟಕರು ಸೋಮವಾರ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಫ್ರಾನ್ಸ್ ಫುಟ್ಬಾಲ್ ನಿಯತಕಾಲಿಕೆ ನೀಡುತ್ತಿರುವ ಈ ಪ್ರಶಸ್ತಿಯನ್ನು 1956ರಿಂದ ವಿಶ್ವದ ಅತ್ಯುತ್ತಮ ಫುಟ್ಬಾಲ್ ಆಟಗಾರನಿಗೆ ನೀಡಿಕೊಂಡು ಬರಲಾಗುತ್ತಿತ್ತು. ಈ ಪ್ರಶಸ್ತಿಯನ್ನು ಮೊದಲಬಾರಿಗೆ ಸ್ಟಾನ್ಲಿ ಮ್ಯಾಥ್ಯೂಸ್ ಪಡೆದುಕೊಂಡಿದ್ದರು. ಕಳೆದ ವರ್ಷದ ಬ್ಯಾಲನ್ ಡಿಓರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಲಿಯೋನೆಲ್ ಮೆಸ್ಸಿ ದಾಖಲೆಯ 6ನೇ ಬಾರಿ ಗೆದ್ದ ಸಾಧನೆ ಮಾಡಿದ್ದರು. ಪೋರ್ಚುಗಲ್ ಸ್ಟಾರ್ ಕ್ರಿಶ್ಚಿಯಾನೊ ರೊನಾಲ್ಡೊ 5 ಬಾರಿ ಈ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.

'ಆತ ಬಂದು ಸಿಕ್ಸ್ ಚಚ್ಚುತ್ತಾನೆ': ಪ್ರಭಾವಿ ಭಾರತೀಯನ ಶ್ಲಾಘಿಸಿದ ಗ್ರೇಮ್ ಸ್ವಾನ್'ಆತ ಬಂದು ಸಿಕ್ಸ್ ಚಚ್ಚುತ್ತಾನೆ': ಪ್ರಭಾವಿ ಭಾರತೀಯನ ಶ್ಲಾಘಿಸಿದ ಗ್ರೇಮ್ ಸ್ವಾನ್

ಆದರೆ ಇದೇ ಮೊಟ್ಟಮೊದಲ ಬಾರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ರದ್ದುಗೊಳಿಸಲಾಗಿದೆ. ವಿಶ್ವದಲ್ಲಿರುವ ಸದ್ಯದ ಕಠಿಣ ಪ್ರಶಸ್ತಿಯನ್ನು ದೃಷ್ಠಿಯಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ ಎಂದು ಫ್ರಾನ್ಸ್ ಫುಟ್ಬಾಲ್ ನಿಯತಕಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

ಕೊರೊನಾ ವೈಸರ್‌ ಪರಿಣಾಮದಿಂದಾಗಿ ಕಳೆದ ಮಾರ್ಚ್‌ನಲ್ಲಿ ವಿಶ್ವದ ಎಲ್ಲ ಪ್ರಮುಖ ಫುಟ್‌ಬಾಲ್ ಲೀಗ್‌ಗಳೂ ಸ್ಥಗಿತಗೊಂಡಿದ್ದವು. ಬಳಿಕ ಮೇನಲ್ಲಿ ಒಂದೊಂದಾಗಿ ಲೀಗ್‌ಗಳು ಆರಂಭಗೊಂಡಿದ್ದವು. ಫ್ರೆಂಚ್ ಲೀಗ್1 ಸಹಿತ ಕೆಲ ಫುಟ್‌ಬಾಲ್ ಟೂರ್ನಿಗಳು ಅಕಾಲಿಕವಾಗಿ ಅಂತ್ಯಗೊಂಡಿತ್ತು.

ಇಂಗ್ಲೆಂಡ್‌ಗೆ ಆಸ್ಟ್ರೇಲಿಯಾ ಪ್ರವಾಸ ಸರಣಿ ಸೆಪ್ಟೆಂಬರ್‌ 4ರಿಂದ ಆರಂಭಇಂಗ್ಲೆಂಡ್‌ಗೆ ಆಸ್ಟ್ರೇಲಿಯಾ ಪ್ರವಾಸ ಸರಣಿ ಸೆಪ್ಟೆಂಬರ್‌ 4ರಿಂದ ಆರಂಭ

ಈ ಕಾರಣದಿಂದಾಗಿ ಈ ಬಾರಿ ವಿಶ್ವದ ಅತ್ಯುತ್ತಮ ಆಟಗಾರನನ್ನು ಗುರುತಿಸುವುದು ನ್ಯಾಯೋಚಿತವಾಗಿರಲು ಸಾಧ್ಯವಿಲ್ಲ. ಅಲ್ಲದೆ ಪ್ರೇಕ್ಷಕರಿಲ್ಲದೆ ಈಗ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡುತ್ತಿರುವ ಆಟಗಾರರ ನಿರ್ವಹಣೆಯನ್ನು ನಿರ್ಧರಿಸುವುದು ಸರಿಯಲ್ಲ ಎಂದು ಫ್ರಾನ್ಸ್ ಫುಟ್‌ಬಾಲ್ ತಿಳಿಸಿದೆ.

2018ರಲ್ಲಿ ಆರಂಭಿಸಲಾಗಿದ್ದ ಮಹಿಳೆಯರ ಬ್ಯಾಲನ್ ಡಿಓರ್ ಪ್ರಶಸ್ತಿಯನ್ನೂ ಈ ಬಾರಿ ನೀಡಲಾಗುತ್ತಿಲ್ಲ. ಜೊತೆಗೆ 21 ವರ್ಷದೊಳಗಿನ ಅತ್ಯುತ್ತಮ ಆಟಗಾರನಿಗೆ ನೀಡುವ ಕೋಪಾ ಟ್ರೋಫಿ, ಅತ್ಯುತ್ತಮ ಗೋಲ್ ಕೀಪರ್‌ಗೆ ನೀಡುವ ಲೆವ್ ಯಾಶಿನ್ ಪ್ರಶಸ್ತಿಯನ್ನು ಕೂಡ ಈ ವರ್ಷ ರದ್ದುಪಡಿಸಲಾಗಿದೆ.

Story first published: Tuesday, July 21, 2020, 16:06 [IST]
Other articles published on Jul 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X