ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್

ಧಾಕಾ: ಮುಂಬರಲಿರುವ ಟಿ20 ವಿಶ್ವಕಪ್‌ಗಾಗಿ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ತಂಡ ಪ್ರಕಟಿಸಿದೆ. ಅಕ್ಟೋಬರ್ 17ರಿಂದ ನವೆಂಬರ್‌ 14ರ ವರೆಗೆ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ಬಾಂಗ್ಲಾದೇಶ 15 ಜನರ ತಂಡವನ್ನು ಗುರುವಾರ (ಸೆಪ್ಟೆಂಬರ್‌ 9) ಪ್ರಕಟಿಸಿದೆ. ಮಹಮ್ಮದ್ ಉಲ್ಲಾ ತಂಡದ ನಾಯಕರಾಗಿ ಹೆಸರಿಸಲ್ಪಟ್ಟಿದ್ದಾರೆ. ಅಕ್ಟೋಬರ್‌ 18ರಂದು ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್‌ ತಂಡಗಳು ಟೂರ್ನಿಯ ಆರಂಭಿಕ ಪಂದ್ಯ ಆಡಲಿವೆ.

ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಭಾರತೀಯ ತಂಡದಲ್ಲಿ ಎಂಎಸ್ ಧೋನಿ!ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಭಾರತೀಯ ತಂಡದಲ್ಲಿ ಎಂಎಸ್ ಧೋನಿ!

ಇತ್ತೀಚೆಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿ ಗೆದ್ದ ಬಳಿಕ ಬಾಂಗ್ಲಾದೇಶ ಕ್ರಿಕೆಟ್ ತಂಡದ ಆತ್ಮ ವಿಶ್ವಾಸ ಹೆಚ್ಚಿದೆ. ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಬಾಂಗ್ಲಾ ಈಗಾಗಲೇ 3-1ರಿಂದ ಸರಣಿ ವಶಪಡಿಸಿಕೊಂಡು ಆಗಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಬಾಂಗ್ಲಾ 4-1ರ ಜಯ ಗಳಿಸಿ ಇತಿಹಾಸ ನಿರ್ಮಿಸಿತ್ತು.

ಪ್ರಮುಖ ಅನುಭವಿ ತಮೀಮ್ ಇಕ್ಬಾಲ್ ಇಲ್ಲ

ಪ್ರಮುಖ ಅನುಭವಿ ತಮೀಮ್ ಇಕ್ಬಾಲ್ ಇಲ್ಲ

ಮಹಮದ್ ಉಲ್ಲಾ ತಂಡದಲ್ಲಿ ಅನುಭವಿ ಮತ್ತು ಹೊಸ ಆಟಗಾರರು ಸೇರಿ ಮಿಶ್ರ ಆಟಗಾರರಿದ್ದಾರೆ. ಆದರೆ ತಂಡ ಬಲಿಷ್ಠವಾಗಿದೆ. ಕ್ಯಾಪ್ಟನ್ ಕೂಡ ಪ್ರತಿಭಾವಂತ ಆಟಗಾರ ಜೊತೆಗೆ ಸೌಮ್ಯ ಸರ್ಕಾರ್, ಶಕೀಬ್ ಅಲ್ ಹಸನ್, ಮುಸ್ತಾಫಿಝುರ್ ರಹ್ಮಾನ್ ಮೊದಲಾದವರು ತಂಡಕ್ಕೆ ಬಲ ತುಂಬಲಿದ್ದಾರೆ. 2016ರ ಟಿ20 ವಿಶ್ವಕಪ್‌ನಲ್ಲಿ ರಹ್ಮಾನ್ 16.6ರ ಸರಾಸರಿಯಂತೆ 9 ವಿಕೆಟ್‌ ಮುರಿದಿದ್ದರು. ಅಷ್ಟೇ ಅಲ್ಲ, 2019ರ ಏಕದಿನ ವಿಶ್ವಕಪ್‌ನಲ್ಲೂ ರಹ್ಮಾನ್ ಟೂರ್ನಿಯ ಮೂರನೇ ಅತ್ಯಧಿಕ ವಿಕೆಟ್ ಸರದಾರನಾಗಿ ಮಿನುಗಿದ್ದರು. ತಂಡದ ಅನುಭವಿ ಓಪನರ್ ತಮೀಮ್ ಇಕ್ಬಾಲ್ ತಂಡದಲ್ಲಿ ಕಾಣಿಸಿಕೊಳ್ಳದಿರುವುದು ಬಾಂಗ್ಲಾ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಯುಗವೊಂದು ಮಿನುಗಲು ದಾರಿ ಮಾಡಿ ಕೊಟ್ಟಿದೆ. 2016ರ ಆವೃತ್ತಿಯಲ್ಲಿ ಇಕ್ಬಾಲ್ 73.75ರ ಸರಾಸರಿಯಲ್ಲಿ 295 ರನ್‌ ಗಳಿಸಿ ಟಾಪ್ ಸ್ಕೋರರ್ ಆಗಿ ಗುರುತಿಸಿಕೊಂಡಿದ್ದರು.

ಟಿ20 ವಿಶ್ವಕಪ್‌ನಲ್ಲಿ ವಿವಿಧ ಗ್ರೂಪ್‌ಗಳ ಮಾಹಿತಿ

ಟಿ20 ವಿಶ್ವಕಪ್‌ನಲ್ಲಿ ವಿವಿಧ ಗ್ರೂಪ್‌ಗಳ ಮಾಹಿತಿ

ಟಿ20 ವಿಶ್ವಕಪ್‌ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್‌ ಮತ್ತು ಓಮನ್‌ನಲ್ಲಿ ಅಕ್ಟೋಬರ್‌ 17ರಿಂದ ನವೆಂಬರ್‌ 14ರ ವರೆಗೆ ನಡೆಯಲಿದೆ. ಬಾಂಗ್ಲಾದೇಶ ಕ್ರಿಕೆಟ್ ತಂಡ ಗ್ರೂಪ್ 'ಬಿ'ಯಲ್ಲಿದೆ. ಈ ಗ್ರೂಪ್‌ನಲ್ಲಿ ಸ್ಕಾಟ್ಲೆಂಡ್, ಪಪುವಾ ನ್ಯೂ ಗಿನಿಯಾ ಮತ್ತು ಓಮನ್ ದೇಶಗಳಿವೆ. ಗ್ರೂಪ್‌ 'ಎ'ಯಲ್ಲಿ ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್‌ ಮತ್ತು ನಮೀಬಿಯಾ ದೇಶಗಳಿವೆ. ಗ್ರೂಪ್‌-1ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್, ಗ್ರೂಪ್ 'ಎ'ಯ ವಿನ್ನರ್, ಗ್ರೂಪ್‌ 'ಬಿ'ಯ ರನ್ನರ್ ತಂಡಗಳು ಸ್ಪರ್ಧಿಸಲಿವೆ. ಗ್ರೂಪ್‌-2ರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಗ್ರೂಪ್‌ 'ಎ'ಯ ರನ್ನರ್ ಮತ್ತು ಗ್ರೂಪ್‌ 'ಬಿ'ಯ ವಿನ್ನರ್ ತಂಡಗಳು ಸೆಣಸಾಡಲಿವೆ.

T 20 ವಿಶ್ವಕಪ್ ಆಡಲು ಹೊರಟ ತಂಡಕ್ಕೆ ಧೋನಿ ಮಾರ್ಗದರ್ಶನ | Oneindia Kannada
ಟಿ20 ವಿಶ್ವಕಪ್‌ಗೆ ಬಾಂಗ್ಲಾದೇಶ 15 ಜನರ ತಂಡ

ಟಿ20 ವಿಶ್ವಕಪ್‌ಗೆ ಬಾಂಗ್ಲಾದೇಶ 15 ಜನರ ತಂಡ

ಬಾಂಗ್ಲಾ ತಂಡದಲ್ಲಿ ನೈಮ್ ಶೈಕ್ ಮತ್ತು ಲಿಟನ್ ದಾಸ್ ಆರಂಭಿಕರಾಗಿ ಆಡುವ ನಿರೀಕ್ಷೆಯಿದೆ. 22ರ ಹರೆಯದ ನೈಮ್, ಬಾಂಗ್ಲಾದೇಶದ ಕ್ರಿಕೆಟ್‌ನ ಉದಯೋನ್ಮುಖ ಆಟಗಾರರಲ್ಲಿ ಮಿನುಗುತ್ತಿದ್ದಾರೆ. 21ರ ಹರೆಯದ ಹರೆಯದ ಆಲ್ ರೌಂಡರ್ ಶಮೀಮ್ ಹೊಸೈನ್, ಅಫೀಫ್ ಹೊಸೈನ್ ಮತ್ತು 20ರ ಹರೆಯದ ವೇಗಿ ಶೋರಿಫುಲ್ ಇಸ್ಲಾಮ್ ಎಲ್ಲರೂ ಪ್ರಕಟಿತ ವಿಶ್ವಕಪ್‌ ತಂಡದಲ್ಲಿ ಕಾಣಸಿಕೊಂಡಿದ್ದಾರೆ.

ಟಿ20 ವಿಶ್ವಕಪ್‌ಗೆ ಬಾಂಗ್ಲಾ ತಂಡ: ಮಹ್ಮದ್ ಉಲ್ಲಾ (ಕ್ಯಾಪ್ಟನ್), ನೈಮ್ ಶೇಖ್, ಸೌಮ್ಯ ಸರ್ಕಾರ್, ಲಿಟನ್ ಕುಮಾರ್ ದಾಸ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್, ನೂರುಲ್ ಹಸನ್ ಸೋಹನ್, ಶಾಕ್ ಮಹಿದಿ ಹಸನ್, ನಸುಮ್ ಅಹ್ಮದ್, ಮುಸ್ತಫಿಜುರ್ ರಹಮಾನ್, ಶೋರಿಫುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಶೈಫ್ ಉದ್ದೀನ್, ಶಾಮ್ ಉದ್ದಿಂ ಹೊಸೇನ್

ಮೀಸಲು ಆಟಗಾರರು: ರುಬೆಲ್ ಹುಸೇನ್, ಅಮೀನುಲ್ ಇಸ್ಲಾಂ ಬಿಪ್ಲಬ್.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 9, 2021, 13:30 [IST]
Other articles published on Sep 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X