ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಢಾಕಾ ಟೆಸ್ಟ್: ಆಸೀಸ್ ವಿರುದ್ಧ ಬಾಂಗ್ಲಾಕ್ಕೆ ಐತಿಹಾಸಿಕ ಜಯ

ಟೆಸ್ಟ್ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ಬಾಂಗ್ಲಾದೇಶ. ಢಾಕಾದಲ್ಲಿ ಆಗಸ್ಟ್ 30ರಂದು ಮುಕ್ತಾಯವಾದ ಪಂದ್ಯದಲ್ಲಿ 20 ರನ್ ಗೆಲುವು.

ಢಾಕಾ, ಆಗಸ್ಟ್ 30: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡ, ಆಸ್ಟ್ರೇಲಿಯಾ ತಂಡವನ್ನು ಟೆಸ್ಟ್ ಪಂದ್ಯವೊಂದರಲ್ಲಿ ಮಣಿಸಿದ ಸಾಧನೆ ಮಾಡಿದೆ.

ಢಾಕಾದಲ್ಲಿರುವ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಬುಧವಾರ ಮುಕ್ತಾಯವಾದ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ 20 ರನ್ ಗಳ ಜಯ ಗಳಿಸಿತು. ಆಗಸ್ಟ್ 27ರಂದು ಪಂದ್ಯ ಆರಂಭವಾಗಿತ್ತು. ಮೊದಲು ಬ್ಯಾಟ್ ಮಾಡಿದ್ದ ಬಾಂಗ್ಲಾದೇಶ ತನ್ನ ಮೊದಲ ಇನಿಂಗ್ಸ್ ನಲ್ಲಿ 260 ರನ್ ಗಳಿಸಿತ್ತು.

ಇದೇನು ಸೆಹ್ವಾಗ್ ಅವರೇ, ಧೋನಿ ಬಗ್ಗೆ ಹೀಗೆ ಹೇಳಿಬಿಟ್ರಿ ?ಇದೇನು ಸೆಹ್ವಾಗ್ ಅವರೇ, ಧೋನಿ ಬಗ್ಗೆ ಹೀಗೆ ಹೇಳಿಬಿಟ್ರಿ ?

ಇದಕ್ಕೆ ಉತ್ತರವಾಗಿ, ಆಸ್ಟ್ರೇಲಿಯಾ ತನ್ನ ಮೊದಲ ಇನಿಂಗ್ಸ್ ನಲ್ಲಿ ಕೇವಲ 221 ರನ್ ಮಾತ್ರ ಗಳಿಸಿತ್ತು. ಆನಂತರ, ತನ್ನ ದ್ವಿತೀಯ ಇನಿಂಗ್ಸ್ ನಡೆಸಿದ ಬಾಂಗ್ಲಾ, 217 ರನ್ ಗಳಿಗೆ ಗಂಟು ಮೂಟೆ ಕಟ್ಟಿ ಆಸೀಸ್ ಪಡೆಗೆ ಪಂದ್ಯ ಗೆಲ್ಲಲು 265 ರನ್ ಗಳ ಗುರಿ ನೀಡಿತು.

Bangladesh historic win against Australia in Dhaka test

ಈ ಗುರಿಯನ್ನು ಬೆನ್ನಟ್ಟಿದ ಕಾಂಗರೂ ಪಡೆಗೆ ಬಿಡದೇ ಕಾಡಿದ ಬಾಂಗ್ಲಾದೇಶದ ಬೌಲರ್ ಗಳು, 244 ರನ್ ಗಳಿಗೆ ಆ ತಂಡ ಆಲೌಟ್ ಆಗುವಂತೆ ಮಾಡಿ ಈ ಐತಿಹಾಸಿಕ ಜಯ ಸಂಪಾದಿಸಿದರು.

ಆಸೀಸ್ ದ್ವಿತೀಯ ಇನಿಂಗ್ಸ್ ವೇಳೆ ಐದು ವಿಕೆಟ್ ಪಡೆದ ಬಾಂಗ್ಲಾದ ಸ್ಪಿನ್ನರ್ ಶಕೀಬ್ ಅಲ್ ಹಸನ್, ದಿನದ ಹೀರೋ ಆಗಿ ಹೊರಹೊಮ್ಮಿದರು. ಆಸೀಸ್ ಮೊದಲ ಇನಿಂಗ್ಸ್ ನಲ್ಲಿಯೂ ಐದು ವಿಕೆಟ್ ಗಳಿಸಿದ್ದ ಅವರು, ಇದೀಗ 2ನೇ ಇನಿಂಗ್ಸ್ ನಲ್ಲೂ ಮತ್ತೆ ಐದು ವಿಕೆಟ್ ಗಳಿಸಿ ಈ ಪಂದ್ಯದಿಂದ 10 ವಿಕೆಟ್ ಗಳಿಸಿದ ಸಾಧನೆ ಮಾಡುವುದರೊಂದಿಗೆ, ಪಂದ್ಯಶ್ರೇಷ್ಠ ಗೌರವವನ್ನೂ ಪಡೆದರು.

ಸಂಕ್ಷಿಪ್ತ ಸ್ಕೋರ್:
ಬಾಂಗ್ಲಾದೇಶ ಮೊದಲ ಇನಿಂಗ್ಸ್ 260

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 217

ಬಾಂಗ್ಲಾದೇಶ ಎರಡನೇ ಇನಿಂಗ್ಸ್ 221

ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್ 244 (ಗೆಲುವಿನ ಗುರಿ: 265 ರನ್)

ವಾರ್ನರ್ 112, ಸ್ಟೀವನ್ ಸ್ಮಿತ್ 37; ಶಕೀಬ್ ಅಲ್ ಹಸನ್ 85ಕ್ಕೆ 5, ತೈಜು ಇಸ್ಲಾಂ 60ಕ್ಕೆ 3.

ಫಲಿತಾಂಶ: ಬಾಂಗ್ಲಾದೇಶಕ್ಕೆ 20 ರನ್ ಗಳ ಜಯ

ಪಂದ್ಯಶ್ರೇಷ್ಠ: ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ)

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X