ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಷೇಧಿತ ವಾರ್ನರ್, ಬ್ಯಾನ್ ಕ್ರಾಫ್ಟ್ ಜುಲೈನಲ್ಲಿ ಮತ್ತೆ ಮೈದಾನಕ್ಕೆ

Banned Warner, Bancroft to return to cricket in July

ಸಿಡ್ನಿ, ಮೇ 29: ನಿಷೇಧಕ್ಕೊಳಗಾಗಿ ಅಘಾತವನ್ನನುಭವಿಸಿದ್ದ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಮತ್ತು ಕ್ಯಾಮರಾನ್ ಬ್ಯಾನ್ ಕ್ರಾಫ್ಟ್ ಮತ್ತೆ ಮೈದಾನಕ್ಕಿಳಿಯಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಜುಲೈನಲ್ಲಿ ನಡೆಯಲಿರುವ ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಇಬ್ಬರೂ ಆಡಲಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ವಾರ್ನರ್ ಒಂದು ವರ್ಷ ಮತ್ತು ಬ್ಯಾನ್ ಕ್ರಾಫ್ಟ್ 9 ತಿಂಗಳು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾಗಿದ್ದರು. ಇಬ್ಬರ ನಿಷೇಧ ಅವಧಿ ಇನ್ನೂ ಮುಗಿದಿಲ್ಲ. ಆದರೆ ಪ್ರತಿಭಾನ್ವಿತ ಆಟಗಾರರ ಸಂಕಟವನ್ನು ಅರಿತಿರುವ ಆಸ್ಟ್ರೇಲಿಯಾ, ಕ್ಲಬ್ ಮಟ್ಟದ ಮತ್ತು ರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನೀಡಿದೆ.

ಕ್ಯಾಮರಾನ್ ಮತ್ತು ವಾರ್ನರ್ ಇಬ್ಬರೂ ವೃತ್ತಿ ಬದುಕನ್ನು ಮತ್ತೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದು, ಉತ್ತರ ಆಸ್ಟ್ರೇಲಿಯಾದ ಡಾರ್ವಿನ್ ನಲ್ಲಿ ನಡೆಯಲಿರುವ ಟಿ20 ಮತ್ತು ಏಕದಿನ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಡೆಸರ್ಟ್ ಬ್ಲೇಜ್, ಸಿಟಿ ಸೈಕ್ಲೋನ್ಸ್, ನಾರ್ತರ್ನ್ ಟೈಡ್ ಮತ್ತು ಸೌತರ್ನ್ ಸ್ಟೋರ್ಮ್ ಈ 4 ಫ್ರಾಂಚೈಸಿಗಳು ಪಾಲ್ಗೊಳ್ಳಲಿವೆ.

ಬ್ಯಾನ್ ಕ್ರಾಫ್ಟ್ ಇಡೀ ಟೂರ್ನಮೆಂಟ್ ನಲ್ಲಿ ಪಾಲ್ಗೊಳ್ಳಲಿದ್ದು, ವಾರ್ನರ್ ಅವರು ಜುಲೈ 21 ಮತ್ತು 22ರಂದು ನಡೆಯಲಿರುವ ಎರಡು ಏಕದಿನ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

'ಡಾರ್ವಿನ್ ನಲ್ಲಿ ನಡೆಯಲಿರುವ ಸ್ಟ್ರೈಕ್ ಲೀಗ್ ನಲ್ಲಿ ಪಾಲ್ಗೊಳ್ಳುವ ಮೂಲಕ ಕ್ಯಾಮರಾನ್ ಮತ್ತು ವಾರ್ನರ್ ನಮ್ಮನ್ನು ಮತ್ತೆ ಸೇರಿಕೊಳ್ಳಲಿದ್ದಾರೆ ಎಂದು ತಿಳಿಸಲು ನಮಗೆ ಅತೀವ ಸಂತೋಷವಾಗುತ್ತಿದೆ' ಎಂದು ನಾರ್ತರ್ನ್ ಟೆರಿಟರಿ ಕ್ರಿಕೆಟ್ ನ ಮುಖ್ಯಸ್ಥ ಜೋಯಲ್ ಮೋರಿಸನ್ ಮಂಗಳವಾರ ತಿಳಿಸಿದ್ದಾರೆ.

Story first published: Tuesday, May 29, 2018, 11:18 [IST]
Other articles published on May 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X