ಕೊರೊನಾ ವೈರಸ್ ಭೀತಿ ಮಧ್ಯೆ ಐಪಿಎಲ್ ಆಯೋಜನೆಗೆ ಬಿಸಿಸಿಐ ತೆರೆಮರೆಯ ಯತ್ನ

ದೇಶಾದ್ಯಂತ ಕೊರೊನಾ ವೈರಸ್‌ ವ್ಯಾಪಕವಾಗಿ ಹಬ್ಬುತ್ತಿದೆ. ಸದ್ಯ ದೇಶದಲ್ಲಿ ಏಪ್ರಿಲ್ 15ರ ವರೆಗೆ ಲಾಕ್‌ಡೌನ್ ಇದ್ದು ಇದು ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ದೇಶಕ್ಕೆ ದೇಶವೇ ಸಂಪೂರ್ಣ ಸ್ಥಬ್ದಗೊಂಡಿದೆ. ಈ ಮಧ್ಯೆ ಬಿಸಿಸಿಐಅಧಿಕಾರಿಗಳು ಐಪಿಎಲ್ ನಡೆಸುವ ಮಾತುಗಳನ್ನಾಡಿತ್ತಿದ್ದಾರೆ.

ಐಪಿಎಲ್‌ನ 13ನೇ ಆವೃತ್ತಿ ಕಳೆದ ಮಾರ್ಚ್ 29ನೇ ತಾರೀಕಿಗೆ ಆರಂಭವಾಗಬೇಕಿತ್ತು. ಆದರೆ ಅದನ್ನು ಮುಂದೂಡಲಾಗಿದೆ. ಸದ್ಯ ಎಲ್ಲವೂ ಅನಿಶ್ಚಿತತೆಯಲ್ಲೇ ಇದೆ. ಬಿಸಿಸಿಐ ಐಪಿಎಲ್ ನಡೆಸಲು ಯಾವೆಲ್ಲಾ ಅವಕಾಶವನ್ನು ನೋಡುತ್ತಿದೆ ಎಂಬ ಬಗ್ಗೆ ಬಿಸಿಸಿಐಯ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಸಿಎನ್‌ಬಿಸಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಜಪಾನ್‌ನ ಸುಮೋ ಕುಸ್ತಿಪಟುಗೆ ಕೊರೊನಾವೈರಸ್ ಸೋಂಕುಜಪಾನ್‌ನ ಸುಮೋ ಕುಸ್ತಿಪಟುಗೆ ಕೊರೊನಾವೈರಸ್ ಸೋಂಕು

ಐಪಿಎಲ್‌ 13ನೇ ಆವೃತ್ತಿ ಈ ವರ್ಷ ನಡೆಸಲು ಸಾಧ್ಯವಾಗದೇ ಇದ್ದರೆ ಬಿಸಿಸಿಐ ಮತ್ತು ಟೂರ್ನಿಯ ಅಧಿಕೃತ ಪ್ರಸಾರ ಹಕ್ಕು ಪಡೆದಿರುವ ಸ್ಟಾರ್‌ ವಾಹಿನಿ ಭಾರೀ ಸಂಕಷ್ಟಕ್ಕೆ ಒಳಗಾಗಲಿದೆ. ಸಹಸ್ರಾರು ಕೋಟಿ ರೂ.ಗಳ ಭಾರಿ ನಷ್ಟ ಉಂಟಾಗಲಿದೆ. ಹೀಗಾಗಿ ತನ್ನ ಮುಂದಿರುವ ಸಣ್ಣ ಅವಕಾಶವನ್ನು ಬಳಸಿಕೊಳ್ಳಲು ಅವಕಾಶಕ್ಕಾಗಿ ಬಿಸಿಸಿಐ ಎದುರು ನೋಡುತ್ತಿದೆ. ಹೀಗಾಗಿ ತೆರೆಮರೆಯಲ್ಲೇ ಇದರ ಪ್ರಯತ್ನಗಳು ಮುಂದುವರಿದಿವೆ.

ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾನ್ ಹಾರ್ಕೋರ್ಟ್ ಡು ಪ್ರೀಜ್ ನಿಧನದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾನ್ ಹಾರ್ಕೋರ್ಟ್ ಡು ಪ್ರೀಜ್ ನಿಧನ

ಸದ್ಯಕ್ಕೆ ಭಾರತದಲ್ಲಿ ಕೋವಿಡ್‌-19 ಸೋಂಕಿತರ ಸಂಖ್ಯೆ 7 ಸಾವಿರದ ಗಡಿಯತ್ತ ಕಾಲಿಟ್ಟಿದ್ದು 200ಕ್ಕೂ ಹೆಚ್ಚಿನವರನ್ನು ಬಲಿ ತೆಗೆದುಕೊಂಡಿದೆ. ಹೀಗಾಗಿ ಐಪಿಎಲ್‌ ಟೂರ್ನಿ ನಡೆಯುವ ಯಾವುದೇ ಸುಳಿವು ಇಲ್ಲವಾಗಿದೆ. ಇವೆಲ್ಲೆದರ ನಡುವೆಯೂ ಜುಲೈನಲ್ಲಿ ಐಪಿಎಲ್‌ ಟೂರ್ನಿ ಆಯೋಜನೆ ಸಾಧ್ಯ ಎಂದು ಬಿಸಿಸಿಐ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಐಪಿಎಲ್‌ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಪರ್ಯಾಯ ದಿನಾಂಕವನ್ನು ಹುಡುಕುತ್ತಿದೆ. ಜುಲೈನಲ್ಲಿ ಮುಚ್ಚಿದ ಕ್ರೀಡಾಂಗಣದಲ್ಲಿ ಆಡಿಸುವ ಕುರಿತಾಗಿಯೂ ಆಲೋಚಿಸಲಾಗಿದೆ. ಜೊತೆಗೆ ವರ್ಷಾಂತ್ಯದಲ್ಲಿ ನಡೆಸುವ ಕಡೆಗೂ ಚಿಂತನೆ ನಡೆಸಲಾಗುತ್ತಿದೆ," ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, April 10, 2020, 21:00 [IST]
Other articles published on Apr 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X