ಟೆನ್ನಿಸ್ ಫಿಕ್ಸಿಂಗ್ ಕಿಂಗ್‌ಪಿನ್ ಮೇಲೆ 4 ವರ್ಷಗಳಿಂದ ಬಿಸಿಸಿಐ ಹದ್ದಿನ ಕಣ್ಣು

ಅಂತಾರಾಷ್ಟ್ರೀಯ ಟೆನಿಸ್ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಭಾರತ ಮೂಲದ ಬುಕ್ಕಿ ರವೀಂದರ್ ದಾಂಡಿವಾಲಾ ಕಿಂಗ್‌ಪಿನ್ ಆಗಿದ್ದಾನೆ ಎಂದು ಆಸ್ಟ್ರೇಲಿಯಾದ ಪೊಲೀಸರು ಮಾಹಿತಿಯನ್ನು ಬಹಿರಂಗಪಡಿಸಿದ್ದರು. ಈ ವಿಚಾರವಾಗಿ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ (ಎಸಿಯು) ಮುಖ್ಯಸ್ಥ ಅಜಿತ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಕ್ರಿಕೆಟ್ ಫಿಕ್ಸಿಂಗ್ ಪ್ರಕರಣಗಳಲ್ಲೂ ಇದೇ ಬುಕ್ಕಿಯ ಮೇಲೆ ಬಿಸಿಸಿಐ ಕಣ್ಣಿಟ್ಟಿತ್ತು ಎಂದು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ (ಎಸಿಯು) ಮುಖ್ಯಸ್ಥ ಅಜಿತ್ ಸಿಂಗ್ ತಿಳಿಸಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಈತನ ಮೇಲೆ ನಿಗಾ ಇಟ್ಟಿತ್ತು ಎಂದಿದ್ದಾರೆ.
ರವೀಂದರ್ ಈ ಹಿಂದೆ ನೇಪಾಳದಲ್ಲಿ ಏಷ್ಯನ್ ಪ್ರೀಮಿಯರ್ ಲೀಗ್ ಎಂಬ ಅನಧಿಕೃತ ಕ್ರಿಕೆಟ್ ಲೀಗ್ ನಡೆಸಿದ್ದ. ಅಫ್ಘಾನಿಸ್ತಾನ ಕ್ರಿಕೆಟ್ ಲೀಗ್ ಜತೆಗೂ ಈತನಿಗೆ ಸಂಪರ್ಕವಿತ್ತು. ಹರಿಯಾಣದಲ್ಲೂ ಕ್ರಿಕೆಟ್ ಲೀಗ್ ಆಯೋಜಿಸಲು ಪ್ರಯತ್ನಿಸಿದ್ದ ಆದರೆ ಅದಕ್ಕೆ ಬಿಸಿಸಿಐ ಅವಕಾಶವನ್ನು ಕೊಟ್ಟಿರಲಿಲ್ಲ ಎಂದು ಅಜಿತ್ ಸಿಂಗ್ ತಿಳಿಸಿದ್ದಾರೆ.
ಟೆನ್ನಿಸ್ ಲೋಕದ ಫಿಕ್ಸಿಂಗ್ ಪ್ರಕರಣವನ್ನು ಆಸ್ಟ್ರೇಲಿಯಾ ಪೊಲೀಸರು ಬೇದಿಸಿದ್ದು ರವೀಂದರ್ ದಾಂಡಿವಾಲಾ ಪ್ರಕರಣದ ಕಿಂಗ್‌ಪಿನ್ ಆಗಿದ್ದಾನೆ ಎಂದು ಬಹಿರಂಗಪಡಿಸಿದ್ದರು. ಕೆಳ ಶ್ರೇಯಾಂಕಿತ ಟೆನಿಸ್ ಆಟಗಾರರನ್ನು ಮ್ಯಾಚ್ ಫಿಕ್ಸಿಂಗ್‌ಗೆ ಒಪ್ಪಿಸಿದ್ದ ರವೀಂದರ್ ದಾಂಡಿವಾಲಾ 2018ರಲ್ಲಿ ಈಜಿಪ್ಟ್ ಮತ್ತು ಬ್ರೆಜಿಲ್ ಟೆನಿಸ್ ಟೂರ್ನಿಗಳಲ್ಲಿ ಫಿಕ್ಸಿಂಗ್ ಮಾಡಿದ್ದ ಎಂದು ವಿಕ್ಟೋರಿಯಾ ಪೊಲೀಸರು 'ಸಿಡ್ನಿ ಮಾರ್ನಿಂಗ್ ಹೆರಾಲ್ಡ್'ಗೆ ತಿಳಿಸಿದ್ದಾರೆ.
ಮೊಹಾಲಿ ಮೂಲದವನಾದ ರವೀಂದರ್ ಭಾರತದಲ್ಲಿ ನೆಲೆಸಿರಲಿಲ್ಲ. ಆತನ ಇಬ್ಬರು ಸಹಚರರು ಮತ್ತು ಭಾರತ ಮೂಲದವರೇ ಆದ ರಾಜೇಶ್ ಕುಮಾರ್ ಮತ್ತು ಹರ್‌ಸಿಮ್ರತ್ ಸಿಂಗ್‌ರನ್ನು ವಿಕ್ಟೋರಿಯಾ ಪೊಲೀಸರು ಈಗಾಗಲೆ ಬಂಧಿಸಿದ್ದು, ಮೆಲ್ಬೋರ್ನ್ ಮೆಜಿಸ್ಟ್ರೇಟ್ ಕೋರ್ಟ್ ಎದುರು ಹಾಜರು ಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications