ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್‌ಗೆ ಬಂಪರ್ ಸಾಧ್ಯತೆ

BCCI New Contracts Of Players Will Anounce February, Surya, Pandya, Gill Set For Promotion

ಚುನಾವಣೆ, ಆಯ್ಕೆದಾರರ ಸಮಿತಿ ಸೇರಿದಂತೆ ಹಲವು ಕಾರಣಗಳಿಂದ ಆಟಗಾರರ ಹೊಸ ಒಪ್ಪಂದಗಳನ್ನು ಘೋಷಿಸಲು ವಿಳಂಬ ಮಾಡಿದ್ದ ಬಿಸಿಸಿಐ ಕೊನೆಗೂ ಹೊಸ ಒಪ್ಪಂದಗಳನ್ನು ಪ್ರಕಟಿಸಲು ಸಿದ್ಧವಾಗಿದೆ. ಭಾರತ ಟಿ20 ತಂಡದ ನಾಯಕತ್ವ ವಹಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಮತ್ತು ಟಿ20 ತಂಡದ ಉಪನಾಯಕ ಸೂರ್ಯಕುಮಾರ್ ಯಾದವ್‌ ಭರ್ಜರಿ ಮುಂಬಡ್ತಿ ಪಡೆಯಲು ಸಿದ್ಧವಾಗಿದ್ದಾರೆ.

ಫೆಬ್ರವರಿ ತಿಂಗಳಿನಲ್ಲಿ ಆಟಗಾರರ ಹೊಸ ಒಪ್ಪಂದಗಳನ್ನು ಪ್ರಕಟಿಸಲು ಬಿಸಿಸಿಐ ತೀರ್ಮಾನಿಸಿದೆ. ಹೊಸ ಆಯ್ಕೆ ಸಮಿತಿ ಮತ್ತು ಕ್ರಿಕೆಟ್ ಸಲಹಾ ಸಮಿತಿ ಅಧಿಕಾರ ವಹಿಸಿಕೊಳ್ಳಬೇಕಿದ್ದರಿಂದ ಆಟಗಾರರ ಒಪ್ಪಂದ ಪ್ರಕಟಣೆಯನ್ನು ತಡೆಹಿಡಿಯಲಾಗಿತ್ತು.

U-19 Women's T20 World Cup 2023: ಭಾರತ ತಂಡವನ್ನು ಭೇಟಿ ಮಾಡಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾU-19 Women's T20 World Cup 2023: ಭಾರತ ತಂಡವನ್ನು ಭೇಟಿ ಮಾಡಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾ

"ಚುನಾವಣೆ ಮತ್ತು ಆಯ್ಕೆ ಸಮಿತಿಯನ್ನು ನೇಮಿಸುವ ಕಾರಣ ಆಟಗಾರರ ಹೊಸ ಒಪ್ಪಂದಗಳನ್ನು ಪ್ರಕಟಿಸಲು ತಡವಾಗಿದೆ. ಈಗಾಗಲೇ ಕೊನೆಯ ಹಂತದ ಚರ್ಚೆಗಳು ಮುಕ್ತಾಯವಾಗಿವೆ. ಮುಂದಿನ ತಿಂಗಳೊಳಗೆ ಪಟ್ಟಿ ಹೊರಬೀಳಲಿದೆ" ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇನ್‌ಸೈಡ್‌ಸ್ಪೋರ್ಟ್‌ ವರದಿ ಮಾಡಿದೆ.

2022ರ ಡಿಸೆಂಬರ್‌ನಲ್ಲಿ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಹೊಸ ಒಪ್ಪಂದಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಆದರೆ, ಹೊಸ ಆಯ್ಕೆ ಸಮಿತಿ ಅಧಿಕಾರ ವಹಿಸಿಕೊಳ್ಳಬೇಕಾದ ಕಾರಣ ಘೋಷಣೆಯನ್ನು ತಡೆಹಿಡಿಯಲಾಗಿದೆ. ಅನೇಕ ಹಿರಿಯ ಆಟಗಾರರು ಒಪ್ಪಂದವನ್ನು ಕಳೆದುಕೊಳ್ಳಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ ಸೋಲು: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರುದ್ಧ ಬೆನ್‌ ಸ್ಟೋಕ್ಸ್ ಟೀಕೆದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ ಸೋಲು: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರುದ್ಧ ಬೆನ್‌ ಸ್ಟೋಕ್ಸ್ ಟೀಕೆ

ಇವರ ಒಪ್ಪಂದ ಮುಕ್ತಾಯ ಸಾಧ್ಯತೆ

ಇವರ ಒಪ್ಪಂದ ಮುಕ್ತಾಯ ಸಾಧ್ಯತೆ

ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಹಲವು ಹಿರಿಯ ಆಟಗಾರರನ್ನು ಒಪ್ಪಂದಗಳಿಂದ ಕೈಬಿಡಲು ನಿರ್ಧರಿಸಲಾಗಿದೆ. ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ ಮತ್ತು ವೃದ್ಧಿಮಾನ್ ಸಹಾ ಒಪ್ಪಂದವನ್ನು ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.

ಹಲವು ವರ್ಷಗಳಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದ ಮಯಾಂಕ್ ಅಗರ್ವಾಲ್ ಕೂಡ ಒಪ್ಪಂದವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. 2022ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಭಾರತವನ್ನು ಮುನ್ನಡೆಸಿದ ಶಿಖರ್ ಧವನ್‌ರನ್ನು ಕೂಡ ಒಪ್ಪಂದದಿಂದ ಕೈಬಿಡಲು ನಿರ್ಧರಿಸಲಾಗಿದೆ.

ಬಡ್ತಿ ಪಡೆಯಲಿರುವ ಆಟಗಾರರು

ಬಡ್ತಿ ಪಡೆಯಲಿರುವ ಆಟಗಾರರು

ಭಾರತ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಉಪನಾಯಕ ಸೂರ್ಯಕುಮಾರ್ ಯಾದವ್ ಈ ಬಾರಿ ಬಡ್ತಿ ಪಡೆಯಲು ಸಿದ್ಧವಾಗಿದ್ದಾರೆ. ಪಾಂಡ್ಯ ಸದ್ಯ ಬಿ ಗ್ರೇಡ್‌ನಲ್ಲಿದ್ದು ಎ ಗ್ರೇಡ್‌ಗೆ ಬಡ್ತಿ ಪಡೆಯಲಿದ್ದಾರೆ. ಸೂರ್ಯಕುಮಾರ್ ಯಾದವ್ ಸಿ ಗ್ರೇಡ್‌ನಲ್ಲಿದ್ದು ಅವರು ಕೂಡ ಎ ಗ್ರೇಡ್‌ಗೆ ಬಡ್ತಿ ಪಡೆಯಲಿದ್ದಾರೆ.

ಎಲ್ಲಾ ಮಾದರಿಯಲ್ಲಿ ಆಡುತ್ತಿರುವ ಶುಭಮನ್ ಗಿಲ್ ಸದ್ಯ ಸಿ ಗ್ರೇಡ್‌ನಲ್ಲಿದ್ದು, ತಂಡದಲ್ಲಿ ಸ್ಥಾನ ಖಚಿತಪಡಿಸಿಕೊಂಡ ನಂತರ ಅವರಿಗೂ ಎ ಗ್ರೇಡ್‌ಗೆ ಬಡ್ತಿ ಸಿಗಲಿದೆ. ಇಶಾನ್ ಕಿಶನ್, ಉಮ್ರಾನ್ ಮಲಿಕ್ ಸೇರಿದಂತೆ ಹಲವು ಯುವ ಪ್ರತಿಭೆಗಳು ಸಿ ಗ್ರೇಡ್‌ನಲ್ಲಿ ಹೊಸ ಒಪ್ಪಂದ ಪಡೆದುಕೊಳ್ಳುವ ಸಾಧ್ಯತೆ ಇದೆ.

ಟೀಂ ಇಂಡಿಯಾ ಆಟಗಾರರ ವೇತನ

ಟೀಂ ಇಂಡಿಯಾ ಆಟಗಾರರ ವೇತನ

ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರೋಹಿತ್ ಶರ್ಮಾ ಎ+ ಗ್ರೇಡ್‌ನಲ್ಲಿದ್ದು ವಾರ್ಷಿಕ 7 ಕೋಟಿ ರುಪಾಯಿ ಪಡೆಯುತ್ತಾರೆ.

ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ರಿಷಬ್ ಪಂತ್, ಕೆಎಲ್ ರಾಹುಲ್, ಮೊಹಮ್ಮದ್ ಶಮಿ ಎ ಗ್ರೇಡ್‌ನಲ್ಲಿದ್ದು ವಾರ್ಷಿಕ 5 ಕೋಟಿ ರುಪಾಯಿ ಪಡೆಯುತ್ತಿದ್ದಾರೆ.

ಚೇತೇಶ್ವರ ಪೂಜಾರ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ ಬಿ ಗ್ರೇಡ್‌ನಲ್ಲಿದ್ದು ವಾರ್ಷಿಕ 5 ಕೋಟಿ ರುಪಾಯಿ ಪಡೆಯುತ್ತಿದ್ದಾರೆ.

ಶಿಖರ್ ಧವನ್, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ವಾಷಿಂಗ್ಟನ್ ಸುಂದರ್, ದೀಪಕ್ ಚಹಾರ್, ಶುಭಮನ್ ಗಿಲ್, ಹನುಮ ವಿಹಾರಿ, ಯುಜ್ವೇಂದ್ರ ಚಾಹಲ್, ಸೂರ್ಯಕುಮಾರ್ ಯಾದವ್ ಮತ್ತು ಮಯಾಂಕ್ ಅಗರ್ವಾಲ್ ಸಿ ಗ್ರೇಡ್‌ನಲ್ಲಿದ್ದು ವಾರ್ಷಿಕ 1 ಕೋಟಿ ರುಪಾಯಿ ಪಡೆಯುತ್ತಿದ್ದಾರೆ.

ಮೂಲಗಳ ಪ್ರಕಾರ ಈ ಬಾರಿ ಆಟಗಾರರ ವಾರ್ಷಿಕ ಒಪ್ಪಂದ ವೇತನವನ್ನು 10 ರಿಂದ 20 ಪ್ರತಿಶತ ಹೆಚ್ಚಳ ಮಾಡುವ ಸಾಧ್ಯತೆ ಕೂಡ ಇದೆ.

Story first published: Sunday, January 29, 2023, 8:55 [IST]
Other articles published on Jan 29, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X