ಬೇಡವೆಂದರೂ ಸಾಹಸ ಮಾಡಲು ಹೋಗಿ ಗಾಯಗೊಂಡ ಜಡೇಜಾ : ಬಿಸಿಸಿಐ ಕೆಂಡಾಮಂಡಲ

ಭಾರತದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಮೊಣಕಾಲಿನ ಗಾಯದ ಕಾರಣ ಮುಂದಿನ ಟಿ20 ವಿಶ್ವಕಪ್ ನಿಂದ ಹೊರಗುಳಿದಿದ್ದು ಬಿಸಿಸಿಐ ಕೋಪಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ. ರವೀಂದ್ರ ಜಡೇಜಾ ಗಾಯಗೊಂಡಿದ್ದು, ಏಷ್ಯಾಕಪ್‌ ಟೂರ್ನಿಯಿಂದ ಹೊರಬಿದ್ದಿದ್ದರು, ಇದು ಭಾರತ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿತ್ತು.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಇತ್ತೀಚೆಗೆ ಯುಎಇಯಲ್ಲಿ ಭಾರತೀಯ ಆಟಗಾರರು ಭಾಗವಹಿಸಿದ ಸಾಹಸ ಚಟುವಟಿಕೆಯ ಸಂದರ್ಭದಲ್ಲಿ ರವೀಂದ್ರ ಜಡೇಜಾ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಏಷ್ಯಾ ಕಪ್ ಟಿ20 ಕಾರ್ಯಕ್ರಮಕ್ಕಾಗಿ ಭಾರತೀಯ ತಂಡವು ದುಬೈನಲ್ಲಿ ತಂಗಿದ್ದಾಗ ಹೋಟೆಲ್‌ನ ಹಿನ್ನೀರಿನಲ್ಲಿ ನೀರು ಆಧಾರಿತ ತರಬೇತಿಯಲ್ಲಿ ಭಾಗವಹಿಸಲು ಜಡೇಜಾ ಅವರನ್ನು ಕೇಳಲಾಯಿತು. ಇದಕ್ಕೆ ಒಪ್ಪಿಗೆ ಕೊಟ್ಟ ಜಡೇಜಾ ಎಡವಟ್ಟು ಮಾಡಿಕೊಂಡಿದ್ದಾರೆ.

ಆರನ್ ಫಿಂಚ್ ತಮ್ಮ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಾಳೆ ನೀವೃತ್ತಿ ಘೋಷಣೆ ಸಾಧ್ಯತೆಆರನ್ ಫಿಂಚ್ ತಮ್ಮ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಾಳೆ ನೀವೃತ್ತಿ ಘೋಷಣೆ ಸಾಧ್ಯತೆ

ರವೀಂದ್ರ ಜಡೇಜಾ ಸಾಹಸ ಚಟುವಟಿಕೆಯ ಭಾಗವಾಗಿ ಕೆಲವು ರೀತಿಯ ಸ್ಕೈ-ಬೋರ್ಡ್‌ನಲ್ಲಿ ತನ್ನನ್ನು ತಾನು ಸಮತೋಲನಗೊಳಿಸಬೇಕಾಗಿತ್ತು. ತರಬೇತಿ ಕೈಪಿಡಿಯ ಭಾಗವಲ್ಲ. ಈ ಚಟುವಟಿಕೆ ಸಂಪೂರ್ಣವಾಗಿ ಅನಗತ್ಯವಾಗಿತ್ತು. ಸಾಹಸದ ವೇಳೆ ರವೀಂದ್ರ ಜಾರಿಬಿದ್ದು ಮೊಣಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ, ಇದರಿಂದ ರವೀಂದ್ರ ಜಡೇಜಾ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು, ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಕೋಪಗೊಂಡಿರುವ ಬಿಸಿಸಿಐ ಅಧಿಕಾರಿಗಳು

ಕೋಪಗೊಂಡಿರುವ ಬಿಸಿಸಿಐ ಅಧಿಕಾರಿಗಳು

ಕೆಲವು ಬಿಸಿಸಿಐ ಅಧಿಕಾರಿಗಳು, ಗಾಯವು ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಈಗಾಗಲೇ ಕೋಪಗೊಂಡಿದ್ದಾರೆ. ಬಿಸಿಸಿಐ ಈ ಕುರಿತು ಸದ್ಯ ಯಾವುದೇ ವಿಚಾರಣೆ ಮಾಡಿಲ್ಲವಾದರೂ, ಮುಂದಿನ ದಿನಗಳಲ್ಲಿ ರವೀಂದ್ರ ಜಡೇಜಾ ಬಿಸಿಸಿಐಗೆ ವಿವರಣೆ ಕೊಡಬೇಕಾಗುತ್ತದೆ ಎಂದು ಹೇಳಲಾಗಿದೆ.

ರವೀಂದ್ರ ಜಡೇಜಾ ಗಾಯಗೊಂಡಿದ್ದು, ಏಷ್ಯಾಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ ಪ್ರದರ್ಶನದ ಮೇಲೆ ಪರಿಣಾಮ ಬೀರಿದ್ದು, ಬಿಸಿಸಿಐ ಅಧಿಕಾರಿಗಳ ಸಿಟ್ಟು ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.

ಏಷ್ಯಾ ಕಪ್ ಸೋಲು: ಕೋಚ್ ರಾಹುಲ್ ದ್ರಾವಿಡ್‌ರ ಹನಿಮೂನ್ ಅವಧಿ ಮುಗಿದಿದೆ; ಮಾಜಿ ಆಯ್ಕೆಗಾರ

ಸತತವಾಗಿ ಎರಡು ಪಂದ್ಯಗಳಲ್ಲಿ ಸೋಲು

ಸತತವಾಗಿ ಎರಡು ಪಂದ್ಯಗಳಲ್ಲಿ ಸೋಲು

ಹಾಂಗ್‌ಕಾಂಗ್‌ ವಿರುದ್ಧದ ಪಂದ್ಯದ ನಂತರ ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಿದ್ದರು. ಎಡಗೈ ಆಲ್‌ರೌಂಡರ್ ಟೂರ್ನಿ ಮಧ್ಯದಲ್ಲಿ ಗಾಯಗೊಂಡಿದ್ದು ತಂಡದಲ್ಲಿ ಅಸಮತೋಲನಕ್ಕೆ ಕಾರಣವಾಯಿತು.

ಲೀಗ್ ಸುತ್ತಿನಲ್ಲಿ ಅಜೇಯರಾಗಿದ್ದರೂ, ಸೂಪರ್ 4 ಹಂತದ ಮೊದಲ ಎರಡು ಬಹುಮುಖ್ಯ ಪಂದ್ಯಗಳಲ್ಲಿ ಸೋಲು ಕಂಡ ಭಾರತ ತಂಡ ಏಷ್ಯಾಕಪ್‌ ಟೂರ್ನಿಯಿಂದಲೇ ಹೊರಬಿದ್ದಿತು.

ರವೀಂದ್ರ ಜಡೇಜಾಗೆ ಶಸ್ತ್ರಚಿಕಿತ್ಸೆ

ರವೀಂದ್ರ ಜಡೇಜಾಗೆ ಶಸ್ತ್ರಚಿಕಿತ್ಸೆ

ಗಾಯಗೊಂಡಿರುವ ಜಡೇಜಾ ಈಗಾಗಲೇ ತಮ್ಮ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಮತ್ತು ಅದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಆದಷ್ಟು ಬೇಗ ವಾಪಸ್ ಬರುತ್ತೇನೆ ಎಂದು ಹೇಳಿದ್ದಾರೆ.

ಆದಾಗ್ಯೂ, ಆಲ್‌ರೌಂಡರ್ ಫಿಟ್‌ನೆಸ್‌ಗೆ ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಕುರಿತು ಯಾವುದೇ ಖಚಿತ ಮಾಹಿತಿ ಇಲ್ಲದಿರುವುದರಿಂದ ಶೀಘ್ರದಲ್ಲೇ ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವುದು ಅನುಮಾನವಾಗಿದೆ.

Virat Kohli 1020 ದಿನಗಳ ನಂತರ ಸೆಂಚುರಿ ಸಿಡಿಸಿದ್ದು ಹೀಗೆ | *Cricket | OneIndiaKannada
ದ್ರಾವಿಡ್, ರೋಹಿತ್ ಶರ್ಮಾ ಮೇಲೂ ಬಿಸಿಸಿಐ ಕೆಂಗಣ್ಣು

ದ್ರಾವಿಡ್, ರೋಹಿತ್ ಶರ್ಮಾ ಮೇಲೂ ಬಿಸಿಸಿಐ ಕೆಂಗಣ್ಣು

ಬಿಸಿಸಿಐ ಅಧಿಕಾರಿಗಳು ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಮೇಲೂ ಕೋಪಗೊಂಡಿದ್ದಾರೆ ಎನ್ನಲಾಗಿದೆ. ಈ ರೀತಿಯ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸದಂತೆ ರವೀಂದ್ರ ಜಡೇಜಾಗೆ ಕೋಚ್ ರಾಹುಲ್ ದ್ರಾವಿಡ್ ಸಲಹೆ ನೀಡಿದ್ದಾರೆ ಎನ್ನಲಾಗಿದ್ದೂ, ಆದರೂ ರವೀಂದ್ರ ಜಡೇಜಾ ಜಿಗಿದದ್ದು ಗಾಯಗೊಳ್ಳಲು ಕಾರಣ ಎಂದು ವರದಿಯಾಗಿದೆ.

ಗಾಯದ ಸಮಸ್ಯೆಯಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಯಿಂದ ರವೀಂದ್ರ ಜಡೇಜಾ ಹೊರಗುಳಿಯಲಿದ್ದಾರೆ. ಆಯ್ಕೆದಾರರಿಗೆ ಈಗ ಜಡೇಜಾಗೆ ಪರ್ಯಾಯ ಆಟಗಾರನ ಹುಡುಕುವುದು ಸಮಸ್ಯೆಯಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Friday, September 9, 2022, 19:35 [IST]
Other articles published on Sep 9, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X