ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ವಿಧಿವಶ

ಕೊಲ್ಕತ್ತಾ, ಸೆ 20: ಹೃದಯ ಸಂಬಂಧ ಕಾಯಿಲೆಗಳಿಂದ ಬಳಲುತ್ತಿದ್ದ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ (75) ಕೊಲ್ಕತ್ತಾದ ಬಿ ಎಂ ಬಿರ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಎದೆ ನೋವಿನಿಂದ ಬಳಲುತ್ತಿದ್ದ ದಾಲ್ಮಿಯಾ ಅವರಿಗೆ ಗುರುವಾರ (ಸೆ 17) ರಾತ್ರಿ ಒಂಬತ್ತು ಗಂಟೆಯಿಂದ ಚಿಕಿತ್ಸೆ ನೀಡಲಾಗುತ್ತಿತ್ತು. (ಬಿಸಿಸಿಐ ಅಧ್ಯಕ್ಷ ದಾಲ್ಮಿಯಾ ಹೃದಯಕ್ಕೆ ಶಸ್ತ್ರಚಿಕಿತ್ಸೆ)

BCCI President Jagmohan Dalmiya has died of a heart attack

2001-2004ರ ಅವಧಿಯಲ್ಲಿ ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆ ಬಿಸಿಸಿಐ ಅಧ್ಯಕ್ಷರಾಗಿದ್ದ ದಾಲ್ಮಿಯಾ, ಮಾರ್ಚ್ 2014ರಲ್ಲಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಕೊಲ್ಕತ್ತಾದ ಪ್ರತಿಷ್ಠಿತ ದಾಲ್ಮಿಯಾ ಕಂಪೆನಿಯ ಮಾಲೀಕರಾಗಿದ್ದ ದಾಲ್ಮಿಯಾ ಅವರಿಗೆ ಮೊದಲಿಂದಲೂ ಕ್ರಿಕೆಟ್ ಆಟದ ಬಗ್ಗೆ ಸೆಳೆತವಿತ್ತು.

ಐಸಿಸಿ (ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಅಧ್ಯಕ್ಷರಾದ ದಾಲ್ಮಿಯಾ, ಈ ಹುದ್ದೆ ಅಲಂಕರಿಸಿದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ಬಿಸಿಸಿಐಗೆ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ದಾಲ್ಮಿಯಾ, 1983ರಲ್ಲಿ ಖಜಾಂಜಿಯಾಗಿ ಆಯ್ಕೆಯಾಗಿದ್ದರು. 1987 ಮತ್ತು 1996 ವಿಶ್ವಕಪ್ ಕ್ರಿಕೆಟ್ ಭಾರತದಲ್ಲಿ ನಡೆಯಲು ದಾಲ್ಮಿಯಾ ಪ್ರಮುಖ ಕಾರಣರಾಗಿದ್ದರು.

ದಾಲ್ಮಿಯಾ ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ದಾಲ್ಮಿಯಾ ನಿಧನಕ್ಕೆ ಬಿಸಿಸಿಐ ಮತ್ತು ಕೇಂದ್ರ ಕ್ರೀಡಾ ಸಚಿವಾಲಯ ಕಂಬನಿ ಮಿಡಿದಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X