ಕೋಚ್ ರವಿಶಾಸ್ತ್ರಿಗೆ ಕುಂಬ್ಳೆಗಿಂತ 1.5 ಕೋಟಿ ರೂ ಹೆಚ್ಚು ಸಂಬಳ
ನವದೆಹಲಿ, ಜುಲೈ 19 : ಅನಿಲ್ ಕುಂಬ್ಳೆ ಅವರು ಕೇಳಿದ್ದ ವೇತನವನ್ನು ಕೊಡಲು ನಿರಾಕರಿಸಿದ್ದ ಭಾರತೀಯ ಕ್ರಿಕೆಟ್ ಮಂಡಳಿ, ಇದೀಗ ಹೊಸದಾಗಿ ಭಾರತ ತಂಡದ ಕೋಚ್ ಆಗಿ ಆಯ್ಕೆಯಾಗಿರುವ ರವಿಶಾಸ್ತ್ರಿ ಅವರಿಗೆ ಈ ಹಿಂದಿನ ಎಲ್ಲಾ ಕೋಚ್ ಗಳಿಗಿಂತ ಹೆಚ್ಚಿನ ವೇತನ ನೀಡಲು ನಿರ್ಧರಿಸಿದೆ.
ರವಿಶಾಸ್ತ್ರಿ ಅವರು ವಾರ್ಷಿಕ ಬರೋಬ್ಬರಿ 8 ಕೋಟಿ ರು. ಪಡೆಯಲಿದ್ದಾರೆ. ಅನಿಲ್ ಕುಂಬ್ಳೆ ಅವರು ಕೋಚ್ ಆಗಿದ್ದ ವೇಳೆ ಅವರಿಗೆ 6.5 ಕೋಟಿ ನೀಡಲಾಗಿತ್ತು. ಇದೀಗ ಬಿಸಿಸಿಐ ಶಾಸ್ತ್ರಿಗೆ ಅದಕ್ಕಿಂತ ಹೆಚ್ಚಿನ ಸಂಬಳ ಮತ್ತು ಸೌಲಭ್ಯಗಳನ್ನು ನೀಡಿದೆ.

ಇನ್ನು ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಸಹಾಯಕ ಕೋಚ್ ಸಂಜಯ್ ಬಂಗಾರ್ ಹಾಗೂ ಫೀಲ್ಡಿಂಗ್ ಕೋಚ್ ಆಗಿರುವ ಆರ್ ಶ್ರೀಧರ್ ತಲಾ 2 ರಿಂದ 3 ಕೋಟಿ ರು. ವೇತನ ಪಡೆಯುವ ಸಾಧ್ಯತೆಗಳಿವೆ.
ಅನಿಲ್ ಕುಂಬ್ಳೆ ಅವರು ಕೋಚ್ ಆಗಿದ್ದ ವೇಳೆ ತಮ್ಮ ವೇತನವನ್ನು ಹೆಚ್ಚಿಸಿ ಎಂದು ಭಾರತೀಯ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದ್ದರು. ಆದರೆ, ಕುಂಬ್ಳೆ ಅವರ ಮನವಿಗೆ ಬಿಸಿಸಿಐ ನಿರಾಕರಿಸಿತ್ತು.
Story first published: Wednesday, January 3, 2018, 10:05 [IST]
Other articles published on Jan 3, 2018
Read in English: Shastri to be paid 8 crore plus
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications