ಬೆಳಗಾವಿ ಪ್ಯಾಂಥರ್ಸ್ ಕೆಪಿಎಲ್ ನ ಹೊಸ ಚಾಂಪಿಯನ್
ಹುಬ್ಬಳ್ಳಿ, ಸೆ.24 : ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ನ ಫೈನಲ್ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ತಂಡವನ್ನು 6 ವಿಕೆಟ್ಗಳ ಅಂತರದಿಂದ ಸೋಲಿಸಿ ಬೆಳಗಾವಿ ಪ್ಯಾಂಥರ್ಸ್ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಇಲ್ಲಿನ ರಾಜನಗರ ಕೆಎಸ್ಸಿಎ ಮೈದಾನದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ 142ರನ್ಗಳ ಗುರಿ ಪಡೆದ ಎಸ್. ಅರವಿಂದ್ ನಾಯಕತ್ವದ ಬೆಳಗಾವಿ ಪ್ಯಾಂಥರ್ಸ್ ತಂಡವು 17.3 ಓವರ್ಗಳಲ್ಲಿ 4 ವಿಕೆಟ್ಗೆ 145ರನ್ ಗಳಿಸಿ ಗೆಲುವು ದಾಖಲಿಸಿತು. ಎರಡು ಬಾರಿ ರನ್ನರ್ ಅಪ್ ತಂಡವಾಗಿದ್ದ ಬೆಳಗಾವಿ ಈ ಬಾರಿ ಪ್ರಶಸ್ತಿಗೆ ಮುತ್ತಿಟ್ಟಿದೆ.

ಬೆಳಗಾವಿ ಪರ ಸ್ಟಾಲಿನ್ ಹೂವರ್ 81ರನ್ (52 ಎಸೆತ, 8 ಬೌಂಡರಿ, 4 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಬೆಳಗಾವಿ ಪ್ಯಾಂಥರ್ಸ್ ತಂಡ ಸುಲಭವಾಗಿ ಚೇಸ್ ಮಾಡಲು ಸಾಧ್ಯವಾಯಿತು. ಉಳಿದಂತೆ ಆರಂಭಿಕ ಆಟಗಾರ ಕೆ.ಎನ್. ಭರತ್ 24ರನ್, (19ಎಸೆತ, 4ಬೌಂಡರಿ) ಉತ್ತಮ ಸಾಥ್ ನೀಡಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಬಿಜಾಪುರ ಬುಲ್ಸ್ ಆರಂಭಿಕ ಮೊಹಮದ್ ತಾಹ 30ರನ್(22ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ಎಚ್ಎಸ್ ಶರತ್ ಅಜೇಯ 30ರನ್(12 ಎಸೆತ, 1 ಬೌಂಡರಿ, 3 ಸಿಕ್ಸರ್) ಬ್ಯಾಟಿಂಗ್ ನಿಂದ 7 ವಿಕೆಟ್ಗೆ 141 ರನ್ ಕಲೆಹಾಕಲು ಮಾತ್ರ ಸಾಧ್ಯವಾಯಿತು.
ಸಂಕ್ಷಿಪ್ತ ಸ್ಕೋರ್
ಬಿಜಾಪುರ ಬುಲ್ಸ್: 7 ವಿಕೆಟ್ಗೆ 141
ಬೆಳಗಾವಿ ಪ್ಯಾಂಥರ್ಸ್:
17.3 ಓವರ್ಗಳಲ್ಲಿ 4 ವಿಕೆಟ್ಗೆ 145
ಗರಿಷ್ಠ ವಿಕೆಟ್: ಅಭಿಷೇಕ್ ಸಕೂಜ, 14 ವಿಕೆಟ್ (ಹುಬ್ಬಳ್ಳಿ)
ಗರಿಷ್ಠ ರನ್: ಮಯಾಂಕ್ ಅಗರ್ವಾಲ್, 265 ರನ್ (ಹುಬ್ಬಳ್ಳಿ)
ಸರಣಿಶ್ರೇಷ್ಠ: ಸ್ಟುವರ್ಟ್ ಬಿನ್ನಿ (ಬೆಳಗಾವಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications